VIP Mobile Number: ಮನೆಯಲ್ಲಿಯೇ ಕುಳಿತು ನಿಮಗೆ ಬೇಕಾದ VIP ಮೊಬೈಲ್ ನಂಬರ್ ಪಡೆಯುವ ವಿಧಾನ ಇಲ್ಲಿದೆ.
ನಮ್ಮಲ್ಲಿ VIP ಎನ್ನುವ ಫೀಲ್ ಯಾವಾಗಲೂ ಇದ್ಡೇ ಇರುತ್ತೆ. ಹಾಗಾಗಿ ಅದೇ ತರಹ ಬಟ್ಟೆ ಧರಿಸುವುದು, ವಿಐಪಿಗಳಂತೇ ವರ್ತಿಸುವುದು ಎಲ್ಲವನ್ನೂ ಮಾಡುವವರಿದ್ದಾರೆ. ಆ ಒಂದು ಸ್ಟಾಂಡರ್ಡ್ ಮೈನ್ ಟೈನ್ ಮಾಡೋದು ಹಲವರಿಗೆ ಇಷ್ಟ. ಅಷ್ಟೇ ಅಲ್ಲ, ಒಂದು ಫೋನ್ ನಂ ನಲ್ಲಿಯೂ ಕೂಡ ವಿಐಪಿ ನಂ. ಬೇಕು ಎಂದೇ ಜನ ಬಯಸುತ್ತಾರೆ.
ಹಾಗಾಗಿ ಸಾಕಷ್ಟು ಜನ VIP Mobile Number ಯನ್ನು ಹುಡುಕುತ್ತಲೇ ಇರುತ್ತಾರೆ. ಈಗ ನೀವು ಮನೆಯಲ್ಲಿ ಕುಳಿತು ನಿಮಗೆ ಬೇಕಾದ ವಿಐಪಿ ಸಂಖ್ಯೆಯನ್ನು ಪಡೆದುಕೊಳ್ಳಬಹುದು. ನಿಮಗೂ ಕೂಡ ವಿಐಪಿ ಸಂಖ್ಯೆ ಪಡೆದುಕೊಳ್ಳಲು ಇಷ್ಟ ಇದಿಯಾ ಹಾಗಾದ್ರೆ ನೀವು ವಿಐ (ವಡಾಫೋನ್-ಐಡಿಯಾ) ಬಳಕೆದಾರರಾಗಿದ್ರೆ ನೀವು ಮನೆಯಲ್ಲಿಯೇ ಕುಳಿತು ಸುಲಭವಾಗಿ ಫ್ಯಾನ್ಸಿ ಸಿಮ್ ನಂಬರ್ ಪಡೆಯಬಹುದು.
ವಿಐಪಿ ನಂಬರ್ ಪಡೆಯುವುದು ಹೇಗೆ?
ನೀವು ಬಯಸಿದ ಫೋನ್ ನಂಬರ್ ಪಡೆಯಲು ಈಗ ಸಾವಿರಾರು ರೂಪಾಯಿಗಳನ್ನ ಖರ್ಚು ಮಾಡಬೇಕಾಗಿಲ್ಲ. ವೊಡಾಫೋನ್ ಐಡಿಯಾ ಬಳಕೆದಾರರು ಮನೆಯಲ್ಲಿಯೇ ಕುಳಿತು ಈ ಸಂಖ್ಯೆಯನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಮೊದಲು ವಿಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ಹೊಸ ಕನೆಕ್ಷನ್ ಹಾಗೂ ಫ್ಯಾನ್ಸಿ ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಪಿನ್ ಕೋಡ್ ಹಾಗೂ ಮೊಬೈಲ್ ನಂಬರ್ ಅನ್ನು ಹಾಕಬೇಕು. ಬಳಿಕ ಉಚಿತ ಪ್ರೀಮಿಯಂ ಮೊಬೈಲ್ ಸಂಖ್ಯೆಗಳ ಪಟ್ಟಿಯಲ್ಲಿ ನಿಮಗೆ ಬೇಕಾದ ಸಂಖ್ಯೆಯನ್ನು ಆರಿಸಿಕೊಳ್ಳಬಹುದು. ಈ ಪ್ರಕ್ರಿಯೆ ನಂತರ ನಿಮ್ಮ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೋದಿಸಿದ ಬಳಿಕ ವಿಐಪಿ ಸಂಖ್ಯೆ ನಿಮಗೆ ಸಿಗುತ್ತದೆ.
ಪ್ರಸ್ತುತ ಈ ರೀತಿ ವಿಐಪಿ ಸಂಖ್ಯೆಯನ್ನು ಮನೆಯಲ್ಲಿ ಕೂತು ಕೇವಲ ವಿ ಐ ಬಳಕೆದಾರರು ಮಾತ್ರ ಪಡೆಯಲು ಸಾಧ್ಯ. ಇದಕ್ಕಾಗಿ ಗ್ರಾಹಕರಿಗೆ ಕಂಪನಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ.