ಬಹುತೇಕ ಇದು ಎಲ್ಲರೂ ಕಂಪ್ಯೂಟರ್ ಬಳಕೆ ಮಾಡೇ ಮಾಡುತ್ತಾರೆ. ಸಾಫ್ಟ್ವೇರ್ ಇರಬಹುದು ಅಥವಾ ಇತರ ಯಾವುದೇ ಕೆಲಸ ಇರಬಹುದು ಕಂಪ್ಯೂಟರ್ ಒಂದು ಇದ್ದರೆ ಸಾಕು ಹಲವಾರು ಕೆಲಸಗಳು ಫಟ್ ಫಟ್ ಅಂತ ಆಗಿಬಿಡುತ್ತವೆ. ಕಂಪ್ಯೂಟರ್ ಇರಬಹುದು ಅಥವಾ ಲ್ಯಾಪ್ಟಾಪ್ ಇರಬಹುದು ಅವುಗಳಲ್ಲಿ ಕೀಬೋರ್ಡ್ ಬಳಾಸಿ ಕೆಲಸ ಮಾಡುತ್ತೇವೆ. ಇನ್ನು ಕೀಬೋರ್ಡ್ ನಲ್ಲಿ ಸುಲಭವಾಗಿ ಕೆಲಸ ಮಾಡಲು Enter, shift, Alt ಹಾಗೂ Ctrl ಮೊದಲಾದ ಕೀಗಳು ಇರುತ್ತವೆ. ಹಾಗಾದ್ರೆ ಮುಖ್ಯವಾಗಿ ಈ ಕೀ ಗಳ ಕೆಲಸ ಏನು ಗೊತ್ತಾ. ಕಂಪ್ಯೂಟರ್ ಬಳಸುವ ಹಲವರಿಗೆ ಕೀಬೋರ್ಡ್ ಶಾರ್ಟ್ ಕಟ್ ಗಳ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ.
ಕೀಬೋರ್ಡ್ ನಲ್ಲಿ ಶಾರ್ಟ್ ಕಟ್ ಆಗಿ Shift ಎನ್ನುವ ಕೀಯನ್ನು ಬಳಸುತ್ತಾರೆ. Shift ಪ್ರೆಸ್ ಮಾಡಿ ಅದರ ಜೊತೆಗೆ ಬೇರೆ ಇನ್ನೊಂದು ಕೀ ಪ್ರೆಸ್ ಮಾಡಿದರೆ ನಮಗೆ ಬೇಕಾಗಿರುವ ವಿಂಡೋ ತೆಗೆದುಕೊಳ್ಳುತ್ತದೆ ಅಥವಾ ಫೋಲ್ಡರ್ ಕ್ರಿಯೇಟ್ ಆಗುತ್ತದೆ ಇಂತಹ ಹಲವಾರು ಶಾರ್ಟ್ ಕಟ್ ಮಾಡಿಕೊಳ್ಳಬಹುದು. ಉದಾಹರಣೆಗೆ ಶಿಫ್ಟ್ ಪ್ಲಸ್ ಹೋಂ (shift+home) ಒತ್ತಿದರೆ ಹೋಂ ಸ್ಕ್ರೀನ್ ನಲ್ಲಿ ಟೆಕ್ಸ್ಟ್ ಗಳು ಹೈಲೈಟ್ ಆಗುವಂತೆ ಮಾಡಬಹುದು.
Shift ನ ಎರಡು ಕೀ ಗಳು:
ಕಂಪ್ಯೂಟರ್ ನಲ್ಲಿ ಎರಡು ಶಿಫ್ಟ್ ಕೀ ಯಾಕೆ ಇರುತ್ತೆ ಅನ್ನುವುದರ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಕೀಬೋರ್ಡ್ ನಲ್ಲಿ ಕೊಡಲಾಗುವ ಎರಡು ಶಿಫ್ಟ್ ಗಳೂ ಕೂಡ ಒಂದೇ ಕೆಲಸ ಮಾಡುತ್ತವೆ. ಶಿಫ್ಟ್ ಅನ್ನು ಹಿಡಿದು ನೀವು ಅಪ್ಪರ್ ಕೇಸ್ ಅಂದರೆ ಇಂಗ್ಲೀಷಿನ ದೊಡ್ಡ ಅಕ್ಷರಗಳನ್ನು ಟೈಪ್ ಮಾಡಬಹುದು ಅಥವಾ ಪರ್ಯಾಯ ಅಕ್ಷರಕ್ಕಾಗಿಯೂ ಬಳಸಬಹುದು.
ಶಿಫ್ಟ್ ಕೀಯ ಇತರ ಬಳಕೆ ಅಂದರೆ ಶಿಫ್ಟ್ ಅನ್ನು ಪ್ರೆಸ್ ಮಾಡಿ ಹಿಡಿದು ನೀವು ರೀ-ಸೈಕಲ್ ನಿಂದ ಬೇಕಾಗುವ ಫೈಲ್ ಅನ್ನು ಪುನಃ ಪಡೆಯಬಹುದು. ಅಲ್ಲದೆ ನೀವು ಯಾವುದಾದರು ಫೈಲ್ ಸೆಲೆಕ್ಟ್ ಮಾಡುವುದಿದ್ದರೆ ಅಥವಾ ಫೋಟೋ ಸೆಲೆಕ್ಟ್ ಮಾಡುವುದಿದ್ದರೆ ಶಿಫ್ಟ್ ಬಳಸಿ ಮೌಸ್ ಮೂಲಕ ಕೆಲಸ ಮಾಡಬಹುದು.