Karnataka Times
Trending Stories, Viral News, Gossips & Everything in Kannada

Tower AC: ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವಾಗ ಹಾಕಿದ್ದ ಈ AC ಗೆ ಭಾರಿ ಬೇಡಿಕೆ! ಬೆಲೆ ಇಷ್ಟು ಮಾತ್ರ

advertisement

ಮಾನ್ಸೂನ್ ಶುರುವಾದರೂ ಕೂಡ ಇಂದಿಗೂ ಬಿಸಿಲಿನ ಪ್ರಭಾವ ಕಡಿಮೆಯಾಗಿಲ್ಲ ರಾಜಧಾನಿ ದೆಹಲಿ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಇನ್ನು ಹೆಚ್ಚಾಗಿ ಇದೆ. ಈ ಕಾರಣದಿಂದಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೂ ಕಾಡುತ್ತಿದ್ದ ಬಿಸಿಲಿನ ಶಾಖದಲ್ಲಿ ಶಾಸಕರನ್ನು ತಣ್ಣಗಿರಿಸಲು ಪೋರ್ಟೆಬಲ್ ಟವರ್ ಎಸಿಯನ್ನು (Portable Tower AC) ಅಳವಡಿಕೆ ಮಾಡಿದ್ದರು. ಹೀಗೆ ಅಲ್ಲಿ ನೆರೆದಿದ್ದವರನ್ನು ಅತ್ಯುತ್ತಮ ಕೂಲಿಂಗ್ ನಿಂದ ಬಹಳ ತಣ್ಣಗಿರಿಸಿದ್ದಂತಹ ಈ ಟವರ್ ಎಸಿ (Tower AC) ಕುರಿತಾದಂತಹ ಸಾಕಷ್ಟು ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದು, ಇದರ ವೈಶಿಷ್ಟ್ಯತೆಗಳ (Features) ಕುರಿತು ಮಾಹಿತಿ ತಿಳಿದಂತಹ ಗ್ರಾಹಕರು ಖರೀದಿ ಮಾಡಲು ಉತ್ಸಾಹರಾಗಿದ್ದಾರೆ.

ಪೋರ್ಟೆಬಲ್ ಟವರ್ ಎಸಿ ಎಂದರೇನು?

ಹೆಸರು ಸೂಚಿಸುವಂತೆ ಗೋಪುರದಾಕಾರದ ವಿನ್ಯಾಸದಲ್ಲಿ ತಯಾರು ಮಾಡಲಾಗುವ ಈ ಎಸಿಗಳನ್ನು ಟವರ್ ಎಸಿ (Tower AC) ಎಂದು ಕರೆಯಲಾಗುತ್ತದೆ. ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಅಳವಡಿಸಬಹುದು. ಇಂತಹದ್ದೇ ಜಾಗದಲ್ಲಿ ಇದನ್ನು ಅಳವಡಿಕೆ ಮಾಡಬೇಕೆಂಬ ಯಾವುದೇ ನಿಯಮವು ಇಲ್ಲ ಬದಲಿಗೆ ಒಳಾಂಗಣ ಹೊರಾಂಗಣ ಹಾಗೂ ಹೆಚ್ಚು ಜನರು ಕೂಡುವಂತಹ ಜಾಗಗಳಲ್ಲಿ ಅಳವಡಿಸಬಹುದು.

ಕಾರ್ಯವೈಖರಿ ಮತ್ತು ಬೆಲೆ:

 

Image Source: Times of India

 

advertisement

ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಶಿಫ್ಟ್ ಮಾಡುವ ಸಲುವಾಗಿ ಕೆಳಭಾಗದಲ್ಲಿ ಚಕ್ರಗಳನ್ನು ಅಳವಡಿಸಲಾಗಿದೆ, ಇದು ವರ್ಗಾವಣೆಗೆ ಸಹಕರಿಸುತ್ತದೆ. ಒಮ್ಮೆ ಟವರ್ ಎಸಿಯನ್ನು ಫಿಕ್ಸ್ ಮಾಡಿ ಸ್ವಿಚ್ ಆನ್ ಮಾಡಿದರೆ ಸಾಕು ಎಂತಹ ಸುಡುವ ಶಾಖವಿದ್ದರೂ ತನ್ನ ಅತ್ಯುತ್ತಮ ಕೂಲಿಂಗ್ ತಂತ್ರಜ್ಞಾನದಿಂದ ಸಂಪೂರ್ಣ ವಾತಾವರಣವನ್ನು ತಣ್ಣಗಿರಿಸುವಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ.

ಬರೋಬ್ಬರಿ ₹60,000 ರಿಂದ 2 ಲಕ್ಷಗಳ ರೇಂಜ್ ನಲ್ಲಿ ದೊರಕುವಂತಹ ಈ ಟವರ್ ಎಸಿ (Tower AC) ಯನ್ನು ವೋಲ್ಟಾಸ್ ಮತ್ತು ಬ್ಲೂ ಸ್ಟಾರ್ ಕಂಪನಿಗಳು (Voltas and Blue Star Company) ಪಾರ್ಟ್ನರ್ ಶಿಪ್ ನಲ್ಲಿ ತಯಾರು ಮಾಡಿದ್ದು, ಜನರು ಇದರ ಅತ್ಯುತ್ತಮ ಕಾರ್ಯಕ್ಷಮತೆಗೆ ಮನಸೋತು ಖರೀದಿ ಮಾಡಲು ಮುಂದಾಗಿದ್ದಾರೆ.

ಪೋರ್ಟೆಬಲ್ ಟವರ್ ಎಸಿಯ ಉಪಯೋಗಗಳು!

 

Image Source: Aaj Tak

 

  • ಇಂತಹ ಎಸಿಗಳು ಹೆಚ್ಚು ಜಾಗ ಹಿಡಿಯುವ ಕಾರಣ ಇದನ್ನು ಸಾಮಾನ್ಯವಾಗಿ ಕಾರ್ಪೊರೇಟ್ ಅಥವಾ ಸಭೆ ಸಮಾರಂಭಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ.
  • ಇದರಿಂದ ಬರುವಂತಹ ಗಾಳಿಯ ಅರಿವು ಬಹಳ ಉತ್ತಮವಾಗಿರುವುದು, ಎಂತಹ ಸುಡುವಂತಹ ಶಕೆ ಬಿಸಿಲಿದ್ದರು ಸಹ ಇದರ ತಂಪಾದ ಗಾಳಿಗೆ ಎಂತವರಾದರೂ ತಣ್ಣಗಾಗಿ ಬಿಡುತ್ತಾರೆ.
  • ಅತ್ಯುತ್ತಮ ಕೂಲಿಂಗ್ (Amazing Cooling) ವಿಜ್ಞಾನದಲ್ಲಿ ತಯಾರು ಮಾಡಲಾಗಿರುವ ಟವರ್ ಎಸಿಯನ್ನು ಖರೀದಿಸುವ ಸಂದರ್ಭದಲ್ಲಿ ಕಂಪನಿಯ ಸಿಬ್ಬಂದಿಗಳನ್ನು ಕರೆಸಿ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದಾದ ಸೌಲಭ್ಯವು ಇದೆ.

advertisement

Leave A Reply

Your email address will not be published.