Iphone Actual Price: 1 ಲಕ್ಷ ಬೆಲೆಯ ಐಫೋನ್ ತಯಾರಿಗೆ ನಿಜವಾಗಿ ಎಷ್ಟು ಖರ್ಚಾಗುತ್ತದೆ? ಇಲ್ಲಿದೆ ಅಸಲಿ ಸತ್ಯ

Advertisement
ಐಫೋನ್(Iphone)….! ಹೆಸರೇ ಅತೀ ದುಬಾರಿ, ವಿಶ್ವಾದ್ಯಂತ ಯಾವುದಾದರೂ ದುಬಾರಿ ಗೆಜೆಟ್ ಅತೀ ಹೆಚ್ಚು ಮಾರಾಟವಾಗುತ್ತಿದ್ದರೆ ಅದು ಐಫೋನ್ ಮಾತ್ರ. ಆಪಲ್ ಕಂಪೆನಿ(Apple Compony) ಯಾವುದೇ ಹೊಸ ಐಫೋನ್ ಬಿಡುಗಡೆ ಮಾಡಿದರೂ ಆ ಮೊಬೈಲ್ ಬೆಲೆ ಗಗನ ತಲುಪಿರುತ್ತದೆ.ಇತ್ತೀಚೆಗಷ್ಟೇ ಹೊಸ ಐ ಫೋನ್ iPhone 14 Pro ಬಿಡುಗಡೆ ಮಾಡಿದ್ದಾರೆ .
ಇದರ ಬೆಲೆ 1.30 ಲಕ್ಷ .ಐಫೋನ್ ಎಷ್ಟು ದುಬಾರಿಯೋ ಅಷ್ಟೆ ಉತ್ತಮ ಫೀಚರ್ಗಳನ್ನು(Features) ಕೂಡಾ ಹೊಂದಿದೆ. ಆದ ಕಾರಣದಿಂದಲೇ ಎಷ್ಟೆ ದುಬಾರಿಯಾದರು ಕೂಡಾ ಅವುಗಳನ್ನು ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಐಫೋನ್ ಎಂದರೆ ಒಂದು ಸ್ಟೇಟಸ್ ಎನ್ನುವಷ್ಟು ಮಟ್ಟಿಗೆ ಜನರಲ್ಲಿ ಐಫೋನ್ ಕ್ರೇಜ್ ಹೆಚ್ಚಿದೆ.
ಆದರೆ ನಮಗೆಲ್ಲರಿಗೂ ತಿಳಿದಿದೆ. ಯಾವುದೇ ಪೋನ್ ತಯಾರಿಕೆ ಬೆಲೆ ಅಷ್ಟಾಗಿರಲು ಸಾಧ್ಯವೇ ಇಲ್ಲ, ಆದರೆ ಆ ಬ್ರ್ಯಾಂಡ್(Brand) ಆಧಾರದ ಮೇಲೆ ಬೆಲೆ ಏರಿಕೆಯಾಗುತ್ತದೆ.ಇಂದು ನಾವು ನಿಮಗೆ ಹೇಳುವ ಈ ಸುದ್ದಿಯನ್ನು ಕೇಳಿದರೆ ಆಪಲ್ ಕಂಪೆನಿಯ ಐಫೋನ್ಗೆ ಅಷ್ಟೊಂದು ಹಣ ಕೊಡಬೇಕೆ ಎಂದು ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಹೌದು, ಟೆಕ್ ವೆಬ್ಸೈಟ್ ಸಂಸ್ಥೆಯೊಂದು 2/ 3 ವರ್ಷದ ಹಿಂದೆ ಬಿಡುಗಡೆಯಾದ. 1 ಲಕ್ಷ ರೂ. ಗೆ ಮಾರಾಟವಾಗುತ್ತಿರುವ ಐಫೋನ್ ಎಕ್ಸ್(Iphone X) ಬೆಲೆ ಎಷ್ಟಿರಬಹುದು ಎಂದು ಅಂದಾಜು ಮಾಡಿದ್ದಾರೆ. ಆ ಸಂಸ್ಥೆ ಅಂದಾಜು ಮಾಡಿರುವ ಮೊತ್ತ ಎಷ್ಟಿದೆ ನೋಡೋಣ ಬನ್ನಿ
Advertisement
ಆ ವೆಬ್ಸೈಟ್ ಹೇಳುವಂತೆ ಐಫೋನ್ ಎಕ್ಸ್ ತಯಾರಿಕೆಗೆ ಆಗಿರುವ ವೆಚ್ಚ ಕೇವಲ 23,200 ರೂ.ಗಳು.ಹೌದು ..ಡಿಸ್ಪ್ಲೇಗೆ 65.50 ಡಾಲರ್!! ಐಫೋನ್ ಎಕ್ಸ್ ನಲ್ಲಿ ಬಳಸಲಾದ 5.8 ಇಂಚಿನ ಎಡ್ಜ್- ಟು- ಎಡ್ಜ್ ಡಿಸ್ಪ್ಲೇಗೆ 65.50 ಡಾಲರ್ಗಳು ಖರ್ಚಾಗುತ್ತದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಕೇವಲ 4,300 ರೂ.
ಇನ್ನು ಐಫೋನ್ 8 ರಲ್ಲಿ ಬಳಕೆಯಾಗಿರುವ ಡಿಸ್ಪ್ಲೇಗೆ ಕೇವಲ 36 ಡಾಲರ್ ಗಳಾಗುತ್ತದೆ. . ಅಂದರೆ ಭಾರತದ ರೂಪಾಯಿಗಳಲ್ಲಿ ಕೇವಲ 2,300 ರೂ.
ಸುತ್ತಿಗೆಯಲ್ಲಿ ಹೊಡೆದರೂ ಕೂಡಾ ತಡೆದುಕೊಳ್ಳುವ ಶಕ್ತಿ ಹೊಂದಿರುವ ಐಫೋನ್ ಎಕ್ಸ್ನಲ್ಲಿ ಬಳಕೆಯಾಗಿರುವ ಸ್ಟೈನ್ಲೆಸ್ ಸ್ಟೀಲ್ ಚಾಸಿಗೆ 36 ಡಾಲರ್ ಅಂದರೆ ಭಾರತದ ರೂಪಾಯಿಗಳಲ್ಲಿ ಕೇವಲ2,300 ರೂ.ಅಂತೆ!!ಸಾಮಾನ್ಯ ಮೊಬೈಲ್ ತಾಯಾರಿಕೆಯ ಎರಡಷ್ಟು ಹಣವನ್ನು ಆಪಲ್ ಎಕ್ಸ್ ಚಾಸಿಗೆ ಬಳಸಲಾಗಿದೆ.!!
ಐಫೋನ್ ಎಕ್ಸ್ನಲ್ಲಿ ಸೂಪರ್ ಅಮೊಲೆಡ್ ಟೆಕ್ನಾಲಜಿ(Technology) ಬಳಕೆ ಮಾಡಲಾಗಿದು, ಇದಕ್ಕಾಗಿ 3ಸಾವಿರದಿಂದ 4 ಸಾವಿರ ರೂ. ಖರ್ಚಾಗಬಹುದು ಎಂದು ಟೆಕ್ ವೆಬ್ಸೈಟ್ ಲೆಕ್ಕಹಾಕಿದೆ.!!.ಇನ್ನು ಟೆಕ್ಸೈಟ್ ಲೆಕ್ಕಹಾಕಿದಂತೆ ಒಂದು ಐಫೋನ್ ತಯಾರಿಕೆಗೆ ಸರಾಸರಿ23,200 ರೂ.ಗಳು. ಖರ್ಚಾಗುತ್ತದೆ.
ಈ ಐಫೋನ್ ಎಕ್ಸ್ ವರದಿಗೆ ಸಂಬಂಧಿಸಿದಂತೆ ಆಪಲ್ ಕಂಪೆನಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿತ್ತು.ಅಂದರೆ ನಾವು ಐಫೋನ್ ತಯಾರಿಕಾ ಬೆಲೆಗಿಂತ ದುಪ್ಪಟ್ಟು ಹಣ ನೀಡಿ ಐಫೋನ್ ಖರೀದಿ ಮಾಡುತ್ತಿದ್ದೆವೆ ಎಂಬೂದಂತೂ ಸತ್ಯ.
Advertisement