PhonePe: ATM ಕಾರ್ಡ್ ಇಲ್ಲದೇ ಫೋನ್ ಪೇ ಆಕ್ಟಿವೇಟ್ ಮಾಡುವ ವಿಧಾನ ಇಲ್ಲಿದೆ

Advertisement
ಇತ್ತೀಚಿನ ದಿನದಲ್ಲಿ ಸಣ್ಣ ಸಣ್ಣ ವಸ್ತು ಖರೀದಿಗೂ ಆನ್ ಲೈನ್ ಪೇಮೆಂಟ್ (Online payment) ಬಳಸುತ್ತೇವೆ, ಯಾವುದೇ ಬಿಲ್ಗಳನ್ನ ಅಧಿಕೃತ ಆ್ಯಪ್ಗಳ ಮೂಲಕ ಆನ್ಲೈನ್ನಲ್ಲಿ ಪಾವತಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪೋನ್ ಪೇ,ಗೂಗಲ್ ಪ್ರತಿ ವೈವಾಟಿನಲ್ಲಿ ಬಹಳ ಮುಖ್ಯ, ಆದರೆ ಈ ಸಮಯದಲ್ಲಿ ಪ್ರತಿಯೊಬ್ಬರಲ್ಲಿ ಈ ಡೆಬಿಟ್ ಕಾರ್ಡ್ (Debit Card) ಪಡೆಯಲು ಸಾಧ್ಯವಿಲ್ಲ, ಇದಕ್ಕಾಗಿ ಹೊಸ ಯೋಜನೆ ಸಕ್ರಿಯ ಗೊಳಿಸಬಹುದು.
Debit Card ಇಲ್ಲದೆ ಸಕ್ರಿಯಗೊಳಿಸಿ:
ನೂತನ ನವೀಕರಣದ ಪ್ರಕಾರ Debit Card ಇಲ್ಲದೆ ಕೇವಲ ಆಧಾರ್ ಕಾರ್ಡ್ ನಂಬರ್ ಅನ್ನು ಬಳಸಿಕೊಂಡು ಫೋನ್ ಪೇಯನ್ನು ಸಕ್ರಿಯಗೊಳಿಸಿಕೊಳ್ಳಬಹುದು, PhonePe ಅಪ್ಲಿಕೇಶನ್ ಬಳಸಿಕೊಂಡು ಆಧಾರ್ OTP ದೃಢೀಕರಣದ ಮೂಲಕ UPI ಸೇವೆಗಳನ್ನು ಸಕ್ರಿಯಗೊಳಿಸಬಹುದು. ಇಲ್ಲಿ ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳ ಅಗತ್ಯವಿಲ್ಲ. ಆದಾರ್ ಕಾರ್ಡ್ ಒಂದಿದ್ದರೆ ಸಾಕು, ಈ ನಿಟ್ಟಿನಲ್ಲಿ ಬಳಕೆದಾರರಿಗೆ ಇದು ಸಹಾಯಕವಾಗಲಿದೆ.
Advertisement
ಕಾರ್ಯ ವಿಧಾನ ಹೇಗೆ:
ಮೊದಲಿಗೆ PhonePe ಆಪ್ ಅನ್ನು ನಿಮ್ಮ ಆಂಡ್ರಾಯ್ಡ್ ನಲ್ಲಿ ಓಪನ್ ಮಾಡಿ, ಪಾವತಿಯ ಟ್ಯಾಬ್ ಅಡಿಯಲ್ಲಿ, ಬ್ಯಾಂಕ್ ಖಾತೆಯನ್ನು ಸೇರಿಸಿ , ನಂತರ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಿ ನಂತರದಲ್ಲಿ ಓಟಿಪಿಯನ್ನು ಎಂಟರ್ ಮಾಡಿ ಮೊಬೈಲ್ ನಂಬರ್ ಅನ್ನು ದೃಢೀಕರಿಸಬೇಕು. ನಿಮ್ಮ ಬ್ಯಾಂಕ್ ವಿವರಗಳನ್ನು ಯುಪಿಐ ಗೆ ಲಿಂಕ್ ಮಾಡಬೇಕು, ನಂತರ ಆಧಾರ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಲು ಆಪ್ಷನ್ ದೊರೆಯುತ್ತದೆ, ಈ ನಿಟ್ಟಿನಲ್ಲಿ ನಿಮ್ಮ ಯುಪಿಐ ಸೇವೆಯನ್ನು ಸಕ್ರಿಯಗೊಳಿಸಬಹುದು.
ಮನಿ ಟ್ರಾನ್ಸಪರ್ ಅಪ್ಲಿಕೇಷನ್ ಗಳ ದರ್ಬಾರು ಹೆಚ್ಚಳ:
ಹೆಚ್ಚಾಗಿ ಮೊಬೈಲ್ ನಲ್ಲಿರುವ ಪೋನ್ ಪೇ, ಗೂಗಲ್ ಪೇ ಅಪ್ಲಿಕೇಷನ್ ಗಳ ಮೂಲಕ ಸುಲಭವಾಗಿ ತಮ್ಮ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಸದ್ಯಕ್ಕೆ, ಈ ಆಪ್‌ಗಳನ್ನು ಬಳಸಿ ನಡೆಸಸುತ್ತಿರುವ ವಹಿವಾಟುಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ವರದಿಗಳ ಪ್ರಕಾರ, ಗೂಗಲ್ ಪೇ ಮತ್ತು ಫೋನ್ ಪೇ ಸುಮಾರು ಶೇ 80 ಮಾರುಕಟ್ಟೆ ಪಾಲನ್ನು ಹೊಂದಿವೆ ಎಂದು ವರದಿ ಮಾಡಿವೆ.ಈ ನಿಟ್ಟಿನಲ್ಲಿ ಈ ವಹಿವಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Advertisement