ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ChatGPT ಬಗ್ಗೆ ಹೆಚ್ಚು ಸುದ್ದಿಗಳು ಕೇಳಿಬರುತ್ತದೆ. ಅಷ್ಟಕ್ಕೂ ಚಾಟ್ಜಿಪಿಟಿ ಎಂಬುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುವಂತಹ ತಂತ್ರಜ್ಞಾನ.
ಈ ChatGPT ಎಂದರೆ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
- ಚಾಟ್ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧನಾ ಸಂಸ್ಥೆ Open AI ಅಭಿವೃದ್ಧಿಪಡಿಸಿದ ಎಐ ಬೆಂಬಲಿತ ಚಾಟ್ಬಾಟ್ ಆಗಿದೆ.
- ಈ ಚಾಟ್ಬಾಟ್ ನಾವು ಕೇಳುವಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ.
- ಇದು ಕೇಳುಗನ ಪ್ರಶ್ನೆಗೆ ನಿಖರವಾಗಿ ಉತ್ತರಿಸುತ್ತದೆ. ಭಾರತದ ಶ್ರೇಷ್ಠ ಕಾದಂಬರಿಕಾರ ಯಾರು ಎನ್ನುವುದರಿಂದ ಹಿಡಿದು ಬಾಳಿನ ಅರ್ಥವೇನು ಎಂಬಂತಃ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತದೆ.
- ಅಂದರೆ ಸಾಮಾನ್ಯವಾಗಿ ಸರ್ಚ್ ಇಂಜಿನ್ ಗಳು ನೀಡುವಂತ ಉತತರವನ್ನೆ Chat GPT ಕೂಡಾ ನೀಡುತ್ತದೆ. ಆದರೆ ಸರ್ಚ್ ಇಂಜಿನ್ಗಳಿಗಿಂತ ಉತ್ತಮವಾಗಿ, ನಿಖರವಾಗಿ , ಶೀಘ್ರವಾಗಿ ಇದು ಉತ್ತರ ನೀಡುತ್ತದೆ.
- ಇದು ಯಾವುದೇ ವಸ್ತು ವಿಷಯದ ಬಗ್ಗೆ ನಿಖರವಾಗಿ ಮಾಹಿತಿ ನೀಡುತ್ತದೆ. ದೊಡ್ಡ ದೊಡ್ಡ ಪ್ರಬಂಧ, ಲೇಖನ, ಕವಿತೆಯನ್ನು ಕೂಡಾ ಬರೆಯುತ್ತದೆ.
ಇದು ಕೋಡಿಂಗಗ್ ರೀತಿಯ ಯಾಂತ್ರಿಕ ಕೆಲಸವನ್ನು ಕೂಡಾ ಆರಾಮದಾಯಕವಾಗಿ ಮಾಡುತ್ತದೆ.
ಇದನ್ನು ಹೇಗೆ ತಯಾರಿಸಲಾಗಿದೆ:
ಲಕ್ಷಾಂತರ ಡೇಟಾವನ್ನು ಮನುಷ್ಯರ ಮೂಲಕ ಫೀಡ್ ಮಾಡಿಸಿ ಈ ತಂತ್ರಜ್ಞಾನವನ್ನು ರೂಪಿಸಲಾಗಿದೆ. ಇದಕ್ಕೆ ಫೀಡ್ ಮಾಡಲಾದ ವಿಷಯಗಳನ್ನು ಯಂತ್ರದ ಕಡೆಯಿಂದ ಸಂವಾದ ನಡೆಸಿ ಎರಡು ಕಡೆ ಸಂವಾಹನ ನಡೆಸುವ ರೀತಿಯಲ್ಲಿ ಫೀಡ್ ಮಾಡಿದ್ದಾರೆ. ಪರಿಣಿತರಾದ ಎಐ ಟ್ರೈನರ್ ಗಳು ಇದಕ್ಕೆ ಸಂವಾದ ರೂಪದಲ್ಲಿ ಸಾಧ್ಯವಿರಬಹುದಾದ ಎಲ್ಲಾ ಸಂವಾದಗಳನ್ನು, ಪ್ರಶ್ನೆಗಳನ್ನು ಫೀಡ್ ಮಾಡಿದ್ದಾರೆ.
ಮತ್ತೊಂದು ಮಹತ್ವದ ವಿಚಾರವೆಂದರೆ ಅಸುರಕ್ಷಿತವಾದ ಮತ್ತು ಹಾನಿಕಾರಕ ಪ್ರಶ್ನೆಗಳಿಗೆ ಉತ್ತರಿಸದಂತೆ ಕೂಡಾ ಫೀಡ್ ಮಾಡಲಾಗಿದ್ದು,
ಯಾವುದೇ ಜನಾಂಗೀಯ ದ್ವೇಷ, ಕೋಮುವಾದ, ಲಿಂಗಭೇಧ ವನ್ನು ಹೆಚ್ಚಿಸುವ ಸಲುವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸದಂತೆ ಸೂಚನೆ ನೀಡಲಾಗಿದ್ದು, ಆ ಕಾರಣಕ್ಕಾಗಿ ಇದು ನಿಖರವಾಗಿ ಉತ್ತರಿಸುತ್ತದೆ ಎನ್ನಲಾಗಿದೆ.
ChatGPT ಮನುಷ್ಯನ ಕೆಲಸವನ್ನು ಕಸಿದುಕೊಳ್ಳುತ್ತದೆಯೇ?
ಯಾವುದಾದರೂ ಹೊಸ ತಂತ್ರಜ್ಞಾನ ಆರಂಭವಾದಗ ಅಲ್ಲಿ ಮನಷ್ಯರ ಬದಲಾಗಿ ಆ ತಂತ್ರಜ್ಞಾನವನ್ನು ಬಳಸುವುದು ಸರ್ವೇ ಸಾಮಾನ್ಯ. ಚಾಟ್ ಜಿಪಿಟಿ , ಯಾಂತ್ರಕವಾದ ಮಾಹಿತಿಗಳನ್ನು ಅಕ್ಷರಕ್ಕೆ ಇಳಿಸುವ ಕೆಲಸವನ್ನು ಮಾಡಬಹುದು, ಆದರೆ ಆರ್ಟಿಫಿಷಲ್ ಇಂಡಲಿಜೆಂಟ್ ಎಂದಿಗೂ ಮನುಷ್ಯನನ್ನು ಮೀರಿಸುವ ಸಂದರ್ಭದ ಬರುವುದಿಲ್ಲ.