ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಜನರು ಸ್ಮಾರ್ಟ್ಫೋನ್ (Smartphone) ಮೂಲಕವೇ ಎಲ್ಲ ಕೆಲಸ ಮಾಡುತ್ತಾರೆ, ಅದರಲ್ಲೂ ಆನ್ಲೈನ್ ಪೇಮೆಂಟ್ ವಿಚಾರಕ್ಕೆ ಬರುವುದಾದರೆ ಬಹುತೇಕರು ಸ್ಮಾರ್ಟ್‌ಫೋನ್‌ನಲ್ಲಿ ಫೋನ್ ಪೇ (PhonePe), ಗೂಗಲ್ ಪೇ, ಪೇಟಿಎಂ ನಂತರ ಯುಪಿಐ ಆ್ಯಪ್ ಇನ್ಸ್ಟಾಲ್ ಮಾಡಿ ಅದರ ಮೂಲಕ ಹಣವನ್ನು ವರ್ಗಾವಣೆ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಆನ್ ಲೈನ್ ಪೇಮೆಂಟ್ ಗೆ ಹೊಂದಿಕೊಂಡಿರುತ್ತಾರೆ, ಆದರೆ ಕೆಲವೊಮ್ಮೆ ಕೂಡಲೇ ಹಣ ಬೇಕಾಗಿರುತ್ತದೆ. ಎಟಿಎಮ್ ಇಲ್ಲ ಅನ್ನೊ ಹಾಗೇ ತಲೆಕೆಡಿಸಿ ಕೊಳ್ಳಬೇಕಾಗಿಲ್ಲ, ಯುಪಿಐ ಬಳಸಿ ಹಣ ಪಡೆಯಬಹುದು.
ATM ಬಳಸದೇ ಆ್ಯಪ್ ಮೂಲಕ ಹಣ ಹಿಂಪಡೆಯುವುದು ಹೇಗೆ:
ಗೂಗಲ್ ಪೇ, ಫೋನ್ ಪೇ ಮೂಲಕ ಯುಪಿಐ ಆಧಾರಿತ ಅಪ್ಲಿಕೇಷನ್‌ಗಳ ಮೂಲಕವೇ ATM ನಲ್ಲಿ ಹಣವನ್ನು ಡ್ರಾ ಮಾಡಬಹುದು, ಜನರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಮರೆತರು ಅಥವಾ ಕಳೆದುಕೊಂಡರೂ, Google Pay, Paytm, PhonePe ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣ ಪಡೆಯಬಹುದು.
ವಿಧಾನ ಹೇಗೆ:
ನೀವು ಈ ಆ್ಯಪ್ ಮೂಲಕ 5 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ , ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯುಪಿಐ ಅಪ್ಲಿಕೇಶನ್ ತೆರೆಯಿರಿ. ನಂತರ ಎಟಿಎಂ ಸ್ಕ್ರೀನ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ , ಬೇಕಿರುವ ಹಣವನ್ನು ಮೊಬೈಲ್‌ನಲ್ಲಿ ನಮೂದಿಸಿ. ನಂತರ ನಿಮ್ಮ ಯುಪಿಐ ಪಿನ್ ಸಂಖ್ಯೆಯನ್ನು ನಮೂದಿಸಿ, ಪ್ರೊಸೀಡ್ ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಆಯ್ಕೆ ಮಾಡಿದಷ್ಟು ಹಣ ವನ್ನು ಪಡೆಯಿರಿ, ಈ ಮೂಲಕ ಪ್ರಯಾಣದ ವೇಳೆ ಕಾರ್ಡ್ ಕೊಂಡೊಯ್ಯುವುದು ಅಥವಾ ಎಟಿಎಂ ಪಿನ್ ಸಂಖ್ಯೆ ನೆನಪಿಟ್ಟುಕೊಳ್ಳಬೇಕಾದ ಅಗತ್ಯವೂ ಇರುವುದಿಲ್ಲ. ಸುಲಭವಾಗಿ ನೀವು ಹಣ ಪಡೆಯಬಹುದು.