Karnataka Times
Trending Stories, Viral News, Gossips & Everything in Kannada

Electricity Bill: ಮನೆಗೆ 1.5 ಟನ್ AC ಹಾಕಿಸಿದರೆ ಎಷ್ಟು ಕರೆಂಟ್ ಬಿಲ್ ಬರುತ್ತೆ? ಇಲ್ಲಿದೆ ಲೆಕ್ಕಾಚಾರ

advertisement

ಅತ್ಯಂತ ಸೆಕೆ ಇರುವಂತಹ ಬೇಸಿಗೆ ಕಾಲದ ಸಂದರ್ಭದಲ್ಲಿ ಬೇರೆ ಯಾವುದೇ ಕೂಲಿಂಗ್ ಉಪಕರಣಗಳಿಗಿಂತ ಏಸಿ (AC) ಅತ್ಯಂತ ಪ್ರಮುಖವಾಗಿ ಪರಿಣಾಮ ಬೀರುವಂತಹ ಸಾಧನವಾಗಿರುತ್ತದೆ ಆದರೆ ಅದನ್ನು ಖರೀದಿಸುವುದು ಅಷ್ಟೊಂದು ಸುಲಭವಲ್ಲ ದುಬಾರಿ ಕೂಡ ಆಗಿರುತ್ತದೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು 1.5 ಟನ್ ಸಾಮರ್ಥ್ಯವನ್ನು ಹೊಂದಿರುವಂತಹ ಎಸಿಯ ಬಳಕೆಯಿಂದಾಗಿ ಎಷ್ಟು ವಿದ್ಯುತ್ ಬಿಲ್ (Electricity Bill) ಬರುತ್ತದೆ ಹಾಗೂ ಅದರ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಏನು ಮಾಡಬಹುದು ಅನ್ನೋದರ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಹೀಗಾಗಿ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಿ.

ಎಸಿ (AC) ನಿಮಗೆ ಒಂದು ಸ್ಟಾರ್ನಿಂದ ಪ್ರಾರಂಭವಾಗಿ ಐದು ಸ್ಟಾರ್ ವರೆಗೆ ರೇಟಿಂಗ್ (5 Star Rating) ಇರುವಂತಹ ಎಸಿ ಕೂಡ ಸಿಗುತ್ತದೆ. ವನ್ ಸ್ಟಾರ್ ಇರುವಂತಹ ಎಸಿ ಕಡಿಮೆ ಬೆಲೆಗೆ ಸಿಗಬಹುದು ಆದರೆ ಬೇರೆ ಏಸಿಗಳಿಗೆ ಹೋಲಿಸಿದರೆ ಇದು ವಿದ್ಯುತ್ ಬಳಕೆ ಹೆಚ್ಚಿರುತ್ತದೆ. ಇನ್ನು 5 ಸ್ಟಾರ್ ಹೊಂದಿರುವಂತಹ 1.5 ಟನ್ ಸಾಮರ್ಥ್ಯದ ಏಸಿಯ ವಿದ್ಯುತ್ ಬಳಕೆಯ ಬಗ್ಗೆ ಮಾತನಾಡುವುದಾದರೆ 0.8 kwh ಆಗಿರುತ್ತದೆ. ಅಂದ್ರೆ ರಾತ್ರಿ 8 ಗಂಟೆಯ ಸಮಯದವರೆಗೆ ಇದನ್ನು ಚಲಾಯಿಸುವುದರಿಂದಾಗಿ 6.4 ಯೂನಿಟ್ ವಿದ್ಯುತ್ ಅನ್ನು ನೀವು ಬಳಸಿದಂತಾಗುತ್ತದೆ.

advertisement

ಅಂದರೆ ಇದರಿಂದಾಗಿ ದಿನಕ್ಕೆ 48 ರೂಪಾಯಿ ಹಾಗೂ ತಿಂಗಳಿಗೆ 1500 ರೂಪಾಯಿಗಳ ಮಿನಿಮಮ್ ಬರುತ್ತದೆ. ಇದೇ ರೀತಿಯಲ್ಲಿ ಮೂರು ಸ್ಟಾರ್ ರೇಟಿಂಗ್ (3 Star Rating) ಹೊಂದಿರುವಂತಹ ಎಸಿಯನ್ನು ಇದೆ ಸಾಮರ್ಥ್ಯದ ಎಸಿಯ ಬಳಕೆಯ ಹೋಲಿಕೆಯಲ್ಲಿ ನೋಡಿದರೆ ತಿಂಗಳಿಗೆ ರೂ.2000 ಕರೆಂಟ್ ಬಿಲ್ ಬರುತ್ತದೆ.

ಎಸಿಯನ್ನು ಯಾವ ರೀತಿಯಲ್ಲಿ ನಿಯಂತ್ರಿಸುವ ಮೂಲಕ ಕರೆಂಟ್ ಬಿಲ್ ಕಡಿಮೆ ಮಾಡಬಹುದು?

 

Image Source: Times of India

 

  • ನೀವು ಸಾಮಾನ್ಯವಾಗಿ 18ರಿಂದ 20 ಡಿಗ್ರಿ ಟೆಂಪರೇಚರ್ನಲ್ಲಿ ಎಸ್ಸಿಯನ್ನು ಇಟ್ಟಿರುತ್ತೀರಿ ಇದರಿಂದಾಗಿ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತದೆ ಹಾಗೂ ವಿದ್ಯುತ್ ಬಿಲ್ (Electricity Bill) ಕೂಡ ಹೆಚ್ಚಾಗಿ ಬರುತ್ತದೆ ಅದಕ್ಕಾಗಿ 24 ರಿಂದ 25 ಡಿಗ್ರಿ ಟೆಂಪರೇಚರ್ ಸೆಟ್ ಮಾಡಿದ್ರೆ ಕಡಿಮೆ ವಿದ್ಯುತ್ ಬಳಕೆ ಆಗುತ್ತದೆ.
  • ಕೆಲವೊಮ್ಮೆ ಸ್ವಲ್ಪಮಟ್ಟಿಗೆ ಸೆಕೆ ಇದ್ದಾಗ ಫ್ಯಾನ್ ಅನ್ನು ನೀವು ಬಳಕೆ ಮಾಡುವುದರ ಮೂಲಕ ಎಸಿಯನ್ನು ಬಳಕೆ ಮಾಡಿದೆ ವಿದ್ಯುತ್ ಬಳಕೆಯನ್ನು ಉಳಿತಾಯ ಮಾಡಬಹುದಾಗಿತ್ತು ಇಲ್ಲಿ ಕೂಡ ಹಣದಲ್ಲಿ ಉಳಿತಾಯ ಮಾಡುವಂತಹ ಅವಕಾಶ ಇದೆ.
  • ಇನ್ನು ಎಸಿಯನ್ನು ನೀವು ಬಳಸುವಾಗ ಯಾವುದೇ ಕಾರಣಕ್ಕೂ ಬಾಗಿಲು ಅಥವಾ ಕಿಟಕಿಗಳನ್ನ ತೆರೆದಿಟ್ಟು ಬಿಸಿಲು ಒಳಗೆ ಬರೋ ಹಾಗೆ ಮಾಡಬೇಡಿ ಇದರಿಂದಾಗಿ ಎಸಿ ಆನ್ ಮಾಡಿ ಇಟ್ರು ಕೂಡ ಯಾವುದೇ ಪ್ರಯೋಜನ ಆಗೋದಿಲ್ಲ ಹಾಗೂ ಹೆಚ್ಚಿನ ವಿದ್ಯುತ್ ಬಳಕೆಯ ನಂತರ ಕೂಡ ರೂಂ ಕೂಲ್ ಆಗುವುದಿಲ್ಲ.

advertisement

Leave A Reply

Your email address will not be published.