Karnataka Times
Trending Stories, Viral News, Gossips & Everything in Kannada

Gold vs iPhone: 4 ವರ್ಷಗಳ ಹಿಂದೆ ಐಫೋನ್ ಬದಲು 10 ಗ್ರಾಮ್ ಬಂಗಾರ ಖರೀದಿಸಿದ್ದರೆ ಇಂದಿನ ಬೆಲೆ ಎಷ್ಟು ಗೊತ್ತಾ?

advertisement

Gold Vs iPhone: ಸಾರ್ವಕಾಲಿಕ ಹೂಡಿಕೆಯ ವಿಚಾರದಲ್ಲಿ ಖಂಡಿತವಾಗಿ ಪ್ರತಿ ಬಾರಿ ಕೂಡ ಚಿನ್ನದ ಮೇಲಿನ ಹೂಡಿಕೆ ಲಾಭದಾಯಕವಾಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬ ಪರಿಣಿತರು ಕೂಡ ಹೇಳುತ್ತಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹಳದಿ ಲೋಹ ಆಗಿರುವಂತಹ ಚಿನ್ನ ಇಡೀ ಭಾರತ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಕೂಡ ಅತ್ಯಂತ ಬೆಲೆ ಬಾಳುವಂತಹ ಹಾಗೂ ಆಪತ್ತಿನ ಕಾಲದಲ್ಲಿ ಆಪದ್ಬಾಂಧವನಂತೆ ಕಾಪಾಡುವಂತಹ ಒಂದು ಒಳ್ಳೆ ಹೂಡಿಕೆ ಆಗಿದೆ ಎಂದು ಹೇಳಬಹುದಾಗಿದೆ.

ಇನ್ನು ಕೈಗೆ ಹಣ ಸಿಕ್ರೆ ಸಾಕು ಶೋಕಿಯಾಗಿ ಬೇರೆ ಬೇರೆ ವಸ್ತುಗಳನ್ನು ಖರೀದಿಸುವ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಿ ಅದನ್ನು ಖರೀದಿ ಮಾಡಿದ್ರೆ ಖಂಡಿತವಾಗಿ ಮುಂದೊಂದು ದಿನ ನೀವು ಇದರ ಮೇಲೆ ಮಾಡಿರುವಂತಹ ಹೂಡಿಕೆಗೆ ಬದಲಾಗಿ ದೊಡ್ಡಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವಾಗ ಚಿನ್ನ ಭಾರತದ ಮಾರುಕಟ್ಟೆಯಲ್ಲಿ ಪರಿಚಿತವಾಯಿತು ಅವತ್ತಿನಿಂದ ಇವತ್ತಿನವರೆಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತದೆ.

Iphone VS GOLD

ಸದ್ಯದ ಮಟ್ಟಿಗೆ ಚಿನ್ನದ ಬೆಲೆಯಲ್ಲಿ ಏರಿಕೆ ಹಾಗೂ ಇಳಿಕೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಕಾರಣದಿಂದಾಗಿ ಬದಲಾವಣೆ ಆಗುವುದು ಆದರೆ ಒಂದು ವೇಳೆ ನೀವು 2014ರಲ್ಲಿ ಅಂದರೆ ಹತ್ತು ವರ್ಷಗಳ ಹಿಂದೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಈಗ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 70000 ಆಸು ಪಾಸಿನಲ್ಲಿ ಇರೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಅಂದಿನ ಆ  ಸಂದರ್ಭದಲ್ಲಿ ಕೈ ತುಂಬ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ಕೂಡ ನೀಡಿರಬಹುದಾಗಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಾಗಿದ್ರೆ ಬನ್ನಿ 2014ರಲ್ಲಿ ಅಂದರೆ ಹತ್ತು ವರ್ಷಗಳ ಹಿಂದೆ ಚಿನ್ನದ ಬೆಲೆ ಭಾರತದಲ್ಲಿ ಎಷ್ಟಿತ್ತು ಅನ್ನೋದನ್ನ ತಿಳಿಯೋಣ.

advertisement

2014ರಲ್ಲಿ ಭಾರತದಲ್ಲಿದ್ದ ಚಿನ್ನದ ಬೆಲೆ?

2014ರಲ್ಲಿ ಭಾರತದಲ್ಲಿ ಚಿನ್ನದ ಬೆಲೆ 24 ಕ್ಯಾರೆಟ್ 10 ಗ್ರಾಂ ಗೆ 28,000 ರೂಪಾಯಿಗಳ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಅದರ ಬೆಲೆ 72,000ಗಳ ಆಸು ಪಾಸಿನಲ್ಲಿ ಇದೆ ಅನ್ನೋದನ್ನ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ನಿಜಕ್ಕೂ ಎಷ್ಟು ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆ ಆಗಿದೆ ಅನ್ನೋದನ್ನ ನೀವು ಈ ಹತ್ತು ವರ್ಷಗಳಲ್ಲಿ ನಡೆದಿರುವಂತಹ ಈ ಬದಲಾವಣೆಯನ್ನು ನೋಡಿಕೊಂಡು ಅರ್ಥಮಾಡಿಕೊಳ್ಳಬಹುದಾಗಿದೆ.

Iphone VS GOLD
Image Source: Business Standard

2014 ರಲ್ಲಿ ಐಫೋನ್ 6 ಬಿಡುಗಡೆಯಾಗಿತ್ತು ಇದರ ಸೂರಂಬೈಕ ಬೆಲೆ ಸುಮಾರು 53500 ರೂ ಆಗಿತ್ತು ಅಂದರೆ ಆ ಸಮಯದಲ್ಲಿ ನೀವು ಐಫೋನ್ ಬದಲು ಬಂಗಾರ ಖರೀದಿ ಮಾಡಿದ್ದರೆ ಅಂದರೆ ಇಂದಿನ ದರಕ್ಕೆ ಹೋಲಿಸದರೆ ಸುಮಾರು 20 ಗ್ರಾಂ ಬಂಗಾರ ನಿಮ್ಮ ಬಳಿ ಇರುತ್ತಿತ್ತು. ಇನ್ನಾದ್ರೂ ಕೂಡ ಬುದ್ಧಿವಂತಿಕೆ ನ ತೋರಿಸಿ ಚಿನ್ನದ ಮೇಲೆ ಹಣವನ್ನ ಹೂಡಿಕೆ ಮಾಡಿ. ಐಫೋನ್ ಅನ್ನು ಇದೇ ಬೆಲೆಗೆ ಖರೀದಿಸಿ ನೀವು ಶೋಕಿ ಮಾಡಬಹುದು ಆದರೆ ಅದನ್ನು ಕಷ್ಟದ ಸಂದರ್ಭದಲ್ಲಿ ಸಹಾಯದ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯ ಇರುವುದಿಲ್ಲ ಹೀಗಾಗಿ ಚಿನ್ನದ ಮೇಲೆ ಮಾಡುವಂತಹ ನಿಮ್ಮ ಹೂಡಿಕೆ ನಿಮಗೆ ಭವಿಷ್ಯದಲ್ಲಿ ಖಂಡಿತವಾಗಿ ಲಾಭದಾಯಕವಾಗಿ ಪರಿಣಮಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.