Karnataka Times
Trending Stories, Viral News, Gossips & Everything in Kannada

UPI Transaction Limit: ಗೂಗಲ್ ಪೇ. ಫೋನ್ ಪೇ ಮೂಲಕ ಇನ್ಮೇಲೆ ಎಷ್ಟು ಹಣ ವರ್ಗಾವಣೆ ಮಾಡಬಹುದು! ಸರ್ಕಾರದ ಹೊಸ ನಿಗದಿ ಹೀಗಿದೆ

advertisement

ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್ಲೈನ್ ಯುಗವಾಗಿರುವ ಕಾರಣ ಒಂದು ರೂಪಾಯಿಯ ಬೆಂಕಿ ಪಟ್ಟಣವನ್ನು ಖರೀದಿಸಿದ ಅದಕ್ಕೂ ಕೂಡ ಸ್ಕ್ಯಾನ್ ಮಾಡಿ ಪೇಮೆಂಟ್ (Scan And Pay) ಮಾಡುವಷ್ಟರ ಮಟಕ್ಕೆ ನಾವೆಲ್ಲರೂ ಯುಪಿಐ ವರ್ಗಾವಣೆಯ ಮೇಲೆ ಅವಲಂಬನೆಗೊಂಡಿದ್ದೇವೆ. ಜೊತೆಗೆ ನಗದು ಹಣವನ್ನು ಬಳಕೆ ಮಾಡುವುದನ್ನು ತೀರ ಕಡಿಮೆ ಮಾಡಿದ್ದೇವೆ ಇಂತಹ ಸಂದರ್ಭದಲ್ಲಿ ಹಲವರಿಗೆ ಯುಪಿಐ ವರ್ಗಾವಣೆಯ ದಿನದ ಮಿತಿ (UPI Transaction Limit) ಎಷ್ಟಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹೀಗಿರುವಾಗ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (National Payment Corporation of India) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಈ ಕುರಿತಾದ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಾದ ಯುಪಿಐ ಪಾವತಿಗಳು:

 

Image Source: HT Tech

 

ಜಗತ್ತು ಆಧುನಿಕ ಗೊಳ್ಳುತ್ತಾ ಹೋದಂತೆ ಜನರು ಕೂಡ ಡಿಜಿಟಲ್ ಯುಗಕ್ಕೆ ಅಪ್ಡೇಟ್ ಆಗುತ್ತಿದ್ದು, ಇಂಟರ್ನೆಟ್ ಗಳ ಸಹಾಯದಿಂದ, ಯಾವುದೇ ವಸ್ತುಗಳನ್ನು ಖರೀದಿ ಮಾಡಿದ್ರು ಅದಕ್ಕೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (Unified Payment Interface) ಬಳಸಿ ಪಾವತಿಗಳನ್ನು ಮಾಡುತ್ತಿದ್ದೇವೆ.

ಹೀಗೆ ಕ್ಷಣಾರ್ಧದಲ್ಲಿ ನಮ್ಮ ಖಾತೆಯಲ್ಲಿ ಇರುವಂತಹ ಹಣವನ್ನು ಮತ್ತೊಬ್ಬರ ಖಾತೆಗೆ ಬದಲಿಸುವ ಸೌಲಭ್ಯವನ್ನು ಒದಗಿಸಿ ಕೊಟ್ಟಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ಮಿತಿಯನ್ನು ಇಂತಿಷ್ಟಕ್ಕೆ ನಿಗದಿಪಡಿಸಿದ್ದಾರೆ.

advertisement

ಸಾಮಾನ್ಯರ ಯುಪಿಐ ವಹಿವಾಟಿನ ಮಿತಿ:

 

Image Source: Jagran Josh

 

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಹಂಚಿಕೊಂಡಿರುವ ಅಧಿಕೃತ ವೆಬ್ಸೈಟ್ನ (NPCI Official Website) ಪ್ರಕಾರ, ಸಾಮಾನ್ಯ ಬಳಕೆದಾರರ ಯುಪಿಐ ಮಿತಿಯು ದಿನಕ್ಕೆ ಕೇವಲ ಒಂದು ಲಕ್ಷ ರೂಗಳಿರಲಿದೆ ಇದಕ್ಕಿಂತ ಹೆಚ್ಚಿನ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಯುಪಿಐ ಮೂಲಕ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು NPCI ಸ್ಪಷ್ಟೀಕರಿಸಿದ್ದಾರೆ.

ಈ ನಿರ್ದಿಷ್ಟ ವರ್ಗಗಳಿಗೆ ಹೆಚ್ಚಿನ ಮಿತಿ!

ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಮಾನ್ಯರಿಗಿಂತ ಕೆಲ ನಿರ್ದಿಷ್ಟ ವರ್ಗಗಳಾದ ಬಂಡವಾಳ ಮಾರುಕಟ್ಟೆಗಳು, ಸಂಗ್ರಹಣೆಗಳು, ಹೂಡಿಕೆಯ ವಿಭಿನ್ನ ಯೋಜನೆಗಳಿಗೆ ಯುಪಿಐ ಮಿತಿಯನ್ನು ಹೆಚ್ಚಿಸಿದ್ದು, ಈ ಕ್ಷೇತ್ರಗಳ ಯುಪಿಐ ಮಿತಿ ಎರಡು ಲಕ್ಷ ರೂಪಾಯಿಗಳು. IPO ಮತ್ತು ಇತರ ಯೋಜನೆಗಳಿಗೆ UPI ವಹಿವಾಟಿನ ಮಿತಿ (UPI Transaction Limit) ಯನ್ನು 5ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಗಳ ಯುಪಿಐ ಪಾವತಿಯ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಆದರೆ 2023ರ ಮುನ್ನ ಇದರ ಮಿತಿಯು ಕೇವಲ ಒಂದು ಲಕ್ಷ ರೂಪಾಯಿಗಳಿತ್ತು, ಆದರೆ ಹೆಚ್ಚಾದ ಬೆಲೆ ಏರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡುಬಂದ ಅಪಾರ ಬದಲಾವಣೆಗಳಿಂದಾಗಿ ಆರ್ಬಿಐ ಕೂಡ ಯುಪಿಐ ಮಿತಿಯನ್ನು ದುಪ್ಪಟ್ಟುಗೊಳಿಸಿದೆ.

advertisement

Leave A Reply

Your email address will not be published.