ನಾವು ಡಿಜಿಟಲಿ ಎಷ್ಟು ಸ್ಟ್ರಾಂಗ್ ಆಗುತ್ತಿದ್ದೆವೋ ಅಷ್ಟೇ ಸೈಬರ್ ವಂಚನೆಯ ಪ್ರಕರಣಗಳು ಕೂಡ ಹೆಚ್ಚು ದಾಖಲಾಗುತ್ತಿವೆ. ಸಾಮಾನ್ಯವಾಗಿ ಮೊಬೈಲ್ ಮೂಲಕವೇ ಹೆಚ್ಚು ಸೈಬರ್ ಪ್ರಕರಣಗಳು ನಡೆಯುತ್ತವೆ. ನಕಲಿ ಐಡಿ ಮೂಲಕ ಸಿಮ್ ಖರೀದಿ ಮಾಡಿ ಜನರನ್ನ ಮೋಸ ಮಾಡುವವರು ಹೆಚ್ಚಾಗಿದ್ದಾರೆ ನಿಯಮಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆಯನ್ನು ತಂದಿದೆ ಅರ್ಹ ಗ್ರಾಹಕರಿಗೆ ಮಾತ್ರ SIM Card ನೀಡಲಾಗುತ್ತದೆ. ಅದರಲ್ಲೂ ಆನ್ಲೈನ್ ಸಿಮ್ ನೀಡುವ ಸೌಲಭ್ಯ ಜಾರಿಗೆ ಬಂದಿದೆ.
ಸರ್ಕಾರದ ಈ ಹೊಸ ನಿಯಮದ ಪ್ರಕಾರ ಒಮ್ಮೆ ಸಿಮ್ ಪಡೆದುಕೊಂಡರೆ ಮತ್ತೆ ಅದೇ ಹೆಸರಿನಲ್ಲಿ SIM Card ಬೇರೆ ಜನ ಪಡೆದುಕೊಳ್ಳುವಂತಿಲ್ಲ. ಹಾಗೂ ಪರಿಶೀಲನೆ ಮಾಡದೆ ಯಾವುದೇ ವ್ಯಕ್ತಿಗೂ ಹೊಸ ಸಿಮ್ ನೀಡುವುದಿಲ್ಲ. ಇದಕ್ಕೆ ಆಧಾರ್ ಕಾರ್ಡ್ ಓಟಿಪಿ ಪ್ರಕ್ರಿಯೆಗಳು ಮೊದಲಾದ ದಾಖಲೆಗಳು ಬೇಕೆ ಬೇಕು.
ಇವರು SIM Card ಖರೀದಿಸುವಂತಿಲ್ಲ:
ಸಿಮ್ ಕಾರ್ಡ್ ನಿಯಮಗಳಲ್ಲಿ ಹೊಸ ಬದಲಾವಣೆ ಮಾಡಿದ ನಂತರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಸಿಮ್ ಕಾರ್ಡ್ ನೀಡುವ ಹಾಗಿಲ್ಲ. ಈಗಾಗಲೇ ತನ್ನ ಹೆಸರಿನಲ್ಲಿ ಮೂರಕ್ಕಿಂತ ಹೆಚ್ಚು ಸಿಮ್ ಹೊಂದಿರುವ ವ್ಯಕ್ತಿಗೆ ಮತ್ತೆ ಹೊಸ ಸಿಮ್ ನೀಡುವುದಾದರೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತದೆ. ಇನ್ನು ಮಾನಸಿಕ ಸ್ಥಿತಿ ಸರಿಯಿಲ್ಲದೆ ಇರುವವರಿಗೆ ಸಿಮ್ ಕಾರ್ಡ್ ನೀಡುವುದಿಲ್ಲ. ಕಳೆದ ವರ್ಷವೇ ಈ ನಿಯಮಗಳನ್ನು ಮಾಡಲಾಗಿದ್ದು ಸರ್ಕಾರ ಈಗ ಇದನ್ನ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶ ಹೊರಡಿಸಿದೆ.
ಆಧಾರ್ ಪರಿಶೀಲನೆ ನಂತರವಷ್ಟೇ ಸಿಮ್ ಲಭ್ಯ:
18 ವರ್ಷ ಮೇಲ್ಪಟ್ಟ ಜನರು SIM ಪಡೆಯುವುದಿದ್ದರೆ ಆಧಾರ್ ಕಾರ್ಡ್ ನ ಪರಿಶೀಲನೆ ಆಗಲೇಬೇಕು. ಆನ್ಲೈನ್ ಡಿಜಿ ಲಾಕರ್ ಮೂಲಕ ನಿಮ್ಮ ದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಲಾಗುತ್ತದೆ. ಈ ಮೇಲಿನ ನಿಯಮಗಳು ಕಳೆದ ವರ್ಷ ಸೆಪ್ಟೆಂಬರ್ 15ರಂದು ಕ್ಯಾಬಿನೆಟ್ ನಲ್ಲಿ ಅನುಮೋದನೆ ಮಾಡಲಾಗಿತ್ತು. ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಈ ನಿಯಮವನ್ನು ಇದೀಗ ಕಟ್ಟು ನೆಟ್ಟಾಗಿ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ. ಯುಐಡಿಎಐ ಆಧಾರಿತ ಕೆ ವೈ ಸಿ ಸೇವೆಯನ್ನು ಬಳಸಿ ಹೊಸ ಮೊಬೈಲ್ ಸಿಮ್ ನೀಡಲಾಗುತ್ತದೆ ಇದಕ್ಕೆ ಓಟಿಪಿ ನಮೂದಿಸಲೇಬೇಕು. ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಸೈಬರ್ ಕ್ರೈಂ ಸ್ವಲ್ಪಮಟ್ಟಿಗಾದರೂ ಹಿಡಿತಕ್ಕೆ ಬರಬಹುದು.