Karnataka Times
Trending Stories, Viral News, Gossips & Everything in Kannada

Vi Telecom: 299 ರೂ ಗೆ ಬಾಕಿ ಕಂಪನಿಗಳು ಬೆರಗಾಗುವ ಆಫರ್ ಕೊಟ್ಟ Vi ಟೆಲಿಕಾಂ

Advertisement

ಏರ್ಟೆಲ್, ಜಿಯೋ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಹೊಸ ಪ್ಲಾನ್ ಗಳನ್ನು ಪರಿಚಯಿಸಿದೆ. ಇದೀಗ ವಡಾಫೋನ್-ಐಡಿಯಾ ಗ್ರಾಹಕರಿಗೆ ಅತ್ಯುತ್ತಮವಾದ ಆಫರ್ (Offer) ಇರುವ ರಿಚಾರ್ಜ್ ಪ್ಲಾನ್ ನೊಂದಿಗೆ ಬಂದಿದೆ. ಬೇರೆ ಯಾವುದೇ ಪ್ಲಾನ್ ನಲ್ಲಿ ಇರದೇ ಇರುವಷ್ಟು ಆಫರ್ ಹಾಗೂ ಇಂಟರ್ನೆಟ್ (Internet) ಸೌಲಭ್ಯ ಇದರಲ್ಲಿ ಲಭ್ಯವಿದೆ.

ಸಾಮಾನ್ಯವಾಗಿ ಕೆಲವು ರಿಚಾರ್ಜ್ (Recharge) ಯೋಜನೆಯಲ್ಲಿ ದಿನಕ್ಕೆ ಒಂದರಿಂದ ನಾಲ್ಕು ಜಿಬಿವರೆಗೆ ಇಂಟರ್ನೆಟ್ (Internet) ಪಡೆಯಬಹುದು ಆದರೆ ನೀವು ಈ ಇಂಟರ್ನೆಟ್ ಖಾಲಿಯಾದ ನಂತರ ಮತ್ತೆ ಇಂಟರ್ನೆಟ್ ಗಾಗಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಅಂದರೆ ನಾಲ್ಕು ಜಿಬಿ ಡಾಟಾ ಖಾಲಿಯಾಗುವುದಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಇದರಿಂದ ನಿಮ್ಮ ಹಲವು ಕೆಲಸಗಳು ನಿಂತು ಹೋಗಬಹುದು ಅದರಲ್ಲೂ ಕಚೇರಿ ಕೆಲಸ ಮಾಡುವಾಗ ಇಂಟರ್ನೆಟ್ ಕೈಕೊಟ್ಟರೆ ಅದರಿಂದ ಆಗುವ ಸಮಸ್ಯೆ ಅಷ್ಟಿಷ್ಟಲ್ಲ. ಹಾಗಾಗಿ ಗ್ರಾಹಕರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವಿಐ (Vi) ವಿಶೇಷವಾದ ರಿಚಾರ್ಜ್ ಪ್ಲಾನ್ (Exclusive Recharge Plan) ಒಂದನ್ನು ಘೋಷಣೆ ಮಾಡಿದೆ.

299 ರೂಪಾಯಿಗಳ Vi Recharge Plan:

ಇದು 28 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ ಇದರಲ್ಲಿ ಸಂಪೂರ್ಣವಾದ ಅನಿಯಮಿತ ಧ್ವನಿ ಕರೆ ಉಚಿತವಾಗಿ ಸಿಗುತ್ತದೆ. ಇನ್ನು 1.5 ಜಿಬಿ ಇಂಟರ್ನೆಟ್ ಸೌಲಭ್ಯ ಇದೆ. ಹಾಗಾದ್ರೆ ಇದರಲ್ಲಿ ಡೇಟಾ ಅನಿಯಮಿತ ಹೇಗಾಗುತ್ತದೆ ಎಂಬುದು ನಿಮ್ಮ ಗೊಂದಲ ಆಗಿರಬಹುದು ಅದಕ್ಕೆ ಇಲ್ಲಿದೆ ಉತ್ತರ.

Binge All Night ಪ್ರಯೋಜನ:

ಅನಿಯಮಿತ ಡಾಟಾ ಆಫರ್ (Unlimited Data Offer) ಕುರಿತು ನಿಮಗೆ ಗೊಂದಲ ಉಂಟಾಗಿರಬಹುದು. ನೀವು ರಾತ್ರಿ ಹನ್ನೆರಡು ಗಂಟೆಯ ನಂತರ ಬೆಳಿಗ್ಗೆ 6:00ವರೆಗೆ ಯೋಜನೆಯ ಅನಿಯಮಿತ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಅಂದರೆ ಮಧ್ಯರಾತ್ರಿ 12 ಗಂಟೆಯ ನಂತರ ನಿಮಗೆ ಬೇಕಾದಷ್ಟು ಡಾಟಾವನ್ನು ಬಳಸಿಕೊಳ್ಳಬಹುದು ಆದರೆ ಇದಕ್ಕೆ ಪ್ರತ್ಯೇಕ ಹಣ ಖರ್ಚಾಗುವುದಿಲ್ಲ. ಈ ಅವಧಿಯಲ್ಲಿ ನೀವು ಡೌನ್ಲೋಡ್ (Download) ಮಾಡಿಕೊಳ್ಳುವುದು, ಚಲನಚಿತ್ರ ವೀಕ್ಷಿಸುವುದು, ವಿಡಿಯೋ ಕಾಲ್ ಮೊದಲಾದವುಗಳಿಗೂ ಹೆಚ್ಚಿನದಾಗಿ ಒಂದು ರೂಪಾಯಿಯನ್ನು ಕೂಡ ಪಾವತಿಸಬೇಕಾಗಿಲ್ಲ. 299 ರೂಪಾಯಿಗಳ ಯೋಜನೆ ಮಾನ್ಯತೆ ಇರುವವರೆಗೂ ಈ ಸೌಲಭ್ಯ ಲಭ್ಯವಿರುತ್ತದೆ. ಹಾಗಾಗಿ ಕಡಿಮೆ ವೆಚ್ಚದಲ್ಲಿ ಗ್ರಾಹಕರು ಹೆಚ್ಚಿನ ಇಂಟರ್ನೆಟ್ (Internet) ಪ್ರಯೋಜನವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದು.

Leave A Reply

Your email address will not be published.