ಸರ್ಕಾರಿ ಸ್ವಾಮ್ಯದಲ್ಲಿರುವ BSNL ಸಂಸ್ಥೆ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಕೂಡ ನಿಜಕ್ಕೂ ಬೀರಿರುವ ಪರಿಣಾಮ ಪ್ರಶಂಸಾರ್ಹವಾದದ್ದು ಎಂದು ಹೇಳಬಹುದಾಗಿದೆ. ಇಂದಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಬಿಎಸ್ಎನ್ಎಲ್ ಸಂಸ್ಥೆ ಕೊಡಲು ಹೊರಟಿರುವ ಹೊಸ ಪ್ಲಾನ್ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ತಿಳಿಯೋಣ ಬನ್ನಿ.
ಹೌದು ಐದು ತಿಂಗಳಿಗೆ ಕೇವಲ 397 ರೂಪಾಯಿಗಳ ರಿಚಾರ್ಜ್ ಪ್ಲಾನನ್ನು BSNL ಪರಿಚಯಿಸಲು ಹೊರಟಿದೆ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಬಿಎಸ್ಎನ್ಎಲ್ ಗ್ರಾಹಕರು ಬಿಎಸ್ಎನ್ಎಲ್ ಸಂಸ್ಥೆಯನ್ನು ನಂಬಿಕೊಂಡು ಬಂದಿದ್ದಾರೆ. ಹೀಗಾಗಿ ಗ್ರಾಹಕರ ರುಚಿಗೆ ತಕ್ಕಂತೆ ರಿಚಾರ್ಜ್ ಪ್ಲಾನ್ (BSNL Recharge Plans) ಅನ್ನು ಕೂಡ BSNL ಸಂಸ್ಥೆ ಪರಿಚಯಿಸಲು ಹೊರಟಿರುವುದು ನಿಜಕ್ಕೂ ಕೂಡ ಮೆಚ್ಚ ಬೇಕಾಗಿರುವ ವಿಚಾರ. ಕೇವಲ ರೂ.397 ಗಳಲ್ಲಿ ನಿಮಗೆ 150 ದಿನಗಳ ಅಂದರೆ ಬರೋಬ್ಬರಿ 5 ತಿಂಗಳುಗಳ ವ್ಯಾಲಿಡಿಟಿ ಸಿಗುತ್ತಿದೆ. ಅಂದರೆ ಈ ರಿಚಾರ್ಜ್ ಪ್ಲಾನಿನ ಪ್ರತಿ ತಿಂಗಳ ಖರ್ಚನ್ನು ಗಮನಿಸುವುದಾದರೆ 80 ರೂಪಾಯಿ ಗಳಾಗಿರುತ್ತದೆ.
ಇಷ್ಟೊಂದು ಕಡಿಮೆ ಬೆಲೆಯಲ್ಲಿ ಸೇವೆಯನ್ನು ನೀಡುವ ಕಾರಣಕ್ಕಾಗಿಯೇ BSNL ಸಂಸ್ಥೆಯ ಈ ರಿಚಾರ್ಜ್ ಪ್ಲಾನ್ ಈಗ ಸಖತ್ ಸುದ್ದಿಯಲ್ಲಿದೆ. ಒಂದು ವೇಳೆ ಯಾರಾದರೂ ಕಡಿಮೆ ಬಜೆಟ್ ನಲ್ಲಿ ದೀರ್ಘಕಾಲದ ವ್ಯಾಲಿಡಿಟಿಯನ್ನು ಹೊಂದಿರುವಂತಹ ರಿಚಾರ್ಜ್ ಪ್ಲಾನ್ ಅನ್ನು ಹುಡುಕುತ್ತಿದ್ದಾರೋ ಅಂಥವರಿಗೆ ಬಿಎಸ್ಎನ್ಎಲ್ ಸಂಸ್ಥೆ ಖಂಡಿತವಾಗಿ ಈ ಪರ್ಫೆಕ್ಟ್ ಪ್ಲಾನ್ ಅನ್ನು ಪರಿಚಯಿಸುತ್ತಿದೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ನೀವು 60 ದಿನ ಅಂದರೆ ಎರಡು ತಿಂಗಳುಗಳ ಕಾಲ ಅನಿಯಮಿತ ಕರೆಗಳನ್ನು ಪಡೆದುಕೊಳ್ಳಬಹುದಾಗಿದೆ.
60 ದಿನಗಳ ಕಾಲ ನಿಮಗೆ ಪ್ರತಿ ದಿನಕ್ಕೆ 2 ಜಿಬಿ High ಸ್ಪೀಡ್ ಇಂಟರ್ನೆಟ್ ಕೂಡ ಸಿಗುತ್ತದೆ. ನೂರು ಉಚಿತ ಎಸ್ಎಂಎಸ್ ಗಳನ್ನು ಕೂಡ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದ್ದು ನಿರ್ದಿಷ್ಟ ಸಮಯದ ನಂತರ ನೀವು ಹೆಚ್ಚಿನ ಡೇಟಾ ಬೇಕಿದ್ದರೆ ಅದಕ್ಕಾಗಿ ಪ್ರತ್ಯೇಕವಾಗಿ ನೀವು ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಈ ರಿಚಾರ್ಜ್ ಪ್ಲಾನ್ ನಲ್ಲಿ ನೀವು ಈ ವಿಷಯಗಳನ್ನು ಪ್ರಮುಖವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
Pre Personalized ರಿಂಗ್ ಟೋನ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. 60 ದಿನಗಳ ನಂತರ ನೀವು ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ (Unlimited Voice Calling) ಹಾಗೂ ಇಂಟರ್ನೆಟ್ ಡೇಟಾ ಗಾಗಿ ನೀವು ಹೆಚ್ಚಿನ ರಿಚಾರ್ಜ್ ಅನ್ನು ಪ್ರತ್ಯೇಕವಾಗಿ ಮಾಡಿಕೊಳ್ಳಬಹುದು. ಹೆಚ್ಚಾಗಿ ಮೊಬೈಲ್ ಸೇವೆಗಳನ್ನು ಬಳಸದೆ ಇರುವವರು ಕೇವಲ ತನ್ನ ಸಿಮ್ ಕಾರ್ಡ್ ಅನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದಕ್ಕಾಗಿ ಈ ರಿಚಾರ್ಜ್ ಪ್ಲಾನನ್ನು ಬಳಸಿಕೊಳ್ಳಬಹುದಾಗಿದೆ.