Airtel Offer: 250 ರೂಗೆ ವರ್ಷಪೂರ್ತಿ ಆಫರ್ ಕೊಟ್ಟ ಏರ್ಟೆಲ್, ಇಲ್ಲಿದೆ ಡಿಟೇಲ್ಸ್

Advertisement
ಇದೀಗ ದೇಶದಲ್ಲಿ 5Gಯುಗ ಆರಂಭವಾಗಿದೆ, ಜಿಯೋ 5ಜಿ (JIO 5G) ಪ್ರಾರಂಭಿಕವಾಗಿ ಆಕರ್ಷಕ ಆಫರ್‌ಗಳನ್ನು (Offer) ಘೋಷಿಸಿದೆ. ಎರ್ಟೆಲ್ (Airtel) ಮತ್ತು ಜಿಯೋ (JIO) ಆಗಾಗ ಹೊಸ ಆಫರ್ ನೀಡುತ್ತಾ ಸ್ವರ್ಧೆ ಮಾಡುತ್ತಿರುತ್ತದೆ, ಜಿಯೋ ತನ್ನ 5G ಸೇವೆಯು ಬಳಕೆದಾರರಿಗೆ ಅದರ ಪೈಪೋಟಿಗಿಂತ ಮೂರು ಪಟ್ಟು ಪ್ರಯೋಜನವನ್ನು ನೀಡಲಿದೆ ಅಂದಿದೆ, ಈ ನಡುವೆ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ತಮ್ಮ ಗ್ರಾಹಕರಿಗೆ ಅನ್‌ಲಿಮಿಟೆಡ್ 5ಜಿ ಡೇಟಾ ಪ್ಲ್ಯಾನ್‌ಗಳನ್ನು ಆರಂಭ ಮಾಡಿದೆ.
Airtel ವಾರ್ಷಿಕ ಯೋಜನೆ:
ಏರ್‌ಟೆಲ್ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಗ್ರಾಹಕರಿಗೆ ನೀಡಿದೆ, 2999 ರೂಗಳ ವಾರ್ಷಿಕ ಯೋಜನೆ, ಈ ಯೋಜನೆಯು 365 ದಿನಗಳ ವಾರ್ಷಿಕ ಮಾನ್ಯತೆಯೊಂದಿಗೆ ಕರೆ, ಡೇಟಾ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ, ಏರ್ಟೆಲ್ ಚಂದಾದಾರರಿಗೆ ಈಗ ಅನಿಯಮಿತ 5G ಡೇಟಾವನ್ನು ಬಳಸುವ ಕೊಡುಗೆಯನ್ನು ಪರಿಚಯಿಲಾಗಿದೆ.
ಕೇವಲ 250 ರೂಗಳಿಗೆ ವರ್ಷಪೂರ್ತಿ 5G ಮತ್ತು 4G:
ಏರ್ ಟೆಲ್ ಈ ಯೋಜನೆ ಬೆಲೆ 2999 ರೂಗಳಾಗಿದೆ. 12 ತಿಂಗಳ ಪ್ರಕಾರ ಲೆಕ್ಕ ಒಂದು ತಿಂಗಳ ವೆಚ್ಚವು ಕೇವಲ 250 ರೂ, ಈ ಯೋಜನೆಯಲ್ಲಿ 365 ದಿನಗಳವರೆಗೆ ಪ್ರತಿದಿನ 2GB ಡೇಟಾ ಅಲ್ಲದೆ ಅನ್ಲಿಮಿಟೆಡ್ 5G ಡೇಟಾ ಸಹ ಲಭ್ಯವಿರುತ್ತದೆ. ಏರ್ಟೆಲ್ 5G (Airtel 5G) ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಸಹ ಲಭ್ಯವಿದ್ದು ಈ ಯೋಜನೆಯ ಬಳಕೆದಾರರು ಪ್ರತಿ ದಿನ 100 ಉಚಿತ SMS ಪಡೆಯಬಹುದು.
ಏರ್ಟೆಲ್ 5ಜಿ ಯಾರಿಗೆಲ್ಲ ಲಭ್ಯ?
ಏರ್ಟೆಲ್ ಅನ್ಲಿಮಿಟೆಡ್ 5ಜಿ ಆಫರ್ 5ಜಿ ಸಪೋರ್ಟ್ ಮಾಡುವ ಮೊಬೈಲ್ ನಿಮ್ಮಲ್ಲಿರಬೇಕು. 5ಜಿ ನೆಟ್ವರ್ಕ್ ಇರುವ ಪ್ರದೇಶದಲ್ಲಿ ವಾಸವೀರಬೇಕು, ಹಾಗಿದ್ದರೆ ಮಾತ್ರ ನೀವು 5ಜಿ ಡೇಟಾದ ಸೇವೆಯನ್ನು ಪಡೆಯಬಹುದು. ಇಲ್ಲದಿದ್ದರೆ 4ಜಿ ನೆಟ್ವರ್ಕ್ ಮಾತ್ರವೇ ನಿಮಗೆ ಸಿಗುತ್ತದೆ.