ಡ್ರೀಮ್ 11 (Dream 11) ಎಂಬ ಆನ್‌ಲೈನ್ ಕ್ರಿಕೆಟ್ ಗೇಮ್ (Online Cricket Game) ಬಗ್ಗೆ ಎಲ್ಲರಿಗೂ ತಿಳಿದೆ ಇದೆ, ಹಣವನ್ನು ಪಣವಾಗಿರಿಸಿ ಆಡುವ ಎಲ್ಲ ಬಗೆಯ ಆಟಗಳನ್ನು ಆನ್‌ಲೈನ್ ಜೂಜು ಎಂದೇ ಪರಿಗಣಿಸಲಾಗುತ್ತದೆ, ಈ ಆ್ಯಪ್‌ನಲ್ಲಿಯು ಅಷ್ಟೆ ನಮ್ಮಿಷ್ಟದ ತಂಡ (Team) ನಿರ್ಮಿಸಿಕೊಂಡು ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ (Betting) ಆಡಬಹುದು. 15 ರೂಪಾಯಿಗಳಿಂದ ಶುರುವಾಗುವ ಈ ಗೇಮ್‌ನಲ್ಲಿ ಗೆದ್ದರೆ ಕೋಟ್ಯಾಂತರ ರೂಪಾಯಿ (Crore Rupees) ಗಳಿಸಬಹುದು ಅನ್ನುತ್ತಾರೆ. ನಿಜವೊ ಅನ್ನುವುದು ಹಣ ಸಿಕ್ಕಿದವರಿಗಷ್ಟೆ ಗೊತ್ತು .
ನಿಜವೇ 1 ಲಕ್ಷ ಗಳಿಕೆ:
ಕ್ರಿಕೆಟ್ ಪ್ರೇಮಿಗಳಿಗಾಗಿಯೇ ಡ್ರೀಮ್ ಫ್ಯಾಂಟಸಿ ಅಪ್ಲಿಕೇಶನ್ (Dream Fantasy App) ಹುಟ್ಟಿಕೊಂಡಿದೆ. ಕಳೆದೆರಡು ವರ್ಷಗಳಿಂದಲೂ ಸುದ್ದಿಯಲ್ಲಿರುವ ಈ ಅಪ್ಲಿಕೇಶನ್ ನಲ್ಲಿ ಈಗ ಬರೋಬ್ಬರಿ 30 ಲಕ್ಷ ಜನರು ಫ್ಯಾಂಟಸಿ ಗೇಮ್ ಆಡುತ್ತಿದ್ದಾರೆ. ನಿಮಗೆ ಹೆಚ್ಚು ಕ್ರಿಕೆಟ್ ಸ್ಕಿಲ್ ತಿಳಿದಿದ್ದರೆ ಎರಡು ಕ್ರಿಕೆಟ್ ತಂಡಗಳಿಂದ ಉತ್ತಮ ಟೀಮ್ ಕಟ್ಟಿ ಹಣವನ್ನು ಗಳಿಸಬಹುದು ಎನ್ನುತ್ತಾರೆ, ಕೆಲವೊಂದು ಕಂಟೆಸ್ಟ್ ಗಳಲ್ಲಿ 49 ರೂಪಾಯಿ ಹಾಕಿ 1 ಕೋಟಿ ಗೆಲ್ಲುವ ಅವಕಾಶವಿರುತ್ತದೆ. 1 ಕೋಟಿಯ ಕಂಟೆಸ್ಟ್ ಗಳಲ್ಲಿ ಲಕ್ಷಾಂತರ ಟೀಮ್ ಗಳು ಇರುತ್ತವೆ, ಆದ್ದರಿಂದ ಕೆಲವೊಮ್ಮೆ ಅಸಾಧ್ಯ ದ ಮಾತು ಎನ್ನಬಹುದು,
ಇನ್ನೊಂದು ಆರೋಪ ಅಂದರೆ ಕೋಟಿಗಟ್ಟಲೆ ಟೀಮ್ ಮಧ್ಯೆ ಕಂಪನಿಯವರೇ ಬೇರೆಯವರ ಮೂಲಕ ಟೀಮ್ (Team) ಮಾಡಿಸಿರುತ್ತಾರೆ ಎನ್ನಲಾಗಿದೆ, ಆದರೆ ಈ ಆರೋಪಕ್ಕೂ ಸರಿಯಾಗಿ ಆಧಾರವಿಲ್ಲ, ಏಕೆಂದರೆ ಪಂದ್ಯ ಶುರುವಾಗುವುದಕ್ಕೂ ಮುನ್ನ ಯಾರು ಬೇಕಾದರೂ ತಂಡವನ್ನು ರಚಿಸಬಹುದು ಎನ್ನಲಾಗಿದೆ, ಡ್ರೀಮ್ 11 ವಿವಿಧ ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಕೊಳ್ಳುತ್ತದೆ, ಆಟದ ಫಲಿತಾಂಶವನ್ನು ಕೂಡ ಅದೇ ಕಂಪೆನಿ ಅವಲಂಬಿಸಿರುತ್ತದೆ. ಇನ್ನೂ, ಡ್ರೀಮ್ 11 (Dream 11) ಕಾನೂನು ಬಾಹಿರ ಆಟವಾಗಿದೆ, ಇತರ ರೀತಿಯ ಕ್ರೀಡಾ ಬೆಟ್ಟಿಂಗ್ ಕೂಡ ಕಾನೂನುಬಾಹಿರವಾಗಿದೆ.