Karnataka Times
Trending Stories, Viral News, Gossips & Everything in Kannada

iPhone: ಇಲ್ಲಿ ಕೇವಲ 10 ರಿಂದ 15 ಸಾವಿರಕ್ಕೆ ಸಿಗುತ್ತಿವೆ ಐಫೋನ್ ಗಳು! ಕ್ಯೂ ನಿಲ್ಲುತ್ತಿರುವ ಜನ

ಪ್ರತಿಯೊಬ್ಬರೂ ಕೂಡ ಐಫೋನ್ (iPhone) ಅನ್ನು ಅತ್ಯಂತ ಪ್ರತಿಷ್ಠೆಯ ವಸ್ತುವಿನ ರೂಪದಲ್ಲಿ ನೋಡುತ್ತಾರೆ. ಕ್ವಾಲಿಟಿ ವಿಚಾರದಲ್ಲಿ ಕೂಡ ನೋಡುವುದಾದರೆ ಮಾರುಕಟ್ಟೆಯಲ್ಲಿ ಇರುವಂತಹ ಬೇರೆ ಫೋನುಗಳನ್ನು ಆಪಲ್ ಸಂಸ್ಥೆಯ ಐಫೋನ್ ಗಳು ಹಿಂದಿಕ್ಕುತ್ತಿವೆ. ಅಷ್ಟರ ಮಟ್ಟಿಗೆ ಈ ಫೋನುಗಳು ಕ್ವಾಲಿಟಿಯನ್ನು ಹೊಂದಿವೆ. ಪ್ರತಿಯೊಂದು ಐ ಫೋನ್ ಗಳು ಹೆಚ್ಚಿನ ಬದಲಾವಣೆಯನ್ನು ಹೊಂದಿಲ್ಲದಿದ್ದರೂ ಕೂಡ ಜನರು ಪ್ರತಿ ಬಾರಿ ಐಫೋನ್ ಲಾಂಚ್ ಆದಾಗ ಅದನ್ನು ಖರೀದಿಸುವುದನ್ನು ಮಾತ್ರ ಬಿಡುವುದಿಲ್ಲ.

Advertisement

ಆದರೆ ಐಫೋನ್ ಅನ್ನು ಹೆಚ್ಚು ದುಡ್ಡು ಕೊಟ್ಟು ಖರೀದಿಸಿದ ಮಾತ್ರಕ್ಕೆ ಅದು ಒರಿಜಿನಲ್ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನೀವು ಖರೀದಿಸಿರುವಂತಹ ಐಫೋನ್ ನಕಲಿಯೋ ಅಥವಾ ಅಸಲಿಯೋ ಎನ್ನುವುದನ್ನು ತಿಳಿಯೋದಕ್ಕೆ ಇರುವಂತಹ ಒಂದು ಸುಲಭ ಮಾರ್ಗ ಎಂದರೆ ಅದು ಐಫೋನಿನ ಬ್ಯಾಟರಿ ಚೆಕಪ್ (iPhone Battery Check up) ಮೂಲಕ. ಐಫೋನ್ ಚಾರ್ಜ್ ಮಾಡಿದ ನಂತರ ಅದರ ಬ್ಯಾಟರಿ ಬ್ಯಾಕಪ್ ಕೆಲವೇ ಗಂಟೆಗಳ ಕಾಲ ಇದ್ರೆ ಅದು Clone ಮಾಡಿರುವಂತಹ ಐಫೋನ್ ಆಗಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ.

Advertisement

ಸಾಮಾನ್ಯವಾಗಿ ಐಫೋನ್ ತನ್ನ ಕ್ವಾಲಿಟಿಯ ವಿಚಾರಕ್ಕಾಗಿ ಹೆಸರುವಾಸಿಯಾಗಿದೆ ಹೀಗಾಗಿ ಅದು ಯಾವತ್ತೂ ಕೂಡ ಹ್ಯಾಂಗ್ ಆಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ಒಂದು ವೇಳೆ ನಿಮ್ಮ ಐಫೋನ್ (iPhone) ಹ್ಯಾಂಗ್ ಆಗುತ್ತಿದ್ದರೆ ನೀವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ನಿಮ್ಮ ಫೋನ್ ನಕಲಿ ಆಗಿರಬಹುದು ಎನ್ನುವುದಾಗಿ. ಎಲ್ಲಕ್ಕಿಂತ ಪ್ರಮುಖವಾಗಿ ಐಫೋನ್ ಮೊಬೈಲ್ ಫೋನಿನ ಜನಪ್ರಿಯ ಜನರಲ್ಲಿ ಹೆಚ್ಚಾಗಿರುವುದಕ್ಕೆ ಪ್ರಮುಖ ಕಾರಣ ಎಂದರೆ ಫೋನಿನ ಕ್ಯಾಮೆರಾ ಕ್ವಾಲಿಟಿ.

 

Advertisement

 

Advertisement

ಒಂದು ವೇಳೆ ನಿಮ್ಮ ಐಫೋನಿನಿಂದ ತೆಗೆದಿರುವಂತಹ ಫೋಟೋಗಳ ಕ್ವಾಲಿಟಿ ತುಂಬಾ ಕಳಪೆಯದ್ದಾಗಿದ್ದರೆ ಖಂಡಿತವಾಗಿ ನಕಲಿ ಐಫೋನ್ ಆಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ರಿಪ್ರೇಶ್ ರೇಟ್ ತುಂಬಾ ನಿಧಾನವಾಗಿದ್ರು ಕೂಡ ನೀವು ಇದನ್ನೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಐಫೋನಿನ ಹಿಂದಿನ ಭಾಗ ಪ್ರೀಮಿಯಂ ಗಾಜಿನ ಜೊತೆಗೆ ಮಾಡಲಾಗಿರುತ್ತದೆ ಆದರೆ ಒಂದು ವೇಳೆ ನಿಮ್ಮ ಐಫೋನಿನ ಹಿಂಭಾಗದಲ್ಲಿ ಪ್ಲಾಸ್ಟಿಕ್ ಅನ್ನು ಹಾಕಿದ್ರೆ ಅದನ್ನು ಕೂಡ ನೀವು ನಕಲಿ ಎಂಬುದಾಗಿ ಪರಿಗಣಿಸಬೇಕಾಗುತ್ತದೆ.

ಇನ್ನೇನು ಕೆಲವೇ ದಿನಗಳಲ್ಲಿ iPhone 15 ಮಾರುಕಟ್ಟೆಗೆ ಕಾಲಿಡುತ್ತಿರುವ ಬೆನ್ನಲ್ಲಿ ಮಾರುಕಟ್ಟೆಯಲ್ಲಿ ಅದರ ತದ್ರೂಪಿ ರೂಪವನ್ನು ಕೂಡ ಮಾರಾಟ ಮಾಡಬಹುದಾದಂತಹ ಸಾಧ್ಯತೆ ಇದೆ ಮಾತ್ರವಲ್ಲದೆ iPhone 14 ಅನ್ನು ಕೂಡ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳಿಗೆ ಕೆಲವೊಂದು ಮಾರುಕಟ್ಟೆಯ ಸ್ಥಳಗಳಲ್ಲಿ ಆಫರ್ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂಬುದಾಗಿ ಹೇಳಿ ನಿಮಗೆ ಕಡಿಮೆ ಬೆಲೆಯಲ್ಲಿ ನಕಲಿ ಪ್ರಾಡಕ್ಟ್ ಅನ್ನು ನೀಡುವಂತಹ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಈ ಬಗ್ಗೆ ಕೂಡ ಸ್ವಲ್ಪ ಜಾಗರೂಕರಾಗಿ ಇರುವುದು ಒಳ್ಳೆಯದು.

Leave A Reply

Your email address will not be published.