Karnataka Times
Trending Stories, Viral News, Gossips & Everything in Kannada

Spam or Company Calls: ನಿಮ್ಮ ಮೊಬೈಲ್ ಗೆ ಯಾವುದೇ ಕಂಪನಿ ಕರೆಗಳು ಬರಬಾರದಂತೆ ತಡೆಯಲು ಈ ಸೆಟ್ಟಿಂಗ್ಸ್ ಮಾಡಿ

Advertisement

ಟೆಲಿ ಮಾರ್ಕೆಟಿಂಗ್ ಕಂಪನಿಗಳ (Telemarketing Companies) ಅನಗತ್ಯ ಫೋನ್ ಕರೆಗಳು (Phone Calls) ಅಥವಾ ಎಸ್ಎಂಎಸ್ (SMS) ಗಳು ಹಲವರಿಗೆ ತೊಂದರೆಯನ್ನು ನೀಡುತ್ತಿವೆ. ಇತ್ತೀಚಿಗೆ ಈ ವಿಷಯಕ್ಕೆ ಸಂಬಂಧಪಟ್ಟ ಸಮೀಕ್ಷೆಯನ್ನು ನಡೆಸಲಾಗಿತ್ತು. 64% ಜನರು ಎವರೇಜ್ ಪ್ರತಿದಿನ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಕರೆಗಳನ್ನು ಸ್ವೀಕರಿಸುತ್ತಾರೆ ಎಂಬುದು ತಿಳಿದು ಬಂದಿದೆ. ಕೆಲವೊಮ್ಮೆ ಟೆಲಿ ಮಾರ್ಕೆಟಿಂಗ್ ಕಾರ್ಯಗಳಿಂದ ಪ್ರಮುಖ ಕರೆಗಳು ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ ಹಾಗಾಗಿ ಇಂತಹ ಗ್ರಾಹಕರಿಗೆ ತೊಂದರೆಯಾಗುವ ಹಾಗೂ ಸಮಸ್ಯೆಯಾಗುವ ಟೆಲಿ ಮಾರ್ಕೆಟಿಂಗ್ ಕರೆಗಳನ್ನು (Telemarketing calls) ತಪ್ಪಿಸಲು ಎರಡು ರೀತಿಯ ಮಾರ್ಗಗಳು ಇವೆ.

Calls ರಿಜಿಸ್ಟರ್ ಮಾಡಿ:

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (Telecom Regulatory Authority of India) ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಗ್ರಾಹಕರ ಆದ್ಯತೆಯ ನೋಂದಣಿಯನ್ನು ಆರಂಭಿಸಿದೆ. ಇದು ಗ್ರಾಹಕರಿಗೆ ಬರುವಂತಹ ಅನಗತ್ಯ ಕರೆಗಳನ್ನು ತಡೆಯಲು ಸಹಾಯಕವಾಗುತ್ತದೆ. ಟೆಲಿ ಮಾರ್ಕೇಟರ್ಸ್ ಮಾಡುವ ಕರೆಗಳನ್ನು ನಿರ್ಲಕ್ಷಿಸಬಹುದು. ಅದಕ್ಕಾಗಿ ಡಿಎನ್ ಡಿ (DND) ಯನ್ನು ಮೊಬೈಲ್ ನಲ್ಲಿ ಸಕ್ರಿಯಗೊಳಿಸಿಕೊಳ್ಳಬಹುದು.

ಇದಕ್ಕಾಗಿ ಮೊದಲು ಎಸ್ಎಂಎಸ್ ಪೇಜ್ (SMS Page) ತೆರೆಯಿರಿ. ಅಲ್ಲಿ ಸಂದೇಶವನ್ನು ರಚಿಸಲು ಕ್ಲಿಕ್ ಮಾಡಬೇಕು. START ಎಂದು ಟೈಪ್ ಮಾಡಿ ಅದನ್ನು 1909 ಸಂಖ್ಯೆಗೆ ಕಳುಹಿಸಬೇಕು. ಈ ಪಟ್ಟಿಯೊಂದಿಗೆ ಕೋಡ್ ಕೂಡ ಸಿಗುತ್ತದೆ. ನೀವು ಯಾವ ಕೋಡ್ ನಿರ್ಬಂಧಿಸಲು ಬಯಸುತ್ತೀರೋ ಅದನ್ನು ಸಂದೇಶದ ಮೂಲಕ ಮತ್ತೆ ಪ್ರತ್ಯುತ್ತರ ಕಳುಹಿಸಬೇಕು. ನೀವು ಸಂದೇಶ ಕಳುಹಿಸಿದ 24 ಗಂಟೆ ಒಳಗೆ ಫೋನಿನಲ್ಲಿ ಡಿಎನ್ ಡಿ (DND) ಆಕ್ಟಿವೇಟ್ ಆಗುತ್ತದೆ.

ಇನ್ನು ಎರಡನೇ ಮಾರ್ಗ ಅಂದ್ರೆ ಸ್ಕ್ಯಾಮ್ ಕರೆಗಳನ್ನ ನೀವು ಬ್ಲಾಕ್ (Block) ಮಾಡಬಹುದು. ಇದಕ್ಕಾಗಿ ಕಾಲ್ ಟ್ಯಾಬ್ ಗೆ ಹೋಗಿ ಟ್ಯಾಬ್ ನಲ್ಲಿ ರಿಪೋರ್ಟ್ (Report) ಮತ್ತು ಬ್ಲಾಕ್ (Block) ಎನ್ನುವ ಆಪ್ಷನ್ ಸಿಗುತ್ತದೆ. ಇದು ಆಂಡ್ರಾಯ್ಡ್ (Android) ನಲ್ಲಿ ಇರುವ ಆಯ್ಕೆಯಾಗಿದ್ದರೆ ಐಫೋನ್ ಬಳಕೆದಾರರು (iPhone Users) ಅಪ್ಲಿಕೇಶನ್ ಅನ್ನು ತೆರೆಯಿರಿ ಅದರಲ್ಲಿ ರೀಸೆಂಟ್ಸ್ ಎನ್ನುವ ಆಪ್ಷನ್ ಇರುತ್ತದೆ. ಅದರಲ್ಲಿ ‘I’ ಎನ್ನುವ ಆಯ್ಕೆಯ ಮೇಲೆ ಟ್ಯಾಪ್ ಮಾಡಿ ಮತ್ತು ಬ್ಲಾಕ್ ದಿಸ್ ಕಾಲರ್ ಮೇಲೆ ಟಾಪ್ ಮಾಡಿ ಅನಗತ್ಯ ಕರೆಗಳು ಕೂಡಲೇ ಬ್ಲಾಕ್ ಆಗುತ್ತದೆ.

1 Comment
  1. techylist says

    I think it’s a good idea to have a spam or company call filter on your phone. It’s so annoying when you get those calls and you can’t answer them because your phone is locked.

Leave A Reply

Your email address will not be published.