Govt Website: ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲಿರುವ ಸರ್ಕಾರಿ ವೆಬ್ ಸೈಟ್ ಆರಂಭ!
ಈಗಂತೂ ಬಹುತೇಕ ಎಲ್ಲರೂ ವಸ್ತುಗಳನ್ನು ಖರೀದಿಸುವುದು ಆನ್ ಲೈನ್ ಮೂಲಕವೇ. ಅಮೆಜಾನ್ (Amazon), ಫ್ಲಿಪ್ ಕಾರ್ಟ್ (Flipkart) ನಂತರ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳು ಇಂದು ಹೆಚ್ಚು ಪ್ರಚಲಿತದಲ್ಲಿದ್ದು, ಸುಲಭವಾಗಿ ಕುಳಿತಲ್ಲಿಯೇ ಕಡಿಮೆ ಬೆಲೆಗೆ ಬೇಕಾಗಿದ್ದನ್ನು ಜನ ಖರೀದಿ ಮಾಡಬಹುದು. ಈ ಇ-ಕಾಮರ್ಸ್ ಕಂಪನಿಗಳಿಗೆ ಈವರೆಗೆ ಪೈಪೋಟಿಯನ್ನು ಯಾರೂ ನೀಡಿರಲಿಲ್ಲ. ಆದರೆ ಇದೀಗ ಇವುಗಳಿಗಿಂತ ಅಗ್ಗದ ಬೆಲೆಗೆ ವಸ್ತುಗಳನ್ನು ಕೊಳ್ಳುವುದಕ್ಕೆ ಸಾಧ್ಯ. ಎಲ್ಲಿ, ಯಾವ ಸೈಟ್.. ಇಲ್ಲಿದೆ ಉತ್ತರ!
ಇಂದು ಮಾರುಕಟ್ಟೆಯಲ್ಲಿ ಆನ್ ಲೈನ್ ಶಾಪಿಂಗ್ ಸೈಟ್ (Online Shoping Site) ಗಳೇ ಹೆಚ್ಚು ಪ್ರಾಬಲ್ಯಹೊಂದಿವೆ. ಅದರಲ್ಲೂ ಅಮೆಜಾನ್ (Amazon) ಹಾಗೂ ಫ್ಲಿಪ್ ಕಾರ್ಟ್ (Flipkart) ಗಳನ್ನು ಜನರು ಹೆಚ್ಚಾಗಿ ಅವಲಂಬಿಸಿದ್ದಾರೆ. ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ (ಶೋ ರೂಮ್, ರೀಟೇಲ್ ಅಂಗಡಿಗಳ ಬೆಲೆಗೆ ಹೋಲಿಸಿದರೆ) ವಸ್ತುಗಳನ್ನು ಖರೀದಿ ಮಾಡಬಹುದು. ಅದುವೆ GeM – ಸರ್ಕಾರಿ ಇ ಮಾರುಕಟ್ಟೆ.
ಇದು ಸರ್ಕಾರಿ ಇಂದ ನಿಯಂತ್ರಿಸಲ್ಪಡುವ ಮಾರುಕಟ್ಟೆಯಾಗಿದ್ದು ಬೆಲೆಯಲ್ಲಿ ಉತ್ಪನ್ನಗಳನ್ನು ನೀವು ಖರೀದಿ ಮಾಡಬಹುದು. ಇಲ್ಲಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಮಾತ್ರವಲ್ಲದೆ ಉತ್ಪನ್ನದ ಗುಣಮಟ್ಟದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದರಲ್ಲೂ ಇಲ್ಲಿ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಗಿಂತಲೂ ಕಡಿಮೆ ಬೆಲೆಗೆ ವಸ್ತುಗಳು ಲಭ್ಯವಿದೆ ಎಂಬುದು ವಿಶೇಷ.
ಕನಿಷ್ಠ ಬೆಲೆಗೆ ಖರೀದಿಸಬಹುದು:
ವಸ್ತುಗಳು ಎಷ್ಟು ಅಗಲವಾಗಿರುತ್ತದೆ ಎಂಬುದು ನಿಮ್ಮಲ್ಲಿ ಮೂಡಿರುವ ಕುತೂಹಲವಾಗಿದ್ದರೆ, 2021 22ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಸುಮಾರು 10 ಉತ್ಪನ್ನಗಳು ಅತ್ಯಂತ ಮಿತ ವ್ಯಯಕಾರಿ ಎಂದು ತಿಳಿದುಬಂದಿದೆ. ಈ ಸಮೀಕ್ಷೆಯಲ್ಲಿ ಒಟ್ಟು 22 ಉತ್ಪನ್ನಗಳ ನಡುವಿನ ಹೋಲಿಕೆ ಮಾಡಲಾಗಿದ್ದು, ಜೆಮ್ ಸೈಟ್ ನಲ್ಲಿ ಲಭ್ಯವಿರುವ ಉತ್ಪನ್ನಗಳು ಇತರ ಇ-ಕಾಮರ್ಸ್ ಸೈಟ್ (E-commerce Site) ಗಳಿಗಿಂತಲೂ 9.5% ಕಡಿಮೆ ಬೆಲೆಗೆ ದೊರೆಯುತ್ತದೆ. ಅಂದರೆ ಇದರ ಸೈಟುಗಳಲ್ಲಿ ನೂರು ರೂಪಾಯಿ ಬೆಲೆಯ ಉತ್ಪನ್ನ ಈ ಸೈಟ್ ನಲ್ಲಿ 90 ರೂಪಾಯಿಗಳಿಗೆ ಲಭ್ಯವಿದೆ.