BSNL: ಕೇವಲ 22 ರೂಪಾಯಿಗಳ ಖರ್ಚಿಗೆ ಹೊಸ ಅಪ್ಡೇಟ್ ತಂದ BSNL! ಅಂಬಾನಿಯೇ ಸ್ತಬ್ಧ

Advertisement
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೆಲಿಕಾಂ ಸಂಸ್ಥೆಗಳು ನಿಮಗೆಲ್ಲರಿಗೂ ತಿಳಿದಿರಬಹುದು ತಮ್ಮ ರಿಚಾರ್ಜ್ ಪ್ಲಾನ್ (Recharge Plan) ಬೆಲೆಯನ್ನು ಹೆಚ್ಚಿಸಿವೆ. ಅದರಲ್ಲೂ ವಿಶೇಷವಾಗಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ (SIM Card) ಗಳನ್ನು ಹೊಂದಿರುವಂತಹ ಜನರಿಗೆ ಇದರಿಂದ ಕಷ್ಟ ಆಗುತ್ತಿವೆ ಯಾಕೆಂದರೆ ಮಿನಿಮಮ್ ರಿಚಾರ್ಜ್ ಬ್ಯಾಲೆನ್ಸ್ ಅನ್ನು ಮಾಡಿಸದೆ ಹೋದಲ್ಲಿ ಸಿಮ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಹೀಗಾಗಿ ಹೆಚ್ಚಾಗಿರುವಂತಹ ರೀಚಾರ್ಜ್ ಬೆಲೆಯಿಂದಾಗಿ ಎರಡು ಸಿಮ್ ಗಳಿಗೆ ಕೆಲವೊಮ್ಮೆ ರೀಚಾರ್ಜ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಕೂಡ ಕಂಡು ಬರುತ್ತಿದೆ. BSNL ಸಂಸ್ಥೆ ಇದೇ ಕಾರಣಕ್ಕಾಗಿ ಗ್ರಾಹಕರಿಗೆ ನೆಮ್ಮದಿಯನ್ನು ನೀಡುವಂತಹ ಒಂದು ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.
ಮಾರುಕಟ್ಟೆಯಲ್ಲಿ ಇರುವಂತಹ ಟಾಪ್ ಟೆಲಿಕಾಂ ಕಂಪನಿಗಳಾಗಿರುವಂತಹ Jio Airtel ಗಳಂತಹ ಕಂಪನಿಗಳಿಗೆ ಟಕ್ಕರ್ ಕಾಂಪಿಟೇಶನ್ ನೀಡೋದಕ್ಕೆ BSNL ಸಜ್ಜಾಗಿ ನಿಂತಿದೆ ಎಂದು ಹೇಳಬಹುದಾಗಿದೆ ಯಾಕೆಂದರೆ ಎರಡು ಸಿಮ್ಗಳನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಈಗಾಗಲೇ ಬೇರೆ ಟೆಲಿಕಾಂ ಕಂಪನಿಗಳಿಂದ ಹೆಚ್ಚಾಗಿರುವಂತಹ ಬೆಲೆಗೆ ರಿಚಾರ್ಜ್ ಮಾಡಿಸಲು ಸಾಮಾನ್ಯವಾಗಿ ಕಷ್ಟ ಸಾಧ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತದ ಟೆಲಿಕಾಂ ಗ್ರಾಹಕರಿಗೆ ಟೆಲಿಕಾಂ ಸೇವೆಯನ್ನು ಸತತವಾಗಿ ನೀಡಿಕೊಂಡು ಬರುತ್ತಿರುವ ಬಿಎಸ್ಎನ್ಎಲ್ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಸೇವೆಯನ್ನು ನೀಡಲು ಹೊರಟಿದೆ.
ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಸಿಮ್ ಗಳಿದ್ದಾಗ ಬೇರೆ ಯಾವ ಯೋಚನೆ ಕೂಡ ತಲೆಗೆ ಬರುವುದಿಲ್ಲ ಕೇವಲ ಸಿಮ್ ಕಾರ್ಡ್ ಸಕ್ರಿಯವಾಗಿ ಇದ್ದರೆ ಸಾಕು ಅನ್ನೋದಷ್ಟೇ ಪ್ರತಿಯೊಬ್ಬರಿಗೂ ಕೂಡ ತಲೆಗೆ ಬರುವಂತಹ ವಿಚಾರ. ಹೀಗಾಗಿ ಬೇಸಿಕ್ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ ಸಿಕ್ಕಿದ್ರೆ ಸಾಕು, ಸಿಮ್ ಆಕ್ಟಿವ್ (SIM Active) ಆಗಿರುತ್ತೆ ಅನ್ನೋದು ಪ್ರತಿಯೊಬ್ಬರ ಯೋಚನೆ ಆಗಿದೆ. ಹೌದು ನಾವ್ ಮಾತನಾಡಲು ಹೊರಟಿರುವುದು ಬಿಎಸ್ಎನ್ಎಲ್ ಸಂಸ್ಥೆ ಇತ್ತೀಚಿಗಷ್ಟೇ ಪರಿಚಯಿಸುವಂತಹ 22 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಗ್ಗೆ.
ಕೇವಲ 22 ರೂಪಾಯಿಗಳಲ್ಲಿ ನೀವು ಉತ್ತಮ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು ಎಂದಾದ ಮೇಲೆ ಯಾಕೆ ತಾನೇ ಬೇರೆ ಕಂಪನಿಗಳ ಸಿಮ್ ಗೆ ದುಬಾರಿ ಬೆಲೆಯನ್ನು ಖರ್ಚು ಮಾಡಬೇಕು ಅಲ್ವಾ. ಹಾಗಿದ್ರೆ ಬನ್ನಿ ಈ ರಿಚಾರ್ಜ್ ಪ್ಲಾನ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ ಹಾಗೂ ನೀವು ಕೂಡ ಬಿಎಸ್ಎನ್ಎಲ್ (BSNL) ಗ್ರಾಹಕರಾಗಿದ್ದರೆ ಖಂಡಿತವಾಗಿ ಈ ಸುದ್ದಿ ನಿಮಗೆ ಪ್ರಯೋಜನಕಾರಿಯಾಗುತ್ತದೆ.
ಈ 22 ರೂಪಾಯಿಗಳ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಮೂಲಕ ನೀವು 90 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿ ನಿಮಿಷಕ್ಕೆ 30 ಪೈಸೆಗಳಷ್ಟು ಟಾಕ್ ಟೈಮ್ ಗಾಗಿ ಖರ್ಚು ಮಾಡಬೇಕಾಗಿರುತ್ತದೆ. ಇದರಲ್ಲಿ ಉಚಿತ ವಾಯ್ಸ್ ಕಾಲಿಂಗ್ ಹಾಗೂ ಇಂಟರ್ನೆಟ್ ಡೇಟಾ (Internet Data) ಸಿಗುವುದಿಲ್ಲ ಕೇವಲ ವ್ಯಾಲಿಡಿಟಿ ಮಾತ್ರ ಸಿಗುತ್ತೆ ಅನ್ನೋದನ್ನ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೇವಲ ವ್ಯಾಲಿಡಿಟಿಗಾಗಿ ನೀವು ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಈ ಯೋಜನೆಯನ್ನು ಬಳಸಿಕೊಳ್ಳಬಹುದಾಗಿದೆ.