Karnataka Times
Trending Stories, Viral News, Gossips & Everything in Kannada

WhatsApp: ಸದ್ದಿಲ್ಲದೆ ಊಹಿಸದ ಫೀಚರ್ ತಂದ ವಾಟ್ಸಾಪ್!

ವಿಶ್ವದಲ್ಲಿಯೇ ಪ್ರಸಿದ್ಧ ಸಂದೇಶ ಕಳುಹಿಸುವ ಪ್ಲಾಟ್ ಫಾರ್ಮ್ ಆಗಿರುವ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ದಿನದಿಂದ ದಿನಕ್ಕೆ ಅನುಕೂಲವಾಗುವಂತಹ ಸಾಕಷ್ಟು ವೈಶಿಷ್ಟ್ಯತೆಗಳನ್ನು ಪರಿಚಯ ಮಾಡುತ್ತಲೇ ಬಂದಿದೆ. ಇತ್ತೀಚಿಗೆ ವಾಟ್ಸಪ್ ಡಾಕ್ಯುಮೆಂಟ್ ಮೂಲಕ ಹೆಚ್ ಡಿ ಗುಣಮಟ್ಟದ ಫೋಟೋಗಳನ್ನು ಕೂಡ ಕಳುಹಿಸುವಂತಹ ಫೀಚರ್ ಪರಿಚಯಿಸಿದೆ. ಬಳಕೆದಾರರು ಎಚ್ ಡಿ ಗುಣಮಟ್ಟದ ಫೋಟೋಗಳನ್ನು ಪರಸ್ಪರ ಹಂಚಿಕೊಳ್ಳಲು ಸಹಾಯಕವಾಗುವಂತಹ ಫೀಚರ್ ಇದಾಗಿದೆ. ವಾಟ್ಸಾಪ್ನಲ್ಲಿ ನಿತ್ಯವೂ ನಾವು ಬಳಸುವ ಫೀಚರ್ ಗಳಿಗಿಂತ ವಿಭಿನ್ನವಾದ ಹಾಗೂ ವಿಶೇಷವಾದ ಸಾಕಷ್ಟು ಫೀಚರ್ ಗಳು ಇರುತ್ತವೆ. ಅದರ ಬಗ್ಗೆ ನಮಗೆ ಅರಿವು ಇರುವುದಿಲ್ಲ.

Advertisement

ಹೆಸರಿಲ್ಲದೇ ರಚಿನಬಹುದು ವಾಟ್ಸಾಪ್ ನಲ್ಲಿ ಗ್ರೂಪ್:

Advertisement

ವಾಟ್ಸಪ್ (WhatsApp) ನಲ್ಲಿ ಈಗ ಮತ್ತೊಂದು ಹೊಸ ಫೀಚರ್ ಬಂದಿದೆ. ಅದು ಬಳಕೆದಾರರು ಯಾವುದೇ ಹೆಸರನ್ನು ಕೊಡದೆ ಗುಂಪು ರಚಿಸಬಹುದು. ಈ ಬಗ್ಗೆ ಮೆಟಾ ಸಿ ಇ ಒ ಮಾರ್ಕ್ ಜುಕರ್ ಬರ್ಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಅನಾಮಧೇಯ ಗುಂಪಿನ ರಚನೆಯಿಂದ ಏನೆಲ್ಲಾ ಉಪಯೋಗವಿದೆ ನೋಡೋಣ.

Advertisement

ಏನಿದು ಅನಾಮಧೇಯ ಗುಂಪಿನ ರಚನೆ?

Advertisement

ವಾಟ್ಸಪ್ (WhatsApp) ನಲ್ಲಿ ನೀವು ಪಡೆಯಬಹುದಾದ ಒಂದು ಉತ್ತಮವಾದ ಫೀಚರ್ ಇದಾಗಿದೆ. ಅದೆಷ್ಟೋ ಬಾರಿ ಎಮರ್ಜೆನ್ಸಿ ಸಮಯದಲ್ಲಿ ಅಥವಾ ತರಾತುರಿಯಲ್ಲಿ ಗುಂಪುಗಳನ್ನು ರಚಿಸಬೇಕಾದರೆ ಗುಂಪು ರಚನೆ ಸಹಾಯಕವಾಗುತ್ತದೆ. ನೀವು ರಚಿಸುವ ಗುಂಪಿಗೆ ಯಾವುದೇ ನಿರ್ದಿಷ್ಟ ಹೆಸರನ್ನು ಕೊಡಬೇಕಾಗಿಲ್ಲ. ವಾಟ್ಸಾಪ್ನಲ್ಲಿ (WhatsApp) ಇನ್ನು ಮುಂದೆ ಹೆಸರಿಲ್ಲದ ಗುಂಪುಗಳು ಎನ್ನುವ ವೈಶಿಷ್ಟ್ಯತೆ ಲಭ್ಯವಿದೆ ಆಂಡ್ರಾಯ್ಡ್ ಬಳಕೆದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಸರಿಲ್ಲದೆ ಗುಂಪು ರಚನೆ ಮಾಡಬಹುದು ಹಾಗೂ ಅದರಲ್ಲಿ ನಿಮಗೆ ಬೇಕಾಗಿರುವ ಕಾಂಟಾಕ್ಟ್ ಕೂಡ ಸೇರಿಸಿಕೊಳ್ಳಬಹುದು.

ಗುಂಪುಗಳನ್ನು ರಚಿಸುವುದರಿಂದ ಗೌಪ್ಯತೆ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಡುತ್ತದೆ. ಇದರಲ್ಲಿ ಸೇರುವ ಸದಸ್ಯರು ಗುಂಪಿನ ಹೆಸರನ್ನು ವಿಭಿನ್ನವಾಗಿ ಸೇರಿಸಬಹುದು ಅಥವಾ ಸೇರಿಸದೆ ಇರಲೂಬಹುದು. ಇದರಲ್ಲಿ ಯಾವ ರೀತಿಯ ಕಾಂಟ್ಯಾಕ್ಟ್ ಇರುತ್ತದೆಯೋ ಅದರ ಆಧಾರದ ಮೇಲೆ ಗುಂಪಿನ ಹೆಸರು ವಿಭಿನ್ನವಾಗಿ ತೋರಿಸಲಾಗುತ್ತದೆ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಗುಂಪಿಗೆ ಸೇರಿಸಬಹುದಾದ ಸದಸ್ಯರ ಹೆಸರನ್ನು ಸೇವ್ ಮಾಡಿದರೆ ಗುಂಪಿನಲ್ಲಿ ಹೆಸರಿನ ಜೊತೆಗೆ ಫೋನ್ ನಂಬರ್ ಕೂಡ ಕಾಣಿಸುತ್ತದೆ.

ನೀವು ಕೆಲವು ದಿನಗಳಿಗೆ ಒಂದು ಗುಂಪನ್ನು ರಚಿಸಿ ನಂತರ ಅದನ್ನು ಡಿಲೀಟ್ ಮಾಡುವಂತಿದ್ದರೆ ಈ WhatsApp ಫೀಚರ್ ನಿಮಗೆ ಹೆಚ್ಚು ಪ್ರಯೋಜನಕಾರಿವಾಗಬಹುದು. ಇನ್ನು ಯಾರು ಗುಂಪನ್ನು ರಚಿದ್ದಾರೆ ಎನ್ನುವುದು ಗೊತ್ತಾಗಬೇಕಿದ್ದರೆ ಅವರ ಪೋನ್ ನಂ. ನೀವು ಸೇವ್ ಮಾಡಿಕೊಂಡಿದ್ದರೆ, ಆ ಗ್ರೂಪ್ ಯಾರು ಕ್ರಿಯೇಟ್ ಮಾಡಿದ್ದು ಎನ್ನುವುದು ನಿಮಗೆ ತಿಳಿಯುತ್ತದೆ.

Leave A Reply

Your email address will not be published.