Karnataka Times
Trending Stories, Viral News, Gossips & Everything in Kannada

Gaming Smartphone: 25000 ರೂ ಒಳಗೆ ಸಿಗುತ್ತಿರುವ ಬಜೆಟ್ ಫ್ರೆಂಡ್ಲಿ ಗೇಮಿಂಗ್ ಸ್ಮಾರ್ಟ್ ಫೋನ್ ಗಳು ಇಲ್ಲಿವೆ.

ಇಂದು ಸ್ಮಾರ್ಟ್ ಫೋನ್ ಬಳಸದೆ ಇರುವವರು ಯಾರು ಇಲ್ಲ. ಆದರೆ ಪ್ರತಿಯೊಬ್ಬ ಬಳಕೆದಾರನಿಗೂ ಸ್ಮಾರ್ಟ್ ಫೋನ್ ಬಗ್ಗೆ ತಮ್ಮದೇ ಆದ ರೀತಿಯ ಆದ್ಯತೆಗಳು ಇರುತ್ತವೆ. ಕೆಲವರಿಗೆ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಮೆರಾ ಚೆನ್ನಾಗಿರಬೇಕು, ಕೆಲವರಿಗೆ ಬ್ಯಾಟರಿ ಉತ್ತಮವಾಗಿರಬೇಕು ಇನ್ನು ಕೆಲವರಿಗೆ ಎಲ್ಲವೂ ಇದ್ದು, ಬಜೆಟ್ ಫ್ರೆಂಡ್ಲಿ ಆಗಿರಬೇಕು. ಕೆಲವು ಬಳಕೆದಾರಿಗೆ ಗೇಮಿಂಗ್ ಉತ್ತಮವಾಗಿರಬೇಕು. ಗ್ರಾಹಕರ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತಹ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

Advertisement

ಗೇಮಿಂಗ್ ವಿಚಾರಕ್ಕೆ ಬಂದರೆ ಕೆಲವು ಫೋನ್ಗಳು ದುಬಾರಿ ಆಗಿರುತ್ತವೆ. ಆದರೆ ಡಿಎಸ್ಎಲ್ಆರ್ ನಂತಹ ಎಫೆಕ್ಟ್ ಬೇಕು ಅಂದ್ರೆ ಸ್ಮಾರ್ಟ್ ಫೋನ್ ಗಳಿಗೆ ಗೇಮಿಂಗ್ ಗಾಗಿ ಹೆಚ್ಚು ಹಣ ಖರ್ಚು ಮಾಡಲೇಬೇಕು. ಆದ್ರು ನೀವು ಕಡಿಮೆ ಬೆಲೆಗೆ ಫೋನ್ ಹುಡುಕುತ್ತಿದ್ದರೆ ಅದಕ್ಕೆ ಇಲ್ಲಿದೆ ಆಯ್ಕೆ. 25,000ಗಳ ಬಜೆಟ್ ನಲ್ಲಿ ಉತ್ತಮ ಗೇಮಿಂಗ್ ಫೋನ್ (Gaming Smartphone) ಖರೀದಿ ಮಾಡಬಹುದು.

Advertisement

Redmi K50i 5G:

Advertisement

25,000 ಒಳಗಿನ ಗೇಮಿಂಗ್ ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸಿದ್ದರೆ ರೆಡ್ಮಿ ಕೆ 50 ಐ 5 ಜಿ ಬೆಸ್ಟ್ ಆಯ್ಕೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಚಿಪ್ ಸೆಟ್ ಅಳವಡಿಸಲಾಗಿರುವ ಈ ಫೋನ್ ಬಲವಾದ ಕಾರ್ಯ ಕ್ಷಮತೆ ಹೊಂದಿದೆ. 67w ಚಾರ್ಜಿಂಗ್ ಸಪೋರ್ಟ್ ಹಾಗೂ 5080 ಎಂಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

Advertisement

Realme 10 Pro Plus:

ರಿಯಲ್ ಮಿ 10 ಪ್ರೊ ಪ್ಲಸ್ ಕಡಿಮೆ ಬಜೆಟ್ ನಲ್ಲಿ ಹೆಚ್ಚು ಸಾಮರ್ಥ್ಯದ ಗೇಮಿಂಗ್ ಫೋನ್ ಗಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್ ಸೆಟ್ ನ್ನೂ ಈ ಸ್ಮಾರ್ಟ್ ಫೋನ್ ನಲ್ಲಿ ಅಳವಡಿಸಲಾಗಿದೆ. ಇನ್ನು ಬ್ಯಾಟರಿಯ ಸಾಮರ್ಥ್ಯವನ್ನು ನೋಡುವುದಾದರೆ 5000 ಎಂ ಎ ಹೆಚ್ ಬ್ಯಾಟರಿ ಅಳವಡಿಸಲಾಗಿದ್ದು, 67w supervooc ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದೆ.

Realme GT Neo 3T:

ಇದು ಕೂಡ ಅತ್ಯುತ್ತಮ ಗೇಮಿಂಗ್ ಸಾಧನವಾಗಿದ್ದು ಸ್ನಾಪ್ ಡ್ರಾಗನ್ 870 5g ಪ್ರೋಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಫೋನ್ ನಲ್ಲಿಯೂ 5000 mah ಬ್ಯಾಟರಿ ಪ್ಯಾಕ್ ಹೊಂದಿದ್ದು 80w ವೇದ ಚಾರ್ಜಿಂಗ್ ಬೆಂಬಲಿಸುತ್ತದೆ.

Xiaomi 11i:

25,000 ಗೇಮಿಂಗ್ ಸ್ಮಾರ್ಟ್ ಫೋನ್ ಗೆ ಈ ಫೋನ್ ಕೂಡ ಉತ್ತಮ ಆಯ್ಕೆ ಆಗಬಹುದು. ಜಿಯೊಮಿ 11ಐ ಗಿಮಿಂಗ ಫೋನ್ ಆಗಿದ್ದು ಅಕ್ವಾ ಮೀಡಿಯಾ ಟೆಕ್ ಡೈಮೆನ್ಸಿಟಿ 920 5ಜಿ ಎಲ್ಲಿ ಕಾರ್ಯ ನಿರ್ವಹಿಸುತ್ತದೆ. ಲಿ ಪಾಲಿಮರ್ ಬ್ಯಾಟರಿ ಸಾಧನ ಹೊಂದಿರುವ ಈ ಫೋನ್ 5160 ಎಂ ಎ ಹೆಚ್ ಸಾಮರ್ಥ್ಯ ಹೊಂದಿದೆ.

Leave A Reply

Your email address will not be published.