WhatsApp New Trick: ವಾಟ್ಸಾಪ್ ನ್ನು ಈಗ ಏಕಕಾಲದಲ್ಲಿ 4 ಕಡೆಗಳಲ್ಲಿ ಯೂಸ್ ಮಾಡಬಹುದು, ಇಲ್ಲಿದೆ ಟ್ರಿಕ್

Advertisement
ದಿನದಿಂದ ದಿನಕ್ಕೆ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿರುವ ವಾಟ್ಸ್ ಆ್ಯಪ್ (Whatsapp) ಬಳಕೆದಾರರ ನೆಚ್ಚಿನ ಆ್ಯಪ್, ಮೆಟಾ ಒಡೆತನದ ವಾಟ್ಸ್ ಆ್ಯಪ್ಗೆ ಮತ್ತಷ್ಟು ಹೊಸ ,ನೂತನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ,ಈಗ ಏನಿದ್ದರೂ ವಾಟ್ಸ್ ಆ್ಯಪ್ ನಲ್ಲೆ ಮಾತುಕತೆ. ಅದೇ ರೀತಿ ಮೆಸೆಂಜರ್ ಆ್ಯಪ್ ಎನಿಸಿಕೊಂಡ ವಾಟ್ಸ್ ಆ್ಯಪ್ ಈಗ ಹಿಂದಿಗಿಂತಲೂ ಹೊಸ ಮಾದರಿ ಎನ್ನ ಬಹುದು, ಕಾಲಕ್ಕೆ ತಕ್ಕಂತೆ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ಫೇಮಸ್ ಆಗುತ್ತಲೇ ಇದೆ.
ಏಕಕಾಲದಲ್ಲಿ 4 ಸಾಧನಗಳಿಗೆ ಲಿಂಕ್ ಮಾಡಿ
ಇದೀಗ ವಾಟ್ಸಾಪ್ ಏಕಕಾಲದಲ್ಲಿ 4 ಸಾಧನಗಳಿಗೆ ಲಿಂಕ್ ಮಾಡುವ ಯೋಜನೆಯನ್ನು ಗ್ರಾಹಕರಿಗೆ ನೀಡಿದೆ. ಇದು ಬಳಕೆದಾರರಿಗೆ ಒಂದೇ ಸಮಯದಲ್ಲಿ ವೆಬ್, ಡೆಸ್ಕ್ಟಾಪ್, ಪೋರ್ಟಲ್ ಮತ್ತು ಫೋನ್ನಂತಹ ಅನೇಕ ಟೂಲ್ ಗಳನ್ನು ಪ್ರವೇಶಿಸಲು ಅವಕಾಶ ಮಾಡಿ ಕೊಟ್ಟಿದೆ, ಇದರ ಮೂಲಕ ವಾಟ್ಸಾಪ್ ಅನ್ನು ಏಕಕಾಲದಲ್ಲಿ 4 ಆ್ಯಪ್ ಲಿಂಕ್ ಮಾಡಬಹುದು.
ಪೋನ್ ಸ್ವಿಚ್ ಆಫ್ ಆಗಿದ್ದರೂ ಬಳಕೆ ಮಾಡಬಹುದು
ವಾಟ್ಸಾಪ್ ಮೂಲಕ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಓಂದೇ ಸಮಯದಲ್ಲಿ ಇದರ ಮೂಲಕ ಬಳಕೆದಾರರು ತಮ್ಮ ಸಾಧನಗಳನ್ನು ಪರಸ್ಪರ ಸಂಪರ್ಕಿಸಲು ಸಾಧ್ಯವಾಗುತ್ತದೆ. ಈ ಹೊಸ ಫೀಚರ್ ಪಡೆಯಲು whatsapp.com/download ಗೆ ತಲುಪಿ ಈ ವೈಶಿಷ್ಟ್ಯ ಪಡೆಯಿರಿ, ಇದರಿಂದ ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸಾಪ್ ಬಳಕೆಗೆ ಯಾವುದೇ ತೊಂದರೆಯಾಗುವುದಿಲ್ಲ.
ಹೊಸ ಫೀಚರ್ಸ್
ವಾಟ್ಸ್ ಆ್ಯಪ್ ಎಲ್ಲೆಡೆ ಫೇಮಸ್ ಆಗಿದ್ದು ,ನಿಮ್ಮ ಮೂಡ್ ಗೆ ತಕ್ಕದಾದ ಇಮೇಜ್ ಅನ್ನು ಇಮೋಜಿ ಬದಲು ಅವತಾರ್ನಲ್ಲಿ ಕಳುಹಿಸಬಹುದು.
ಫೋಟೋ, ವಿಡಿಯೋ ಹಾಗೂ ಫೈಲ್‌ಗಳನ್ನು ಕಳುಹಿಸುವಂತೆಯೇ ಇವುಗಳನ್ನು ಸಹ ಶೇರ್ ಮಾಡಿಕೊಳ್ಳಬಹುದು. ನಿಮ್ಮ ಯಾವುದೇ ಸಂದೇಶ, ಪೈಲ್ಸ್ ನ್ನು ಸುಲಭವಾಗಿ ಇದರಲ್ಲಿ ತಲುಪಿಸಬಹುದು.