ಟೆಕ್ನೋ ಮೊಬೈಲ್ ಸಂಸ್ಥೆ ಈಗಾಗಲೇ ಹಲವಾರು ಅಗ್ಗದ ಹಾಗೂ ಅತ್ಯುತ್ತಮ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ಟೆಕ್ನೋ ಸ್ಪಾರ್ಕ್ 10 (Tecno Spark 10) ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಾಗಿದ್ದು ಹೀಲಿಯೋ ಜಿ 37 ಪ್ರೋಸೆಸರ್ ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ. ಈ ಫೋನಿನ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
Tecno Spark 10 Battery Backup:
ಸ್ಪೀಡ್ ಚಾರ್ಜಿಂಗ್ ಇರುವ 18 ಡಬ್ಲ್ಯೂ ಫ್ಲಾಶ್ ಚಾರ್ಜ್ ಬೆಂಬಲಿಸುವ 5000 ಎಂ ಎ ಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಫಿಕ್ಸೆಲ್ ಹೊಂದಿದ್ದು ಡುಯಲ್ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. 8 ಜಿಬಿ ರಾಮ್ ಈ ಫೋನಿನಲ್ಲಿಯೂ ಪಡೆಯಬಹುದು. ಮೆಟಾ ವೈಟ್, ಮೆಟ ಬ್ಲೂ ಹಾಗೂ ಮೆಟಾ ಬ್ಲ್ಯಾಕ್ ಈ ಮೂರು ಬಣ್ಣಗಳಲ್ಲಿ ಟೆಕ್ನೋ ಸ್ಪಾರ್ಕ್ ಲಭ್ಯವಿದೆ.
Tecno Spark 10 Features:
ಫೋರ್ ಜಿ ಫೋನ್ ಆಗಿರುವ ಟೆಕ್ನೋ ಸ್ಪಾರ್ಕ್ 6.6 ಇಂಚಿನ ಹೆಚ್ ಡಿ ಡಿಸ್ಪ್ಲೇ ಹೊಂದಿದೆ. 90hz ರಿಫ್ರೆಶ್ ದರ 120 HZ ರೇಟ್ ಹೊಂದಿದ್ದು 20: 15 ಅನುಪಾತದ ರಚನೆ ಕಾಣಬಹುದು.
Tecno Spark 10 Processor:
ಮೀಡಿಯಾ ಟೆಕ್ ಹಿಲಿಯೋ ಜಿ 37 ಪ್ರೋಸೆಸರ್ ಅಳವಡಿಸಲಾಗಿದ್ದು ಆಂಡ್ರಾಯ್ಡ್ 13ನೊಂದಿಗೆ ಕಾರ್ಯನಿರ್ವಹಿಸುತ್ತದೆ. 4ಜಿಬಿ ರಾಮ್ ಹಾಗೂ 64 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು 8gb ವರೆಗೆ ರಾಮ್ ವಿಸ್ತರಿಸಿಕೊಳ್ಳುವ ಆಯ್ಕೆ ಇದೆ. ಹಾಟ್ ಸ್ಪಾಟ್, ಬ್ಲೂಟೂತ್, ವೈಫೈ, ಯು ಎಸ್ ಬಿ, ಸಿ ಪೋರ್ಟ್ ಎಲ್ಲಾ ಕನೆಕ್ಟಿವಿಟಿಗಳನ್ನು ಬೆಂಬಲಿಸುತ್ತದೆ.
Tecno Spark 10 Price:
ಟೆಕ್ನೋ ಸ್ಪಾರ್ಕ್ 10 ಸದ್ಯ ಫಿಲಿಪೈನ್ಸ್ ನಲ್ಲಿ ಲಾಂಚ್ ಆಗಿದೆ. ಬಿಳಿ ನೀಲಿ ಹಾಗೂ ಕಪ್ಪು ಬಣ್ಣದ ಮೂರು ಆಯ್ಕೆಗಳನ್ನು ನೀಡಲಾಗಿದೆ. ದುಯಲ್ ಸಿಮ್ ಫೋರ್ ಜಿ ವೈ ಫೈ ಬ್ಲೂಟೂತ್ ಸೌಲಭ್ಯಗಳು ಕೂಡ ಇವೆ. ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಟೆಕ್ನೋ ಸ್ಪಾರ್ಕ್ 10 ಅಗ್ಗದ ಬೆಲೆಯ ಫೋನ್ ಬಿಡುಗಡೆಯಾಗಲಿದೆ.