Budget Smartphone: ಐಫೋನ್ ಗೆ ಸೆಡ್ಡು ಹೊಡೆಯಲು ಬಂತು ಇನ್ನೊಂದು ಕಡಿಮೆ ಬೆಲೆಯ ಬೆಂಕಿ ಫೋನ್!.

Advertisement
ಕ್ವಾಲಿಟಿಯ ವಿಚಾರಕ್ಕೆ ಬಂದ್ರೆ ಪ್ರತಿಯೊಬ್ಬರೂ ಕೂಡ iPhone ಬೆಸ್ಟ್ ಎಂದು ಹೇಳುತ್ತಾರೆ ಆದರೆ ಅದನ್ನು ಕೂಡ ಮೀರಿಸುವ ರೀತಿಯಲ್ಲಿ ಮೊಟೊರೊಲಾ ಸಂಸ್ಥೆಯ ಹೊಸ ಸ್ಮಾರ್ಟ್ ಫೋನ್ ಈಗ ಮಾರುಕಟ್ಟೆಗೆ ಬರುತ್ತಿದೆ. ಸದ್ಯಕ್ಕೆ ಸಪ್ಟೆಂಬರ್ 1ಕೆ Moto G84 ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿದ್ದು ಮತ್ತೊಂದು ಬಹುನಿರೀಕ್ಷಿತ ಫೋನ್ ಆಗಿರುವಂತಹ Moto G54 ಕೂಡ ಅತಿ ಶೀಘ್ರದಲ್ಲೇ ಲಾಂಚ್ ಆಗುವುದಕ್ಕೆ ತಯಾರಿಯನ್ನು ನಡೆಸಿಕೊಳ್ಳುತ್ತಿದೆ. ಹಾಗಿದ್ರೆ ಬನ್ನಿ ಮೊಟೊರೊಲಾ ಸಂಸ್ಥೆಯ ಈ ಬೆಳವಣಿಗೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
G53 ಯ ಉತ್ತರಾಧಿಕಾರಿಯ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ Moto G54 ಫೋನಿನ ಕುರಿತಂತೆ ಕಂಪನಿ ಹೆಚ್ಚಿನ ಅಧಿಕೃತ ಮಾಹಿತಿಗಳನ್ನು ಹೊರಹಾಕಿಲ್ಲ. G84 5G ಸೆಪ್ಟೆಂಬರ್ 1ಕ್ಕೆ ದೇಶದಲ್ಲಿ ಲಾಂಚ್ ಆಗಲಿದೆ. ಇನ್ನು ಈ ಫೋನಿನ ಬಗ್ಗೆ ಮಾತನಾಡುವುದಾದರೆ Centre Allign Punch Hole ಡಿಸ್ಪ್ಲೇ ಅನ್ನು ಇದು ಹೊಂದಿರಲಿದೆ. ಫೋನಿನ ಹಿಂಬದಿಯಲ್ಲಿ ಇರುವಂತಹ ಕ್ಯಾಮೆರಾದಲ್ಲಿ 50MP OIS ಪ್ರಮುಖ ಸೆನ್ಸರ್ ಸಾಮರ್ಥ್ಯವನ್ನು ಹೊಂದಿರುವ ಕ್ಯಾಮೆರಾ ಇದೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಸೆಕೆಂಡರಿ ಲೆನ್ಸ್ ಕೂಡ ಇದರಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿ ಇದೆ. ಈ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಬಣ್ಣಗಳ ಆಯ್ಕೆಯಲ್ಲಿ ಕೂಡ ಬಿಡುಗಡೆಯಾಗಲಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಫೋನ್ ಗಳ ನಡುವೆ ಕಾಂಪಿಟೇಶನ್ ಇರುವಾಗಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಸೂಪರ್ ಫೀಚರ್ ನೀಡುವುದಕ್ಕೆ ಈ ಫೋನ್ ಬರ್ತಿರೋದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಈ ಫೋನ್ ಯಾವಾಗ ಭಾರತದ ಮಾರುಕಟ್ಟೆಗೆ ಬರುತ್ತದೆ ಎನ್ನುವ ಹಾಗೆ ಕಾಯುವಂತೆ ಮಾಡಿದೆ.
Moto G54 ಈಗಾಗಲೇ TENAA ಸರ್ಟಿಫಿಕೇಷನ್ ಅನ್ನು ಪಡೆದುಕೊಂಡಿರುವಂತಹ ಸ್ಮಾರ್ಟ್ ಫೋನ್ ಆಗಿದೆ ಎಂಬುದಾಗಿ ತಿಳಿದುಬಂದಿದೆ. ಅಲ್ಲಿಂದಲೇ ಈ ಫೋನಿನ ಕೆಲವೊಂದು ಫೋಟೋಗಳು ಕೂಡ ಲೀಕ್ ಆಗಿದೆ. 6.5 ಇಂಚಿನ FHD ಡಿಸ್ಪ್ಲೇ ಅನ್ನು ಇದು ಹೊಂದಿದೆ. 120hz ರಿಫ್ರೇಶ್ ರೇಟ್ ಅನ್ನು ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದು ಎಂಬುದಾಗಿ ಊಹಿಸಬಹುದಾಗಿದೆ.
Moto G54 ಫೋನಿನ ಸೆಲ್ಫಿ ಕ್ಯಾಮೆರಾದ ರೂಪದಲ್ಲಿ 16ಎಂಪಿ ಕ್ಲಾರಿಟಿಯನ್ನು ನೀವು ಹೊಂದಬಹುದಾಗಿದೆ. 8GB RAM ಜೊತೆಗೆ 256GB ಇಂಟರ್ನಲ್ ಸ್ಟೋರೇಜ್ ಅನ್ನು ಕೂಡ ನೀವು ಈ ಫೋನ್ ಜೊತೆಗೆ ಪಡೆದುಕೊಳ್ಳಬಹುದಾಗಿದೆ. 5000mAh ಬ್ಯಾಟರಿ ಸ್ಟ್ಯಾಂಡ್ ಬೈ ಅನ್ನು ಕೂಡ ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದ್ದು ಕಂಪನಿ ಇದರ ಬೆಲೆ ಕುರಿತಂತೆ ಎಲ್ಲೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ ಆದರೆ 24,000 ರೂಪಾಯಿ ಗಳ ಬೆಲೆಯಲ್ಲಿ ನೀವು ಈ ಫೋನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ ಎಂಬುದಾಗಿ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಮೂಲಗಳು ತಿಳಿಸಿವೆ.