Smart TV: 10,000 ಒಳಗೆ ಸ್ಮಾರ್ಟ್ ಟಿವಿ ಖರೀದಿ ಮಾಡಬೇಕಾ ಹಾಗಿದ್ರೆ ಇಲ್ಲಿದೆ ನೋಡಿ ಬೆಸ್ಟ್ ಆಫರ್ಸ್!

Advertisement
ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಸ್ಮಾರ್ಟ್ ಟಿವಿ (Smart TV) ಗಳಲ್ಲಿ ವೈಶಿಷ್ಟತೆಗಳನ್ನು ಕೂಡ ಅಳವಡಿಸಲಾಗಿರುತ್ತದೆ. ಇನ್ನು ಬಜೆಟ್ ಎಷ್ಟಿದೆಯೋ ಅಷ್ಟರಲ್ಲಿಯೇ ಅತ್ಯುತ್ತಮ ಸ್ಮಾರ್ಟ್ ಟಿವಿ (Smart TV) ಖರೀದಿ ಮಾಡಬೇಕು ಅಂದ್ರೆ ಇಲ್ಲಿದೆ ಕೆಲವು ಟಿವಿ ಗಳ ಬಗ್ಗೆ ಮಾಹಿತಿ. ನೀವು ಕೇವಲ ಹತ್ತು ಸಾವಿರ ಬಜೆಟ್ ನಲ್ಲಿ ಅತ್ಯುತ್ತಮ ರೆಸಲ್ಯೂಶನ್ (Resolution) ಇರುವಂತಹ ಟಿವಿಗಳನ್ನು ಖರೀದಿ ಮಾಡಬಹುದು.
Infinix 32 Y 1:
32 ಇಂಚಿನ ಹೆಚ್ಚು ಡಿಎಲ್ ಇಡಿ ಡಿಸ್ಪ್ಲೇ ಹೊಂದಿರುವ ಈ ಟಿವಿ ವಾಟ್ ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟಿವಿಯನ್ನು ನೀವು ಫ್ಲಿಪ್ಕಾರ್ಟ್ (Flipkart) ನಲ್ಲಿ 8,499 ರೂ.ಗಳಿಗೆ ಖರೀದಿ ಮಾಡಬಹುದು. 60 h ಹೆಚ್ಚು ರಿಫ್ರೇಶ್ ರೇಟ್ ನೊಂದಿಗೆ 1366*768 ರೆಸುಲ್ಯೂಷನ್ ಹೊಂದಿದೆ. 250 ನಿಟ್ಸ್ ಬ್ರೈಟ್ ನೆಸ್ ನೀಡುತ್ತದೆ. ಆಡ್ಸನ್ A-3210S: ಇದೂ ಕೂಡ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ (LED Display) ಹೊಂದಿರುವ ಸ್ಮಾರ್ಟ್ ಟಿವಿಯಾಗಿದ್ದು, ಮೂಲಕ 7,890 ರೂ. ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿ ಮಾಡಬಹುದು. 60 Hz ರಿಫ್ರೆಶ್ ದರ ಹಾಗೂ 1366 x 768 ರೆಸಲ್ಯೂಶನ್ ಈ ಟಿವಿಯಲ್ಲಿದ್ದು, ಸೌಂಡ್ ಕ್ವಾಲಿಟಿ ಕೂದ ಅತ್ಯುತ್ತಮವಾಗಿದೆ.
Dinora DY-LD32H4S:
ಇದು 60 Hz ರಿಫ್ರೆಶ್ ದರ 1366 x 768 ಪಿಕ್ಸೆಲ್ ರೆಸಲ್ಯೂಶನ್, (Resolution) ಹೆಚ್ ಡಿ ಎಲ್ ಇಡಿ ಸ್ಕ್ರೀನ್ ಹೊಂದಿರುವ, 250 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಇರುವ ಸ್ಮಾರ್ಟ್ ಟಿವಿ (Smart TV)ಇದಾಗಿದೆ. ಇದರ ಬೆಲೆ ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ 8,299 ರೂ.ಗಳಿಗೆ ಕೊಂಡುಕೊಳ್ಳಬಹುದು.
Thomson 32ALPHA007BL:
ಥಾಮ್ಸನ್ ಕೂಡ ಅತ್ಯುತ್ತಮವಾದ ಸ್ಮಾರ್ಟ್ ಟಿವಿ (Smart TV) ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 32 ಇಂಚಿನ ಟಿವಿಯನ್ನು ನೀವು 8,499 ರೂ. ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಮಾಡಬಹುದು. ಇದರಲ್ಲಿಯೂ ಹೆಚ್‌ಡಿಎಲ್‌ಇಡಿ ಡಿಸ್‌ಪ್ಲೇ (LED Display) ಇದೆ. 60 Hz ರಿಫ್ರೆಶ್ ದರದೊಂದಿಗೆ 1366 x 768 ಪಿಕ್ಸೆಲ್ ರೆಸಲ್ಯೂಶನ್ ಕೊಡುತ್ತದೆ. 400 ನಿಟ್ಸ್ ಬ್ರೈಟ್‌ನೆಸ್ ಆಯ್ಕೆಯನ್ನೂ ಹೊಂದಿದ್ದು, ಉತ್ತಮ ಸೌಂಡ್ ಕ್ವಾಲಿಟಿ ನೀಡುತ್ತದೆ.
kodak 32hdx7xpro:
32 ಇಂಚಿನ ಈ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಡಿಸ್‌ಪ್ಲೇ ಟಿವಿಯ ಬೆಲೆ ಮೂಲಕ 9,490 ರೂ. ಗಳು. 60 Hz ರಿಫ್ರೆಶ್ ದರ,1366 x 768 ಪಿಕ್ಸೆಲ್ ರೆಸಲ್ಯೂಶನ್, 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಈ ಸ್ಮಾರ್ಟ್ ಟಿವಿ (Smart TV) ಯಲ್ಲಿ ಪಡೆಯಬಹುದು.
Iffalcon 32f53:
ಇದರ ಬೆಲೆ 9,499ರೂಗಳು. ವೈಶಿಷ್ಟ್ಯತೆ ಬಗ್ಗೆ ಹೇಳುವುದಾದರೆ 60 Hz ರಿಫ್ರೆಶ್ ದರ 1366 x 768 ಪಿಕ್ಸೆಲ್ ರೆಸಲ್ಯೂಶನ್, 220 ನಿಟ್ಸ್ ಬ್ರೈಟ್‌ನೆಸ್ ಹಿಂದಿದ್ದು 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಇರುವ ಸ್ಮಾರ್ಟ್ ಟಿವಿ (Smart TV) ಇದಾಗಿದೆ.