Karnataka Times
Trending Stories, Viral News, Gossips & Everything in Kannada

iPhone: ಮೊದಲ ಐಫೋನ್ ಜಾಹೀರಾತಿನಲ್ಲಿ ಏನೆಂದು ಬರೆದಿತ್ತು ಗೊತ್ತಾ? ಹರಾಜಾಗಿದ್ದು ಎಷ್ಟು ಕೋಟಿಗೆ.

Advertisement

ಜಗತ್ತಿನಲ್ಲಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬರೂ ಕೂಡ ಗ್ಯಾಜೆಟ್ ಗಳ ವಿಚಾರಕ್ಕೆ ಬಂದರೆ ಆಪಲ್ ಸಂಸ್ಥೆಯ ಪ್ರತಿಯೊಂದು ವಸ್ತುಗಳು ಕೂಡ ದುಬಾರಿಯಾಗಿದ್ದರೂ ಕೂಡ ಕ್ವಾಲಿಟಿ ವಿಚಾರದಲ್ಲಿ ಅವುಗಳನ್ನು ಮೀರಿಸುವಂತಹ ಸಂಸ್ಥೆ ಇನ್ನೊಂದಿಲ್ಲ ಎನ್ನುವ ರೀತಿಯಲ್ಲಿ ಬೆಳೆದು ನಿಂತಿವೆ. ಇನ್ನು ಆಪಲ್ ಸಂಸ್ಥೆಯನ್ನು ಹುಟ್ಟು ಹಾಕಿರುವಂತಹ ಪಿತಾಮಹ ಎಂದು ಕರೆಯಲ್ಪಡುವ ವ್ಯಕ್ತಿಯೆಂದರೆ ಅದು ಸ್ಟೀವ್ ಜಾಬ್ಸ್(Steve Jobs). ಬನ್ನಿ ಅವರ ಬಗ್ಗೆ ಒಂದು ಇಂಟರೆಸ್ಟಿಂಗ್ ಮಾಹಿತಿ ಸಿಕ್ಕಿದ್ದು ಅದರ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

1976 ರಲ್ಲಿ ಸ್ಟೀವ್ ಜಾಬ್ಸ್ ಬೈಂಡರ್ ಶೀಟ್ ನಲ್ಲಿ Apple 1 ಕಂಪ್ಯೂಟರ್ ಅನ್ನು ಮಾರಾಟ ಮಾಡಲು ತಮ್ಮ ಕೈಯಿಂದಲೇ ಬರಹಗಳನ್ನು ಬರೆದು ಜಾಹೀರಾತನ್ನು ಸಿದ್ಧಪಡಿಸಿದರು. ಜಾಬ್ಸ್ ರವರ ಕೈಬರಹದಲ್ಲಿ ಆ ಜಾಹೀರಾತಿನ ಪ್ರತಿಯಲ್ಲಿ ಹೇಳಿರುವ ಪ್ರಕಾರ ಅವರ ಕಂಪ್ಯೂಟರ್ 8K Bytes RAM ಅನ್ನು ಹೊಂದಿದೆ. CRT ಟರ್ಮಿನಲ್ ಕೀಬೋರ್ಡ್ ಯೂನಿಟ್ ಜೊತೆಗೆ ಇದೆ, ಕಂಪೋಸಿಟ್ ವಿಡಿಯೋ ಔಟ್ ಪುಟ್, edge Connector ಮೂಲಕ 65k ವರೆಗೂ ಕೂಡ ವಿಸ್ತರಿಸಬಹುದು ಎಂಬುದಾಗಿ ಅದರಲ್ಲಿ ತಿಳಿಸಿತ್ತು.

 

 

ಬೇಸಿಕ್ ಪ್ರೋಗ್ರಾಮಿಂಗ್ ಕಾರಣದಿಂದಾಗಿ 6501 ರಿಂದ 6502 ಮೈಕ್ರೋ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ ಎಂಬುದಾಗಿ ಕೂಡ ಅದರಲ್ಲಿ ತಿಳಿಸಲಾಗಿದೆ. ಒಟ್ಟಾರೆಯಾಗಿ ಮಾರಾಟ ಮಾಡಲು ಸಿದ್ಧವಾಗಿದ್ದಂತಹ ಆ ಕಂಪ್ಯೂಟರ್ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಕೂಡ ತಮ್ಮ ಸ್ವಂತ ಕಯ್ಯಾರ ಜಾಬ್ಸ್ ಬರೆದು ಜಾಹಿರಾತಿನ ರೂಪದಲ್ಲಿ ಸಿದ್ಧಪಡಿಸಿದ್ದರು. ಕ್ಯಾಲಿಫೋರ್ನಿಯಾದಲ್ಲಿ ತೋರ್ಪಡಿಸಲಾಗಿದ್ದ ಈ ಪ್ರತಿಯನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ ನಾವು ಕಾಣುತ್ತಿದ್ದೇವೆ.

ಈ ಸಂದರ್ಭದಲ್ಲಿ ಜಾಬ್ಸ್ ಈ ಜಾಹೀರಾತಿನ ಫೋಟೋ ತೆಗೆದುಕೊಳ್ಳುವಾಗ ಕ್ಯಾಮೆರಾ ಅಲುಗಾಡುತ್ತಿತ್ತು ಎನ್ನುವ ಕಾರಣಕ್ಕಾಗಿ ಕೂಡ ಫೋಟೋ ಕ್ಲಾರಿಟಿ ಚೆನ್ನಾಗಿ ಬಂದಿಲ್ಲ ಎಂಬುದಾಗಿ ಕೂಡ ಹೇಳಿದ್ರಂತೆ. Interface Magazine ನಲ್ಲಿ 1976ರ ಜುಲೈನಲ್ಲಿ ಪೋಸ್ಟ್ ಮಾಡಲಾಗಿರುವಂತಹ ಜಾಹೀರಾತು ಎಂಬುದಾಗಿ ಕೂಡ ತಿಳಿದು ಬಂದಿದೆ.

ಆ ಕಾಲದಲ್ಲಿ Steve Jobs ತಮ್ಮ ಸ್ವಂತ ಕೈಯಾರೆ ಬರೆದಿದ್ದ Apple 1 ಕಂಪ್ಯೂಟರ್ನ ಜಾಹೀರಾತು ಪ್ರತಿ ಈಗ ಬಾಸ್ಟನ್ ಮೂಲದ RR Auction ನಲ್ಲಿ ಬರೋಬ್ಬರಿ 1.75 ಲಕ್ಷ ಡಾಲರ್ ಗಳಿಗೂ ಅಧಿಕ ಬೆಲೆಯಲ್ಲಿ ಅಂದರೆ ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದರೆ ಸರಿಸುಮಾರು 1.4 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಎಂಬುದಾಗಿ ತಿಳಿದು ಬಂದಿದೆ. 2011 ರಲ್ಲಿ ಮರಣ ಹೊಂದಿರುವಂತಹ ಆಪಲ್ ಪಿತಾಮಹ ಸ್ಟೀವ್ ಜಾಬ್ಸ್ ರವರ ಈ ಕೈಬರಹದ ಜಾಹೀರಾತು ಪ್ರತಿಗೆ ಯಾವ ರೀತಿಯಲ್ಲಿ ಮೌಲ್ಯ ಇದೆ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Leave A Reply

Your email address will not be published.