SIM Port: ಸಿಮ್ ಪೋರ್ಟ್ ಮಾಡುವ ಎಲ್ಲರಿಗೂ ಹೊಸ ಸೂಚನೆ

Advertisement
ಜಿಯೋ, ವಿ ಐ ಏರ್ಟೆಲ್ ಹೀಗೆ ಬೇರೆ ಬೇರೆ ಟೆಲಿಕಾಂ ಕಂಪನಿಗಳು ನಮ್ಮ ದೇಶದಲ್ಲಿ ಇಂದು ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವಂತಹ ಹಲವು ರಿಚಾರ್ಜ್ ಪ್ಲಾನ್ ಗಳನ್ನು ಬೇರೆ ಬೇರೆ ರೀತಿ ಉಪಯೋಗವಾಗುವಂತಹ ಸಿಮ್ ಕಾರ್ಡ್ (SIM Card) ಗಳನ್ನು ನೀಡುತ್ತವೆ. ಜನರು ತಮ್ಮ ಆಯ್ಕೆಗೆ ಅನುಸಾರವಾಗಿ ಟೆಲಿಕಾಂ ಕಂಪನಿಗಳ ಸಿಮ್ ಕಾರ್ಡ್ ಬಳಸುತ್ತಾರೆ. ಆದರೆ ಕೆಲವೊಮ್ಮೆ ಆ ಸಿಮ್ ಅಗತ್ಯ ಇಲ್ಲ ಎಂದು ಅನಿಸಿದರೆ ಇನ್ನೊಂದು ಸಂಖ್ಯೆಯನ್ನು ಪೋರ್ಟ್ ಮಾಡುವುದರ ಮೂಲಕ ಪಡೆದುಕೊಳ್ಳಬಹುದು.
ಹೌದು ಮೊದಲೆಲ್ಲ ಬೇರೆ ನಂಬರ್ ಬೇಕು ಅಂದರೆ ಅಂಗಡಿಗೆ ಹೋಗಿ ಹೊಸ ಸಿಮ್ ಖರೀದಿ ಮಾಡಿಕೊಳ್ಳಬಹುದು ಆದರೆ ಈಗ ಇಂತಹ ಯಾವ ಸಮಸ್ಯೆಯೂ ಇಲ್ಲ ನೀವು ಸಿಮ್ ಪೋರ್ಟ್ (SIM Port) ಮಾಡಿಕೊಳ್ಳುವುದರ ಮೂಲಕ ಮನೆಯಲ್ಲಿಯೇ ಕುಳಿತು ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳಬಹುದು ಇಂತಹ ಒಂದು ಸೌಲಭ್ಯವನ್ನ ಜಿಯೋ (Jio) ತನ್ನ ಗ್ರಾಹಕರಿಗೆ ನೀಡುತ್ತಿದೆ. ಹಾಗಾದರೆ ಮೊಬೈಲ್ ಸಂಖ್ಯೆನ ವೋಟ್ ಮಾಡಿಕೊಳ್ಳುವುದು ಹೇಗೆ ನೋಡೋಣ.
ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಹೇಗೆ ಮಾಡಿ:
- ಮೊದಲನೆಯದಾಗಿ ಹೊಸ ಸಿಮ್ ನಂಬರ್ ಪಡೆಯಲು, ನೀವು ಸಿಮ್ ಪೋರ್ಟ್ (SIM Port) ಎನ್ನುವ ಸಂದೇಶವನ್ನು ನಿಮ್ಮ ಕಂಪನಿಗೆ ಕಳುಹಿಸಬೇಕು.
- ಇದಕ್ಕಾಗಿ PORT <ಮೊಬೈಲ್ ಸಂಖ್ಯೆ> ಯನ್ನೂ ಟೈಪ್ ಮಾಡಿ 1900 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ.
- ನೀವು ಈ ರೀತಿ ಸಂದೇಶ ಕಳುಹಿಸಿದ ನಂತರ ನಿಮಗೆ ಒಂದು ಪೋರ್ಟಿಂಗ್ ಕೋಡ್ ನೀಡಲಾಗುತ್ತದೆ ಅದನ್ನು ನಿಮ್ಮ ಬಳಿ ಡಿಲೀಟ್ ಮಾಡದೆ ಹಾಗೆ ಇರಿಸಿಕೊಳ್ಳಿ.
- ಪೋರ್ಟ್ಂಗ್ ಸಂಖ್ಯೆ ಸಿಕ್ಕ ನಂತರ ಸಿಮ್ ಅನ್ನು ಮನೆಗೆ ಆರ್ಡರ್ ಮಾಡಿಕೊಳ್ಳಲು ಸಾಧ್ಯವಿದೆ.
ಸಿಮ್ ಬುಕ್ ಮಾಡುವುದು ಹೇಗೆ
- ನೀವು ಜಿಯೋ (Jio) ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.
- ಅಲ್ಲಿ ಮೂರು ಹಂತಗಳಲ್ಲಿ ಪೋರ್ಟಿಂಗ್ ಮಾಡಲು ಅವಕಾಶವಿರುತ್ತದೆ.
- ನಂತರ ಪೋರ್ಟ್ ಟು ಜಿಯೋ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳಬೇಕು. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಬೇರೆ ಸಂಖ್ಯೆ ಸಿಗುತ್ತದೆ.
ಸಿಮ್ ಕಾರ್ಡ್ ಹೋಂ ಡೆಲಿವರಿ:
ನೀವು ಜಿಯೋ ನಂಬರ್ ಗೆ ಪೋರ್ಟ್ ಆಗಲು ಬಯಸಿದರೆ ನಿಮ್ಮ ಹೆಸರು ಮತ್ತು ಹಳೆಯ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಆ ನಂಬರ್ಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ. ಓಟಿಪಿ ಕಳುಹಿಸಿದ ನಂತರ ನೀವು ಅದನ್ನು ವೆಬ್ಸೈಟ್ನಲ್ಲಿ ನಮೂದಿಸಿದರೆ ನಿಮ್ಮ ಸಿಮ್ ಯಾವ ವಿಳಾಸಕ್ಕೆ ತಲುಪಬೇಕು ಎಂದು ನಿಮ್ಮ ವಿಳಾಸವನ್ನು ಕೂಡ ನೀವು ನೀಡಬೇಕಾಗುತ್ತದೆ. ಇಷ್ಟು ಮಾಡಿದರೆ ಸಾಕು ನಿಮಗೆ ಹೊಸ ಜಿಯೋ ಸಿಮ್ (Jio SIM) ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇದು ಸಂಪೂರ್ಣವಾಗಿರುವ ಉಚಿತವಾಗಿರುವ ಪ್ರಕ್ರಿಯೆಯಾಗಿದೆ. ಮೊದಲಿನ ಹಾಗೆ ಸಿಮ್ ಅಂಗಡಿಗೆ ಹೋಗಿ ಕಾದು ಕುಳಿತು ಸಿಮ್ ತೆಗೆದುಕೊಳ್ಳುವ ಅಗತ್ಯವೇ ಇಲ್ಲ.