Karnataka Times
Trending Stories, Viral News, Gossips & Everything in Kannada

UPI Payment Charges: ಗೂಗಲ್ ಪೇ, ಫೋನ್ ಪೇ ಗೆ ಇನ್ಮೇಲೆ ಹಣ ಕಟ್ಟಬೇಕಾ, ಇಲ್ಲಿದೆ ಅಸಲಿ ನಿರ್ಧಾರ

Advertisement

ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ನೀವೆಲ್ಲರೂ ನೋಡಿರಬಹುದು ಗೂಗಲ್ ಪೇ(Google Pay) ಹಾಗೂ ಫೋನ್ ಪೇ(Phone Pe) ನಂತಹ ಯುಪಿಐ ಆಧಾರಿತ ಆನ್ಲೈನ್ ಟ್ರಾನ್ಸಾಕ್ಷನ್ ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಕಳಿಸಿದರೆ ಅದರಲ್ಲಿ ಶುಲ್ಕ ಕೂಡ ಕಡಿತಗೊಳ್ಳುತ್ತದೆ ಎಂಬುದಾಗಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಓಡಾಡಿದ್ದವು. ಬನ್ನಿ ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ನೀವೆಲ್ಲರೂ ನೋಡಿರಬಹುದು ಗೂಗಲ್ ಪೇ(Google Pay) ಹಾಗೂ ಇದರ ಕುರಿತಂತೆ ನಿಜವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಇಂಡಿಯಾ (NPCI) ಈಗಾಗಲೇ ಸ್ಪಷ್ಟೀಕರಿಸಿರುವ ಪ್ರಕಾರ ಯಾವುದೇ ಆನ್ಲೈನ್ ಟ್ರಾನ್ಸಾಕ್ಷನ್ ನಲ್ಲಿ ಈ ರೀತಿಯ ಯಾವುದೇ ಶುಲ್ಕಗಳು ಕೂಡ ಕಡಿತಗೊಳ್ಳುವುದಿಲ್ಲ ಎಂಬುದನ್ನು ಹೇಳಿದೆ. NPCI ನೀಡಿರುವಂತಹ ಹೇಳಿಕೆಯ ಪ್ರಕಾರ ಪ್ರೊಡ್ಯೂಸರ್ ಪ್ರೈಸ್ ಇಂಡೆಕ್ಸ್(PPI) ಮೂಲಕ ವ್ಯವಹಾರ ನಡೆಸುವವರಿಗೆ ಇಂಟರ್ ಚೇಂಜ್ ಶುಲ್ಕ ಲಗತ್ತಿಸಲಾಗುವುದು ಎಂಬುದಾಗಿ ಹೇಳಿದೆ. ಈಗಾಗಲೇ ನಿಗಮ ಹೇಳಿರುವ ಪ್ರಕಾರ ಪಿಪಿಐ ಅನ್ನು ಅಂತರ್ಚಾಲಿತಾ ಯುಪಿಐ ವಿಭಾಗದಲ್ಲಿ ಅಳವಡಿಸಿಕೊಳ್ಳುವ ಯೋಜನೆಯನ್ನು ಹಾಕಿದೆ ಎಂಬುದಾಗಿ ತಿಳಿಸಿದೆ.

ಹೀಗಾಗಿ ಈ ಟ್ರಾನ್ಸಾಕ್ಷನ್ ಅಧಿನಿಯಮದಲ್ಲಿ 2000ಗಳಿಗೂ ಅಧಿಕ ಟ್ರಾನ್ಸಾಕ್ಷನ್ ಮಾಡಿದರೆ ಅದರ ಮೇಲೆ 1.1% ಶುಲ್ಕವನ್ನು ವಿಧಿಸಲಾಗುತ್ತದೆ ಎಂಬುದಾಗಿ ಹೇಳಿದೆ. ಈ ಶುಲ್ಕ ಎನ್ನುವುದು ಕೇವಲ PPI ಟ್ರಾನ್ಸಾಕ್ಷನ್ ಅನ್ನು ಮಾಡುವಂತಹ ವ್ಯಾಪಾರಿಗಳ ಟ್ರಾನ್ಸಾಕ್ಷನ್ ನಲ್ಲಿ ಮಾತ್ರ ವಿಧಿಸಲಾಗುತ್ತದೆ ಎಂಬುದಾಗಿ ಸ್ಪಷ್ಟೀಕರಿಸಿದೆ. ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ನೇರವಾಗಿ ಯುಪಿಐ ಮೂಲಕ ಮಾಡಲಾಗುವಂತಹ ಯಾವುದೇ ಟ್ರಾನ್ಸಾಕ್ಷನ್ ಗಳಿಗೂ ಕೂಡ ಶುಲ್ಕವನ್ನು ಹೇರಲಾಗುವುದಿಲ್ಲ ಎಂಬುದನ್ನು ಕೂಡ ಇಲ್ಲಿ ಸ್ಪಷ್ಟಪಡಿಸಲಾಗಿದೆ.

ಹೀಗಾಗಿ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತಹ ಯುಪಿಐ ಟ್ರಾನ್ಸಾಕ್ಷನ್ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ ಹೀಗಾಗಿ ಈ ರೀತಿ ಟ್ರಾನ್ಸಾಕ್ಷನ್ ಮಾಡುವ ಮೂಲಕ ಗ್ರಾಹಕ ಹಾಗೂ ಅದನ್ನು ರಿಸೀವ್ ಮಾಡುವಂತಹ ಇಬ್ಬರೂ ಕೂಡ ಶುಲ್ಕ ಮುಕ್ತರಾಗಿ ವ್ಯಾಪಾರ ವ್ಯವಹಾರವನ್ನು ನಡೆಸಬಹುದಾಗಿದೆ ಎಂಬುದಾಗಿ ತಿಳಿಸಲಾಗಿದೆ. ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.