SpaceX ಕಂಪನಿಯ ಸ್ಟಾರ್‌ಲಿಂಕ್ (Starlink) ಸ್ಯಾಟಲೈಟ್ ಇಂಟರ್ನೆಟ್ ಸೇವೆ ಭಾರತಕ್ಕೆ ಬರುವ ಅಂತಿಮ ಹಂತದಲ್ಲಿದೆ. ಡಿಪಾರ್ಟ್ಮೆಂಟ್ ಆ ಟೆಲಿಕಮ್ಯುನಿಕೇಷನ್ಸ್ (DoT) ಈಗಾಗಲೇ ಕಂಪನಿಗೆ ಅಗತ್ಯವಾದ ಪ್ರಮುಖ ಲೈಸೆನ್ಸ್‌ಗಳನ್ನು
ನೀಡಿದೆ. ಆದರೆ ವ್ಯಾಪಾರಿಕ ಸೇವೆ ಪ್ರಾರಂಭಿಸಲು ಬೇಕಾದ ಕೆಲವು ಅಂತಿಮ ಅನುಮೋದನೆಗಳು ಮತ್ತು ಸ್ಪೆಕ್ಟ್ರಮ್ ಸಂಬಂಧಿತ ತೀರ್ಮಾನಗಳು ಬಾಕಿ ಇರುವುದರಿಂದ ಗ್ರಾಹಕರ ಕೈಗೆ ತಲುಪುವ ಹಂತಕ್ಕೆ ಬಂದಿಲ್ಲ.
ಡಿಸೆಂಬರ್ 10, 2025ರಂದು ಮಿನಿಸ್ಟರ್ ಆಫ್ ಕಮ್ಯುನಿಕೇಷನ್ಸ್ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಟಾರ್‌ಲಿಂಕ್ ಉಪಾಧ್ಯಕ್ಷೆ ಲಾರೆನ್ ಡ್ರೇಯರ್ ಸೇರಿದಂತೆ ಕಂಪನಿಯ ಹಿರಿಯ ಅಧಿಕಾರಿಗಳನ್ನು
ಭೇಟಿಯಾಗಿ, ದೇಶದಲ್ಲಿ ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದಾರೆ. ಈ ಸಭೆಯು ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಯನ್ನು ಪ್ರಾರಂಭಿಸುವ ನಿರ್ಧಾರದ ಪ್ರಮುಖ ಬೆಳವಣಿಗೆಯಾಗಿ ಪರಿಗಣಿಸಬಹುದು.
ಲೈಸೆನ್ಸ್ ಮತ್ತು ಅನುಮೋದನೆಗಳು: ಸ್ಟಾರ್‌ಲಿಂಕ್ ಯಾವ ಹಂತಕ್ಕೆ ಬಂದಿದೆ?
ಇದುವರೆಗೆ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ದೊರೆತಿರುವ ಪ್ರಮುಖ ಅನುಮೋದನೆಗಳು:
- GMPCS (Global Mobile Personal Communication by Satellite) ಲೈಸೆನ್ಸ್:
ಇದು ಸ್ಯಾಟಲೈಟ್ ಮೂಲಕ ಡೇಟಾ ಹಾಗೂ ಧ್ವನಿ ಸೇವೆ ನೀಡಲು DoT ನೀಡುವ ಪ್ರಮುಖ ಅನುಮೋದನೆಯಾಗಿದ್ದು. ಸ್ಟಾರ್‌ಲಿಂಕ್ ಈಗ
ಭಾರತದಲ್ಲಿ OneWeb ಮತ್ತು Jio Satellite Communications ನಂತರ ಈ ಲೈಸೆನ್ಸ್ ಪಡೆದ ಕಂಪನಿಗಳಲ್ಲಿ ಒಂದು. - VSAT ಹಾಗೂ ವಿಮಾನ/ಸಮುದ್ರ ಸಂಪರ್ಕ ಅನುಮೋದನೆ:
ವಿಮಾನ, ಹಡಗು, ಕಾರ್ಪೊರೇಟ್ ಮತ್ತು ಇತರ ವಿಶೇಷ ಕ್ಷೇತ್ರಗಳಿಗೆ ಸ್ಯಾಟಲೈಟ್ ಕನೆಕ್ಟಿವಿಟಿ ನೀಡಲು
ತಾಂತ್ರಿಕ ಅನುಮೋದನೆಗಳು ಕೂಡ ಸ್ಟಾರ್‌ಲಿಂಕ್ ಗೆ ಸಿಕ್ಕಿವೆ.
ಆದಾಗ್ಯೂ, ವ್ಯಾಪಾರಿಕ ಸೇವೆ ಪ್ರಾರಂಭಿಸಲು ಅಗತ್ಯವಾದ ಸ್ಪೆಕ್ಟ್ರಮ್ ಹಂಚಿಕೆ, ಕೆಲವು ಭದ್ರತಾ ಅನುಮೋದನೆಗಳು ಮತ್ತು ಕೆಲ ನಿಯಂತ್ರಣ ಸಂಬಂಧಿತ ಹಂತಗಳು ಇನ್ನೂ ಪೂರ್ಣಗೊಂಡಿಲ್ಲ.
ಆದ ಕಾರಣಕ್ಕೆ ಸ್ಟಾರ್‌ಲಿಂಕ್ India ವೆಬ್‌ಸೈಟ್ ನಲ್ಲಿ ಈಗಲೂ ಆರ್ಡರ್‌ಗಳನ್ನು ಸ್ವೀಕರಿಸುವ ಆಯ್ಕೆ ಇಲ್ಲ.
ಮಹಾರಾಷ್ಟ್ರ – ಸ್ಟಾರ್‌ಲಿಂಕ್ ಒಪ್ಪಂದ: ಗ್ರಾಮೀಣ ಸಂಪರ್ಕಕ್ಕೆ ಮೊದಲ ಹೆಜ್ಜೆ
2025 ನವೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಮತ್ತು ಸ್ಟಾರ್‌ಲಿಂಕ್ ನಡುವೆ Letter of Intent (LoI) ಸಹಿ ಆಗಿದೆ. ಇದರ ಮೂಲಕ ಮಹಾರಾಷ್ಟ್ರ ದೇಶದ ಮೊದಲ ರಾಜ್ಯವಾಗಿ ಸ್ಟಾರ್‌ಲಿಂಕ್ ಜೊತೆ ಅಧಿಕೃತವಾಗಿ ಕೈಜೋಡಿಸಿದೆ.
ಈ ಸಹಕಾರದ ಅಡಿಯಲ್ಲಿ:
- ಗಡ್ಚಿರೋಳಿ, ನಂದೂರ್ಬಾರ್, ಧಾರಶಿವ, ವಾಷಿಂ ಮೊದಲಾದ ದೂರದ ಮತ್ತು “aspirational” ಜಿಲ್ಲೆಗಳು ಆದ್ಯತೆಯಾಗುತ್ತವೆ. – Source
- ಸರ್ಕಾರಿ ಕಚೇರಿಗಳು, ಗ್ರಾಮೀಣ ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ತುರ್ತು ಸೇವೆಗಳಿಗೆ ಸ್ಯಾಟಲೈಟ್ ಇಂಟರ್ನೆಟ್ ಒದಗಿಸುವ ಯೋಜನೆ.
- ಉಪಗ್ರಹ ಆಧಾರಿತ ಕನೆಕ್ಟಿವಿಟಿ ಮೂಲಕ ಡಿಜಿಟಲ್ ಸೇವೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವುದೇ ಮುಖ್ಯ ಉದ್ದೇಶ.
ಈ ಮಾದರಿ ಯೋಜನೆಯ ಯಶಸ್ಸು ಭವಿಷ್ಯದಲ್ಲಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಇದೇ ರೀತಿಯ ಒಪ್ಪಂದಗಳಿಗೆ ದಾರಿ
ಮಾಡಿಕೊಡಬಹುದು. ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಕನೆಕ್ಟಿವಿಟಿ ತೊಂದರೆ ಅನುಭವಿಸುತ್ತಿರುವ ಘಟ್ಟ ಪ್ರದೇಶ ಗಳು, ರಿಮೋಟ್ ಏರಿಯಾಗಳು, ಕಾಡುಪ್ರದೇಶ ಗಳು ಹಾಗು ಹಳ್ಳಿಗಳಿಗೆ ಇದು ತುಂಬಾ ಸಹಾಯಕವಾಗಬಹುದು.
ಸ್ಟಾರ್‌ಲಿಂಕ್ ಇಂಡಿಯಾ ಬೆಲೆ: ವೆಬ್‌ಸೈಟ್ ‘ಗ್ಲಿಚ್’ ಮತ್ತು ಹಾಲಿ ಸ್ಥಿತಿ
ಇತ್ತೀಚಿನ ದಿನಗಳಲ್ಲಿ ಸ್ಟಾರ್‌ಲಿಂಕ್ India ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೆಲಕಾಲಕ್ಕೆ ₹8,600 ಮಾಸಿಕ ಚಾರ್ಜ್ ಮತ್ತು ಅಂದಾಜು ₹34,000 ಒನ್ ಟೈಮ್ ಇನ್ಸ್ಟಾಲೇಷನ್ (ಹಾರ್ಡ್‌ವೇರ್ ಶುಲ್ಕ) ತೋರಿಸಿಕೊಂಡಿತ್ತು. ಇದರಿಂದ ಸಾಮಾಜಿಕ ಮಾಧ್ಯಮ ಮತ್ತು ಸುದ್ದಿಮಾಧ್ಯಮಗಳಲ್ಲಿ ಬೆಲೆ ದುಬಾರಿ ಬಗ್ಗೆ ಹೆಚ್ಚಿನ ಚರ್ಚೆ ನಡಿಯುತ್ತಿದೆ .
ಅದಕ್ಕೆ ಪ್ರತಿಕ್ರಿಯಿಸಿದ ಸ್ಟಾರ್‌ಲಿಂಕ್ ಅಧಿಕಾರಿಗಳು, ಇದು ಒಂದು ತಾಂತ್ರಿಕ ದೋಷದ (glitch) ಕಾರಣದಿಂದ ಜನರಿಗೆ ಗೋಚರವಾದ “dummy test data” ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಈ ಬೆಲೆಗಳನ್ನು ಅಧಿಕೃತ ಪ್ಲಾನ್‌ಗಳೆಂದು ಪರಿಗಣಿಸಬಾರದು. ಅಧಿಕೃತ India ಪ್ಲಾನ್‌ಗಳು ಮತ್ತು ಅಂತಿಮ ಬೆಲೆಗಳನ್ನು ಸರ್ಕಾರದ ಅಂತಿಮ ಅನುಮೋದನೆಯ ನಂತರವೇ ಘೋಷಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕೆಲವು ಆರ್ಥಿಕ ಮತ್ತು ಟೆಕ್ ವರದಿಗಳ ಪ್ರಕಾರ, ರಿಟೇಲ್ ಗ್ರಾಹಕರಿಗೆ ತಿಂಗಳಿಗೆ ಸುಮಾರು ₹2,500 – ₹3,500 ನಡುವಿನ ಬೆಲೆಯ ಶ್ರೇಣಿಯನ್ನು ಕಂಪನಿ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಆದರೆ ಈ ಮಾಹಿತಿ ಅಧಿಕೃತ ಘೋಷಣೆ ಅಲ್ಲ, ಕೇವಲ ಮಾರುಕಟ್ಟೆ ಅಂದಾಜು ಮಾತ್ರ.
ಆದ್ದರಿಂದ, ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಟಾರ್‌ಲಿಂಕ್ ಸೇವೆಯ ನಿಜವಾದ ಬೆಲೆ, ಇನ್‌ಸ್ಟಾಲೇಶನ್ ಶುಲ್ಕ, ಡೇಟಾ ಲಿಮಿಟ್ ಬಗ್ಗೆ ಯಾವುದೇ ಅಧಿಕೃತ ಖಚಿತ ಮಾಹಿತಿ ಹೊರಬಂದಿಲ್ಲ.
ವೇಗ, ಲೇಟೆನ್ಸಿ ಮತ್ತು ತಾಂತ್ರಿಕ ಸೌಲಭ್ಯಗಳು
ಸ್ಟಾರ್‌ಲಿಂಕ್ ಸೇವೆಯ ಅತ್ಯಂತ ಮುಖ್ಯ ವಿಶೇಷತೆ ಲೋ ಅರ್ಥ್ ಆರ್ಬಿಟ್ (LEO) ಉಪಗ್ರಹಗಳ ಜಾಲ. ಈ ಉಪಗ್ರಹಗಳು ಭೂಮಿ ಮೇಲ್ಮೈಯಿಂದ ಕೇವಲ 550 ಕಿಮೀ ದೂರದಲ್ಲಿ ಭ್ರಮಣೆ ಮಾಡುತ್ತವೆ. ಇದರಿಂದಾಗಿ
ಸಾಮಾನ್ಯ ಸ್ಯಾಟಲೈಟ್ ಇಂಟರ್ನೆಟ್‌ಗೆ ಹೋಲಿಸಿದರೆ ಲೇಟೆನ್ಸಿ ಬಹಳ ಕಡಿಮೆ .
ಜಾಗತಿಕವಾಗಿ ಸ್ಟಾರ್‌ಲಿಂಕ್ ಬಳಕೆದಾರರು ಉನ್ನತ ವೇಗ ಮತ್ತು ಸ್ಥಿರ ಸಂಪರ್ಕ ಪಡೆಯುತ್ತಿರುವುದು ಕಂಡುಬಂದಿದೆ. ಆದರೆ ಭಾರತಕ್ಕೆ ಸಂಬಂಧಿಸಿದ ವೇಗದ ವಿವರ ಕಂಪನಿ ಇನ್ನೂ ಘೋಷಿಸಿಲ್ಲ.
ಸೇವೆ ಪ್ರಾರಂಭವಾದ ನಂತರ, ಭಾರತದ ನೆಲದ ಪರಿಸ್ಥಿತಿ, ಸ್ಪೆಕ್ಟ್ರಮ್ ಹಾಗೂ ಗ್ರೌಂಡ್ ಸ್ಟೇಷನ್‌ಗಳ ವಿಮರ್ಶೆ ಮಾಡಿ ಅಧಿಕೃತ ವೇಗದ ಮಾಹಿತಿ ಪ್ರಕಟಿಸಲಿದ್ದಾರೆ.
- LEO ಉಪಗ್ರಹಗಳ ಕಾರಣ ಕಡಿಮೆ ಲೇಟೆನ್ಸಿ ಸಾಧ್ಯತೆ
- ದೂರದ ಬೆಟ್ಟ / ಅರಣ್ಯ ಪ್ರದೇಶಗಳಲ್ಲೂ ಸಂಪರ್ಕ ದೊರಕುವ ಸಾಧ್ಯತೆ
- ಟವರ್‌ಗಳು ಅಥವಾ ಕೇಬಲ್‌ಗಳ ಅವಲಂಬನೆಯ ಇರುವುದಿಲ್ಲ
ಆದ್ದರಿಂದ, ಸ್ಟಾರ್‌ಲಿಂಕ್ ಭಾರತಕ್ಕೆ ಬಂದ ನಂತರವೇ ನಿಜವಾದ ವೇಗ, ಡೇಟಾ ನೀತಿ ಮತ್ತು ಸೇವಾ ಗುಣಮಟ್ಟದ ಕುರಿತು ನಿಖರ ನಿರ್ಧಾರ ಮಾಡಬಹುದು.



