ಗುಳಿಕೆನ್ನೆ ಸುಂದರಿ ರಚಿತಾ ರಾಮ್ (Rachita Ram) ರವರ ಬಾಲ್ಯದ ಹೆಸರು ಬಿಂದಿಯಾ ರಾಮ್ (Bindiya Ram). ಇನ್ನು ರಚಿತಾ ರಾಮ್ ರವರ ತಂದೆಯ ಹೆಸರು ರಾಮ್ (Ram) ಎಂವುದಾಗಿದ್ದು ಪ್ರಮುಖ ಭರತನಾಟ್ಯ (Bhartanatyam) ಕಲಾವಿದರಾಗಿದ್ದಾರೆ.
ಇನ್ನು ಕಥಕ್ ಹಾಗೂ ಭರತನಾಟ್ಯದಲ್ಲಿ ತರಬೇತಿ ಪಡೆದ ರಚಿತಾ ರಾಮ್ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ಕೂಡ ನೀಡಿರುವುದು ವಿಶೇಷ. ಸಹೋದರಿ ನಿತ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಬೆಂಕಿಯಲ್ಲಿ ಅರಳಿದ ಹೂವು (Benkiyalli Aralida Hoovu) ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು.ಬಳಿಕ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ (Arasi) ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿ ಎಲ್ಲರ ಮನಸ್ಸನ್ನು ಕದ್ದಿದ್ದರು.
2013ರಲ್ಲಿ ಬಿಡುಗಡೆಯಾದ ಬುಲ್‌ಬುಲ್ (Bul Bul) ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಬಂದ ರಚ್ಚು ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಹಾಹೂ ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು.ಬಳಿಕ ಅಂಬರೀಶ್ ಚಿತ್ರದಲ್ಲಿ ಡಿಬಾಸ್ (Dboss) ಜೊತೆ ಮತ್ತೆ ತೆರೆ ಹಂಚಿಕೊಂಡಿದ್ದರು. ಅದೇ ರೀತಿ ಗೋಲ್ಡ್ ನ್ ಸ್ಟಾರ್ ಗಣೇಶ್ (Ganesh) ಜೊತೆಗೆ ದಿಲ್ ರಂಗೀಲಾ ( Dil Rangeela) ಚಿತ್ರದಲ್ಲಿ ಕಾಣಿಸಿಕಂಡ ರಚಿತಾರಾಮ್ ಎಲ್ಲ ಪ್ರಮುಖ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಹೌದು ಅಲ್ಲದೇ ರನ್ನ(Ranna) ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು.
ಇನ್ನು ಚಿತ್ರರಂಗದ ಗುಳಿ ಕೆನ್ನೆ ಸುಂದರಿ ಚಿತ್ರ ತೆರೆಕಾಣುವ ಮುನ್ನ 2013 ರಲ್ಲಿ ರಚಿತಾ ರಾಮ್ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಸಂದರ್ಶನವೊಂದರಲ್ಲಿ ನಾನು ಈಗಿನ ರಿಯಾಲಟಿ ಶೋಗಳ (Reality Show) ಬಗ್ಗೆ ತುಂಬಾ ಆಕರ್ಷಿತಳಾಗಿದ್ದೇನೆ. ಹೌದು ನಾನು ಯಾವುದಾದರೂ ಒಂದು ರಿಯಾಲಿಟಿ ಶೋ ನಿರೂಪಕಿಯಾಗಬೇಕು ಎಂದು ಹೇಳದ್ದರು.
ಇನ್ನು 2016ರಲ್ಲಿ ಉದಯ ಟಿವಿಯ (Udaya TV) ಕಿಕ್(Kick) ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸದ್ದು ಆದರೆ ನಿರೂಪಕಿಯಾಗಿ ಅಲ್ಲ ಬದಲಾಗಿ ಶೋ ಜಡ್ಜ್ ಆಗಿ. ಬಳಿಕ ಕಾಮಿಡಿ ಟಾಕೀಸ್ (Comedy Talkies) ಮಜಾಭಾರತ- 2 (Majaa Bharata) ಡ್ರಾಮಾ ಜೂನಿಯರ್ಸ್ (Drama junior) ಸೂಪರ್ ಕ್ವೀನ್ (Super Queen) ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ವೈರಲ್ ಆಗಿದ್ದು ಮಾಜಾಭಾರತ ಕಾರ್ಯಕ್ರಮದ ವಿಡಿಯೋ ಇದಾಗಿದೆ. ಇದು ವೈರಲ್ ಆಗಲೂ ಕಾರಣ ಏನು ಗೊತ್ತಾ? ನೀವೆ ನೋಡಿ
.