ರಿಷಬ್ ಶೆಟ್ಟಿ ಮಗನ ಜೊತೆ ಡಿಬಾಸ್ ಕಾಮಿಡಿ ನೋಡಿ…ಕ್ಯೂಟ್ ವಿಡಿಯೋ

Advertisement
ಸದ್ಯ ಕಾಂತಾರ(Kantara) ಚಿತ್ರದ ಮೂಲಕ ರಾಜ್ಯ(State) ಮಾತ್ರವಲ್ಲದೇ ಇಡೀ ದೇಶವೇ ಕನ್ನಡ ಚಿತ್ರರಂಗವನ್ನ (KFI)ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ (Rishab Shetty) ಯವರು ಸದ್ಯ ಕಾಂತಾರ ಎರಡನೇ ಭಾಗದ (Kantara 2) ಕಥೆ ಬರೆಯುವಲ್ಲಿ ಬಹಳಾನೇ ನಿರತರಾಗಿದ್ದಾರೆ. ಹೌದು ಕಾಂತಾರ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಇದೀಗ ರಿಷಬ್ ಶೆಟ್ಟಿ ತಮ್ಮ ಮುದ್ದು ಮಗಳ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು.
ಹೌದು ಹೀಗೆ ಫೋಟೊ ಹಂಚಿಕೊಂಡಿದ್ದ ರಿಷಬ್ ಶೆಟ್ಟಿಯವರು ತಮ್ಮ ಮಗಳಿಗೆ ರಾದ್ಯಾ (Radhya) ಎಂದು ಹೆಸರನ್ನು ಇಟ್ಟಿರುವುದಾಗಿ ತಿಳಿಸಿದ್ದರು. ಹೌದು ಇತ್ತೀಚೆಗೆ ತಮ್ಮ ಮಗಳು ರಾದ್ಯಾ ಒಂದು ವರ್ಷ ಪೂರೈಸಿದ್ದರ ಬಗ್ಗೆಯೂ ಕೂಡ ರಿಷಬ್ ಶೆಟ್ಟಿ ಪೋಸ್ಟ್ ಮಾಡಿ ತಿಳಿಸಿದ್ದರು. ಇನ್ನು ರಾದ್ಯಾಳ ಮುದ್ದಾದ ಫೋಟೊಶೂಟ್ (Photoshoot) ಮಾಡಿಸುವ ಮೂಲಕ ಆ ವಿಡಿಯೊವನ್ನು ಹಂಚಿಕೊಂಡು ರಾದ್ಯಾಳ ಮೊದಲ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಇರಲಿ ಎಂದು ಕೂಡ ಬರೆದುಕೊಂಡಿದ್ದರು.
Advertisement
ಹಳದಿ (Yellow) ಬಿಳಿ (White) ಹಾಗೂ ಹಸಿರು(Green) ಡ್ರೆಸ್‌ನಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ರಾದ್ಯಾ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದಳು. ಇನ್ನು ಕೇವಲ ರಾದ್ಯಾಳ ಫೋಟೊಶೂಟ್‌ನ ವಿಡಿಯೊವನ್ನು ಮಾತ್ರ ಹಂಚಿಕೊಂಡಿದ್ದ ರಿಷಬ್ ಶೆಟ್ಟಿ ಯವರು ಹುಟ್ಟುಹಬ್ಬದ ಕಾರ್ಯಕ್ರಮ ಹೇಗೆ ನಡೆಯಿತು ಯಾರೆಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂಬ ಮಾಹಿತಿಯನ್ನು ಮಾತ್ರ ಹಂಚಿಕೊಂಡಿರಲಿಲ್ಲ. ಹೌದು ಆದರೆ ಇದೀಗ ರಾದ್ಯಾ ಹುಟ್ಟುಹಬ್ಬ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇನ್ನು ಹೆಚ್ಚಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರು ರಾದ್ಯಾ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನು ನಟರಾದ ಅಭಿಷೇಕ್ ಅಂಬರೀಶ್ (Abhishek Ambreesh) ಝೈದ್ ಖಾನ್ (Zyed Khan) ಜೊತೆ ಈ ಕಾರ್ಯಕ್ರಮಕ್ಕೆ ದರ್ಶನ್ ಹಾಜರಾಗಿದ್ದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹ ವೈರಲ್ ಆಗಿದೆ.
ಹೌದು ಕಪ್ಪು ಬಣ್ಣದ ಡ್ರೆಸ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್ ರವರು ರಿಷಬ್ ಶೆಟ್ಟಿ ದಂಪತಿ ಜೊತೆ ಸಂತಸದಿಂದ ಮಾತನಾಡಿದ್ದಾರೆ. ಇನ್ಮು ರಿಷಬ್ ಶೆಟ್ಟಿ ಮೊದಲ ಮಗನನ್ನು ಎತ್ತಿಕೊಂಡು ಮುದ್ದು ಮಾಡಿದ್ದು ರಾದ್ಯಾಳ ಕೆನ್ನೆ ಗಿಂಡಿ ಮುದ್ದು ಮಾಡುತ್ತಿರುವ ದರ್ಶನ್ ಅವರ ಈ ವಿಡಿಯೊಗೆ ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗಿವೆ.
ಇನ್ನು ಈ ವಿಡಿಯೊದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಿಷಬ್ ಶೆಟ್ಟಿ ತುಂಬಾ ಆತ್ಮೀಯತೆಯಿಂದ ಮಾತನಾಡಿದ್ದನ್ನು ಕಂಡಿರುವ ದರ್ಶನ್ ಅಭಿಮಾನಿಗಳು ರಿಷಬ್ ಶೆಟ್ಟಿ ನಮ್ಮ ಬಾಸ್‌ಗೆ ಒಂದು ಸಿನಿಮಾ ನಿರ್ದೇಶಿಸಿದ್ರೆ ಎಷ್ಟು ಚೆನ್ನಾಗಿರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವವನ್ನ ಲೇಖನಿಯ ಕೆಳಗೆ ನೋಡಬಹುದು.
Advertisement