Karnataka Times
Trending Stories, Viral News, Gossips & Everything in Kannada

ರಾಧಿಕಾ ಕುಮಾರಸ್ವಾಮಿಗೆ ಸಾಧುಕೋಕಿಲ ಹೊಡೆದ ಡೈಲಾಗ್ ನೋಡಿ…ವಿಡಿಯೋ

Advertisement

ರಾಧಿಕಾ ಕುಮಾರಸ್ವಾಮಿ (Radhika Kumaraswamy).. ಅದೊಂದು ಕಾಲದ ಕನ್ನಡದ ಸ್ಟಾರ್ ನಟಿಯರಲ್ಲಿ (Kannada Star Actress) ಒಬ್ಬರಾಗಿದ್ದ ರಾಧಿಕಾ ರವರು ತಮ್ಮ ಜೀವನ ವ್ಯಯಕ್ತಿಕ ವಿಚಾರಗಳಿಗಾಗಿ ಸಾಕಷ್ಟು ವರ್ಷಗಳ ಕಾಲ ಸಿನಿ ಜೀವನದಿಂದ ಮರೆಯಾಗಿ ಅನೇಕ ವರುಷಗಳ ಬಳಿಕ ಸ್ಯಾಂಡಲ್ವುಡ್ ನಲ್ಲಿ (Sandalwood)ಎರಡನೇ ಬಾರಿ ಕಂಬ್ಯಾಕ್ ಮಾಡಿದ್ದರು. ಹೌದು ಆದರೆ ಅದೃಷ್ಟವೋ ಅಥವಾ ಈಗಿನ ಟ್ರೆಂಡ್ ಬದಲಾದ ಕಾರಣವೋ ರಾಧಿಕಾ ಕುಮಾರಸ್ವಾಮಿಯವರು ನಿರೀಕ್ಷಿಸಿದಷ್ಟು ಯಶಸ್ಸು ಈ ಎರಡನೇ ಬಾರಿಯ ಕಂಬ್ಯಾಕ್ ನಲ್ಲಿ (Comeback) ದೊರೆಯಲಿಲ್ಲ ಎನ್ನಬಹುದು.

ಇನ್ನು ಇತ್ತ ನಿರ್ಮಾಪಕಿಯಾಗಿಯೂ (Producer) ಕಾಣಿಸಿಕೊಂಡಿದ್ದ ರಾಧಿಕಾ ಅವರು ನಟ ಆದಿತ್ಯಾ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ನಿರ್ಮಾಣವನ್ನೂ ಕೂಡ ಮಾಡಿದರು. ಅದೂ ಕೂಡ ದೊಡ್ಡ ಮಟ್ಟದ ಲಾಭವನ್ನೇನು ತಂದುಕೊಡಲಿಲ್ಲ. ಥ್ರಿಲ್ಲರ್ ಕಥಾನಕಗಳಲ್ಲಿ ಮಿಂಚಿದ್ದ ರಾಧಿಕಾ ಅವರು ಒಂದಷ್ಟು ಸುದ್ದಿಯಾಗಿದ್ದರು..

ನಿನಗಾಗಿ(Ninagagi) ಎಂಬ ಚಿತ್ರದ (Movie) ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದ ರಾಧಿಕಾ ಸ್ಯಾಂಡಲ್ವುಡ್ ನ ಟಾಪ್ ಹೀರೋಯಿನ್ ಗಳಾದ ರಮ್ಯ ರಕ್ಷಿತಾ ರಾಧಿಕಾ (Ramya Rakshitha Radhika) ಎಂದೇ ಫೇಮಸ್ ಆಗಿದ್ದರು. ಹೌದು ಕನ್ನಡದ ಟಾಪ್ ಮೂವರು ನಟಿಯರ ಪೈಕಿ ರಾಧಿಕಾ ಒಬ್ಬರಾಗಿದ್ದು ಇತ್ತ ತವರಿಗೆ ಬಾ ತಂಗಿ (Tavarige Ba Tangi) ಅಣ್ಣ ತಂಗಿ (Anna Tangi) ಯಂತಹ ಫ್ಯಾಮಿಲಿ ಹಿಟ್ ಸಿನಿಮಾದಲ್ಲಿ ಶಿವಣ್ಣನ (Shiva Rajkumar) ತಂಗಿಯಾಗಿ ಕಾಣಿಸಿಕೊಂಡ ರಾಧಿಕಾ ರವರು ಹಿಂತಿರುಗಿ ನೋಡಿದ್ದೇ ಇಲ್ಲ.

Advertisement

ಹೌದು ಈಗಲೂ ಕೂಡ ರಾಧಿಕಾ ಪ್ರತಿ ವರ್ಷ ಶಿವಣ್ಣನಿಗೆ ಬಂಗಾರದ ರಾಕಿ ಕಟ್ಟುವ ಅಭ್ಯಾಸವನ್ನು ಹೊಂದಿದ್ದು ಆ ಚಿತ್ರಗಳು ಯಾವ ಮಟ್ಟಕ್ಕೆ ಯಶಸ್ಸು ತಂದುಕೊಟ್ಟಿತ್ತೆಂದು ಊಹಿಸಬಹುದು. ಇನ್ನು ರಾಧಿಕಾ ಎಷ್ಟು ಉತ್ತುಂಗದಲ್ಲಿದ್ದರು ಎಂದರೆ ಆಗಲೇ ನಾಯಕ ನಟಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಆದರೆ ಅದ್ಯಾಕೋ ಇದ್ದಕಿದ್ದ ಹಾಗೆ ಚಂದನವನದಿಂದ ರಾಧಿಕಾ ಅವರು ಇದ್ದಕಿದ್ದ ಹಾಗೆಯೇ ದೂರಾದರು.

ಇದಕ್ಕೆ ಕಾರಣವೇನು ಎಂದು ತಿಳಿಯುವಷ್ಟರಲ್ಲಿ ಅವರ ವ್ಯಯಕ್ತಿಕ ವಿಚಾರವಾಗಿ ದೊಡ್ಡದೊಂದು ಸುದ್ದಿ ಕೂಡ ಹೊರ ಬಂದಿತ್ತು. ಅದಾಗಲೇ ಮುಖ್ಯಮಂತ್ರಿಯಾಗಿ(Chief Minister) ಒಳ್ಳೆಯ ಹೆಸರು ಮಾಡಿದ್ದ ಕುಮಾರಸ್ವಾಮಿ (Kumaraswamy) ಯವರ ಜೊತೆಗೆ ರಾಧಿಕಾ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಇದು ರಾಜಕಾರಣಿಗಳಿಗೆ (Politicians) ಹೊಸ ವೊಚಾರವೇನೂ ಅಲ್ಲ. ಸಾಕಷ್ಟು ರಾಜಕಾರಣಿಗಳಿಗೆ ಈ ರೀತಿಯ ಸಂಬಂಧಗಳಿದ್ದು ಆಗಾಗ ಸಿಡಿಗಳು ಬಿಡುಗಡೆಯಾಗುತ್ತಲೇ ಇರುವುದು ಎಲ್ಲರಿಗೂ ಕೂಡ ತಿಳಿದೇ ಇದೆ.

ಹೌದು ಆದರೆ ಕುಮಾರಸ್ವಾಮಿ ಅವರ ವಿಚಾರದಲ್ಲಿ ಇದು ಬೇರೆಯದ್ದೇ ರೀತಿಯಿತ್ತು. ಕುಮಾರಸ್ವಾಮಿ ಅವರು ಮಾಡಿದ್ದು ತಪ್ಪಾದರೂ ಕೂಡ ಅದನ್ನು ಬಹಿರಂಗವಾಗಿ ಹೇಳಿಕೊಂಡು ತಾವು ಮಾಡಿದ ತಪ್ಪಿನ ಬಗ್ಗೆ ಹೇಳಿಕೊಂಡು ಕ್ಷಮೆ ಕೇಳಿದ್ದರು. ಇತ್ತ ರಾಧಿಕಾ ರವರನ್ನು ಮದುವೆಯೂ ಸಹ ಆಗಿದ್ದ ಕುಮಾರಸ್ವಾಮಿ ಅವರು ಈ ದಂಪತಿಗೆ ಅದಾಗಲೇ ಒಂದು ಹೆಣ್ಣು ಮಗುವೂ ಕೂಡ ಆಗಿದ್ದು ಮಗಳ ಜೊತೆ ರಾಧಿಕಾ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನುವ ಸುದ್ದಿ ಇತ್ತು.

ಆದರೆ ಸಾಕಷ್ಟು ವರ್ಷಗಳ ನಂತರ ರಾಧಿಕಾ ಮತ್ತೆ ಬೆಂಗಳೂರಿಗೆ ಮಗಳ ಜೊತೆ ಕಾಲಿಟ್ಟರು. ಅದು ರಾಧಿಕಾ ಆಗಿಯಲ್ಲ.. ರಾಧಿಕಾ ಕುಮಾರಸ್ವಾಮಿ ಯಾಗಿ. ಸದ್ಯ ಇದೀಗ ಮತ್ತೆ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಇಲ್ಲಿ ಸಾಧುಕೋಕಿಲ ರವರು ರಾಧಿಕಾ ರವರನ್ನ ಮನೆಯಿಂದ ಹೊರ ಹಾಕುವ ದೃಶ್ಯವಾಗಿದೆ. ಈ ವಿಡಿಯೋ ನೋಡಿ ಇದು ಯಾವ ಸಿನಿಮಾದ ದೃಶ್ಯ ಎಂದು ಕಮೆಂಟ್ ಮೂಲಕ ನಮಗೆ ತಿಳಿಸಿ.

Advertisement

Leave A Reply

Your email address will not be published.