ಮಗು ಜೊತೆ ಮೊದಲಬಾರಿ ಡ್ಯಾನ್ಸ್ ಮಾಡಿದ ಅಮೂಲ್ಯ…ಕ್ಯೂಟ್ ವಿಡಿಯೋ

Advertisement
ನಮ್ಮ ಸ್ಯಾಂಡಲ್‌ವುಡ್‌ನ (Sandalwood) ಕ್ಯೂಟ್ ಹೀರೊಯಿನ್ ಅಮೂಲ್ಯ(Amulya) ರವರು ಸದ್ಯ ಈಗ ಕೌಟುಂಬಿಕ ಜೀವನದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹೌದು ಒಂದು ಕಾಲದಲ್ಲಿ ಸಿನಿಮಾಗಳಲ್ಲಿ (Movies) ಬ್ಯುಸಿಯಾಗಿದ್ದ ನಟಿ ವಿವಾಹದ ಬಳಿಕ ಪತಿ (Husband) ಮಕ್ಕಳು (Children’s) ಎಂದು ಸಾಂಸಾರಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ತಮ್ಮ ಅಭಿಮಾನಿಗಳೊಂದಿಗೆ (Fans) ಸಾಮಾಜಿಕ ಜಾಲತಾಣದಲ್ಲಿ (Social Media) ನಿರಂತರ ಸಂಪರ್ಕದಲ್ಲಿದ್ದಾರೆ.
ತಮ್ಮ ಜೀವನದ ಮಹತ್ವದ ನಿರ್ಧಾರಗಳನ್ನು ಕ್ಷಣಗಳನ್ನು ಅವರೊಂದಿಗೆ ಹಂಚಿಕೊಂಡು ಬಹಳ ಸಂಭ್ರಮಿಸುತ್ತಿದ್ದಾರೆ. ಸದ್ಯ ಗೋಲ್ಡನ್ ಕ್ವೀನ್ (Golden Queen) ಅಮೂಲ್ಯ ಸಂಭ್ರಮದಲ್ಲಿದ್ದು ಯಾಕಂದ್ರೆ ಅವರ ಅವಳಿ ಮಕ್ಕಳ ಬರ್ತ್‌ಡೇ. ಈ ಸಂಬಂಧ ತಮ್ಮ ಅವಳಿ ಮಕ್ಕಳು ಹಾಗೂ ಕುಟುಂಬದೊಂದಿಗೆ ಆದಿಚುಂಚನಗಿರಿ (Adichuchana Giri) ಮಠಕ್ಕೆ ಭೇಟಿ ನೀಡಿದ್ದಾರೆ. ಮಠದಲ್ಲಿ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿ, ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಆ ಮಧುರಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಟಿ ಅಮೂಲ್ಯ ರವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದುಬಅ ಅಕ್ಷರದಿಂದಲೇ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ನೀವಿಬ್ಬರೂ ನನ್ನ ಸಂಪೂರ್ಣ ಹೃದಯವನ್ನು ಆವರಿಸಿದ್ದೀರಿ. ನಿಮ್ಮಿಬ್ಬರೊಂದಿಗೆ ಜೀವನವು ಇನ್ನೂ ಹೆಚ್ಚು ಸುಂದರವಾಗಿದೆ. ನನ್ನ ಸಂತೋಷವೇ ನೀವು ಎಂದು ಅಮೂಲ್ಯ ಮಕ್ಕಳಿಗೆ ವಿಶ್ ಮಾಡಿದ್ದಾರೆ.
Advertisement
ಇನ್ನು ಅಮೂಲ್ಯ ಮಕ್ಕಳಿಗೆ ಹಲವಾರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವಾದ ಮಾಡಿದ್ದಾರೆ. ಇನ್ನು ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದು ಮುದ್ದು ಮಕ್ಕಳನ್ನು ಸಾಕುತ್ತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳುತ್ತಾರೆ.
ಮಾತೃತ್ವವು ಪವಾಡಕ್ಕಿಂತ ಏನೂ ಕಮ್ಮಿ ಇಲ್ಲ. ಲೆಕ್ಕವಿಲ್ಲದಷ್ಟು ನಿದ್ದೆಯಿಲ್ಲದ ರಾತ್ರಿಗಳು ಗಂಟೆಗಟ್ಟಲೆ ಒಟ್ಟಿಗೆ ಮಕ್ಕಳು ಅಳುವುದು. ಪ್ರತಿ 2 ಗಂಟೆಗಳಿಗೊಮ್ಮೆ ಆಹಾರವನ್ನು ನೀಡುವುದು. ಹುಚ್ಚುತನ, ಹಸಿವು, ಕೋಪ, ಕಿರಿಕಿರಿಯನ್ನು ನಾನು ನಿಮಗೆ ಹೇಳಬೇಕು. ಆದ್ರೆ ಆ ಎಲ್ಲಾ ನೋವು ಮಕ್ಕಳು ಮುಗುಳು ನಕ್ಕಾಗ ಮಯಾವಾಗುತ್ತೆ ಎಂದು ಅಮೂಲ್ಯ ಹೇಳಿದ್ದರು.
ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು ಎಷ್ಟು ಕ್ಯೂಟ್ ಆಗಿ ಅಮೂಲ್ಯ ದಂಪತಿಗಳು ಮಕ್ಕಳನ್ನ ಎತ್ತಿಕೊಂಡು ಸ್ಟೇಜ್ ಮೇಲೆ ಹೋಗುತ್ತಿದ್ದಾರೆ ಎಂದು ಲೇಖನಿ ಕೆಳಗೆ ಹೆಂಚಿಕೊಂಡಿರುವ ವಿಡಿಯೋದಲ್ಲಿ ನೋಡಬಹುದು. ಇನ್ನು ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆ. ಮಕ್ಕಳಿಗೆ ಒಂದು ವರ್ಷ ಆಯ್ತು ಅಲ್ವಾ? ಇನ್ಮೇಲೆ ಸಿನಿಮಾ ಮಾಡ್ತಾರಾ ಎಂದು ಫ್ಯಾನ್ಸ್ ಕೇಳುತ್ತಾ ಇದ್ದಾರೆ.
Advertisement