ನಟ ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ರಾಧಿಕಾ ಪಂಡಿತ್ (Radhika Pandith) ಅವರು ಸದಾ ಸಾಮಜಿಕ ಜಾಲತಾಣದಲ್ಲಿ (Social Media) ನಿರತರಾಗಿರುತ್ತಾರೆ. ತಮ್ಮ ಮಕ್ಕಳ ಜೊತೆ ಆಟವಾಡುತ್ತಿರುವ ಮತ್ತು ಮಕ್ಕಳ ಆಕರ್ಷಣೀಯ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ಈ ರಾಕಿಂಗ್ ದಂಪತಿಗಳ ಮುದ್ದು ಮತ್ತು ತುಂಟ ಹುಡುಗಿ ಎಂದರೆ ಹಿರಿಯ ಮಗಳು ಐರಾ(Ayra).
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ ಐರಾ ಹೆಸರಿನಲ್ಲಿ ಅನೇಕ ಫ್ಯಾನ್ ಪೇಜ್ ಗಳು (Fan Pages) ಸಹ ಇರುವುದು ವಿಶೇಷ. ಇನ್ನು ಮೊದಲಿಂದಲೂ ಕೂಡ ಐರಾ ತುಂಟಾಟ ಮಾಡುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಲೆ ಇವೆ.
ಕಳೆದ ವರುಷ (Last Year) ಸಾಮಜಿಕ ಜಾಲತಾಣದಲ್ಲಿ ಐರಾಳ ಒಂದು ಫೋಟೋಗೆ ಲೈಕ್ಸ್ ಗಳ ಸುರಿಮಳೆ ಹರಿದು ಬಂದಿತ್ತು. ಹೌದು ಐಸ್ ಕ್ಯಾಂಡಿ (Ice Candy) ತಿನ್ನುತ್ತಿರುವ ಐರಾ ಫೋಟೋ ಎಲ್ಲೆಡೆ ವೈರಲ್ ಆಗಿದ್ದು ರಾಧಿಕಾ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ ಮಾಡಿ ಕೊಟ್ಟಿದ್ದರು. ಹೌದು ಮಗಳು ಐಸ್ ಕ್ಯಾಂಡಿ ಸಿಕ್ಕ ಖುಷಿಯಲ್ಲಿ ಮನೆತುಂಬ ಓಡಾಡಿಕೊಂಡು ತಿಂದಿದ್ದಳು.
ಐಸ್ ತಿಂದು ಅಮ್ಮನಿಗೆ ಕೆಲಸ ಕೊಟ್ಟ ಫೋಟೋವನ್ನು ಹಂಚಿಕೊಂಡಿದ್ದ ರಾಧಿಕಾ ಪಂಡಿತ್ರವರು ಬೇಸಿಗೆಯಲ್ಲಿ ನಾವು ಹೇಗೆ ಕಾಲಕಳೆಯುತ್ತಿದ್ದೇವೆ ನೋಡಿ. ಅಮ್ಮನೊಂದಿಗೆ ಕಲ್ಲಂಗಡಿ ಐಸ್ ಕ್ಯಾಂಡಿ ತಿನ್ನುತ್ತಿದ್ದಾಳೆ. ಐರಾ ಐಸ್ ಕ್ಯಾಂಡಿ ತಿಂದ ನಂತರ ಸಂಪೂರ್ಣ ಮನೆಯನ್ನು ಸ್ವಚ್ಛ ಮಾಡಬೇಕಾಯಿತು ಎಂದು ಬರೆದುಕೊಂಡಿದ್ದರು.
ನಂತರ ಈ ಘಟನೆ ಮತ್ತೇ ಮರುಕಳಿಸುವಂತಹ ವಿಡಿಯೋವನ್ನ ರಾಕಿಂಗ್ ಸ್ಟಾರ್ ಯಶ್ ಹಂಚಿಕೊಂಡಿದ್ದರು. ಈ ಸಲ ಅಮ್ಮನ ಬದಲು ಅಪ್ಪ ಕೊಡಿಸಿರುವ ಐಸ್ ಕ್ರೀಮ್ ಅನ್ನು ಐರಾ ಸವಿದಿದ್ದಾಳೆ. ಹೌದು ಅಪ್ಪ ಕೊಡಿಸಿರುವ ಕಪ್ ಐಸ್ ಕ್ರೀಮ್ ತಿನ್ನುತ್ತಿರುವ ಐರಾ ಅಪ್ಪನಿಗೆ ಚೆನ್ನಾಗಿ ಆಟವಾಡಿಸಿದ್ದಳು. ಐರಾ ಚಮಚದಲ್ಲಿ ಐಸ್ ಕ್ರೀಮ್ ತಿನ್ನುವಾಗ ಯಶ್ ಅವರು ಮಗಳೆ ನನಗೇ ಆ….ಎಂದು ಬಾಯಿ ತೆಗೆದಾಗ ಐರಾ ತಂದೆಗೆ ತಿನ್ನಿಸಲು ಬಾಯಿ ಹತ್ತಿರ ಹೋಗಿ ತಾನೇ ತಿಂದು ಗೊಳ್ಳೆಂದು ನಕ್ಕಿದ್ದಾಳೆ.
ಹೀಗೆ ಮೂರ್ನಾಲ್ಕು ಸಲ ಐರಾ ಮಾಡಿದ್ದು ಕಳ್ಳಿ ಡ್ರಾಮ ಕ್ವೀನ್ ಎಂದೆಲ್ಲಾ ಯಶ್ ಮಗಳನ್ನು ಪ್ರಿತಿಯಿಂದ ಬೈದಿದ್ದಾರೆ. ಒಟ್ಟಾರೆ ಈ ವಿಡಿಯೋ ನೋಡಲು ಬಹಳ ಮುದ್ದಾಗಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು. ಸದ್ಯ ಇದೀಗ ಹೊಸ ವಿಡಿಯೋ ವೈರಲ್ ಆಗುತ್ತಿದ್ದು ಈ ಬಾರಿ ಐರಾ ಜೊತೆ ಅಮ್ಮ ರಾಧಿಕಾ ಹಾಗೂ ತಮ್ಮ ಯಥರ್ವ್ ಕೂಡ ಐಸ್ ಸವಿದಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗುತಿದ್ದು ಲೇಖನಿ ಕೆಳಗೆ ತಾವು ಕೂಡ ಈ ವಿಡಿಯೋ ನೋಡಬಹುದು.