ಮೈದಾನದಲ್ಲಿ ವಿಚಿತ್ರ ಡ್ಯಾನ್ಸ್ ಮಾಡಿದ ಶಿವಣ್ಣ …ಚಿಂದಿ ವಿಡಿಯೋ

Advertisement
ಕಳೆದ ತಿಂಗಳಷ್ಟೆ ನಮ್ಮ ಕನ್ನಡ ಚಲನಚಿತ್ರ ಕಪ್ 2023 (KCC 2023) ಅದ್ಧೂರಿಯಾಗಿ ನಡೆದಿದ್ದು ಫೆಬ್ರವರಿ 25 ಮತ್ತು 26ರಂದು ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಟೂರ್ನಿ ನಡೆಯಿತು. ಸ್ಟಾರ್ ಕಲಾವಿದರು ಬ್ಯಾಟ್ ಬಾಲ್ ಹಿಡಿದು ಗ್ರೌಂಡ್ಗೆ ಇಳಿದು ತಾರಾ ರಂಗು ಮನೆ ಮಾಡಿತ್ತು ಎನ್ನಬಹುದು.
ಇನ್ನು ನಟಿ ಅಮೂಲ್ಯ (Amulya) ಅವರಿಂದ ಹಿಡಿದ ಕಾಂತಾರ ಚೆಲುವೆ ಸಪ್ತಮಿ ಗೌಡ (Saptami Gowda) ತನಕ ಎಲ್ಲರೂ ನಟರನ್ನು ಪ್ರೋತ್ಸಾಹಿಸಿದ್ದಾರೆ. ಇದೀ ನಟ ಶಿವರಾಜ್ಕುಮಾರ್ (Shivarajkumar) ಅವರ ವಿಡಿಯೋ (Video) ಒಂದು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ (Viral) ಆಗುತ್ತಿದೆ.
ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಕೆಸಿಸಿಯಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದು ಮೈದಾನದಲ್ಲಿ ತುಂಬಾ ಖುಷಿಯಾಗಿ ಕೇರ್ಲೆಸ್ಯಾಗಿ ಸೋಲೋ ಡ್ಯಾನ್ಸ್ ಎಂಜಾಯ್ ಮಾಡುವ ವಿಡಿಯೋ ಇದಿಗ ವೈರಲ್ ಆಗಿದ್ದು ಅವರ ಅಭಿಮಾನಿಗಳು ಇದನ್ನು ಮೆಚ್ಚಿಕೊಂಡಿದ್ದಾರೆ. ಹೌದು ಆನಂದ್ ಆಡಿಯೋ (Anandh Audio) ಟ್ವಿಟರ್ನಲ್ಲಿ ಶಿವಣ್ಣ ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅವರ ಎನರ್ಜಿಯನ್ನು ಯಾರೂ ಮ್ಯಾಚ್ ಮಾಡಲಾರರು ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Advertisement
ಈ ವಿಡಿಯೋಗೆ 27 ಸಾವಿರಕ್ಕೂ ಹೆಚ್ಚು ವ್ಯೂಸ್ ಲಭಿಸಿದ್ದು ಬಹಳಷ್ಟು ಜನರು ಈ ವಿಡಿಯೋವನ್ನು ರೀಟ್ವೀಟ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಇದರಲ್ಲಿ ಶಿವರಾಜ್ಕುಮಾರ್ ಅವರು ಒಬ್ಬರೇ ಡ್ಯಾನ್ಸ್ ಎಂಜಾಯ್ ಮಾಡುವುದನ್ನು ಕಾಣಬಹುದು. ಇನ್ನು ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಫೆ. 24 ಮತ್ತು 25ರಂದು ಕೆಸಿಸಿ 2023ರ ಮೂರನೇ ಆವೃತ್ತಿ ಕ್ರಿಕೆಟ್ ಟೂರ್ನಿಮೆಂಟ್ ಅದ್ಧೂರಿಯಾಗಿ ನಡೆದಿದ್ದುನಮೊದಲ ದಿನ ಮೂರು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ನಟ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಇನ್ನು ಕನ್ನಡ ಚಲನಚಿತ್ರ ಕಪ್ 2023ರ ಮೂರನೇ ಎಡಿಷನ್ ಫೆಬ್ರವರಿ 24ರಂದು ಆರಂಭಗೊಂಡಿದ್ದುಬಇಲ್ಲಿ ಕನ್ನಡ ಸಿನಿಮಾ ಸ್ಟಾರ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಒಂದಾಗಿದ್ದರು. ಸುರೇಶ್ ರೈನಾ ಬ್ರಿಯಾನ್ ಲಾರಾ ಕ್ರಿಸ್ ಗೇಲ್ ಸುಬ್ರಮಣಿಯಂ ಬದ್ರಿನಾಥ್ ಹರ್ಷೆಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಅವರು ಆಡಿದ್ದಯ ಇವರನ್ನು ಹೊರತುಪಡಿಸಿ ಪ್ರಸಿದ್ಧ ನಟರೂ ಕೂಡಾ ಕ್ರಿಕೆಟ್ ಆಡಿದ್ದಾರೆ. ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟ ರಾಕ್ಷಸ ಡಾಲಿ ಧನಂಜಯ ಆ್ಯಕ್ಷನ್ ಪ್ರಿನ್ಸ ಧ್ರುವ ಸರ್ಜಾ ಗೋಲ್ಡನ್ ಸ್ಟಾರ್ ಗಣೇಶ್ ಅವರು ಗ್ರೌಂಡ್ಗೆ ಇಳಿದಿದ್ದರು.
Advertisement