ನಮ್ಮ ಸ್ಯಾಂಡಲ್ ವುಡ್ (Sandalwood) ಸೌಂದರ್ಯವತಿ ಮತ್ತು ಬಹುಕಾಲ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಸಿಂಡ್ರೆಲಾ ಎಂದರೆ ಅದು ರಾಧಿಕಾ ಪಂಡಿತ್ (Radhika Pandith) ರವರು. ಹೌದು ಮೊಗ್ಗಿನಂತಹ ಮನಸ್ಸು (Moggina Manassu) ಚಂದುಟಿಯ ಚೆಲುವೆ ಅಭಿಮಾನಿಗಳ ಅದ್ಧೂರಿ ಹುಡುಗಿಯಾಗಿ ದಶಕಗಳ ಕಾಲ ಚಿತ್ರರಂಗವನ್ನು ಆಳಿದ ರಾಧಿಕಾ ಪಂಡಿತ್ ಮೋಹಕತಾರೆ ರಮ್ಯಾ (Ramya) ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ (Rakshitha) ಅವರು ಒಂದು ಕಾಲದಲ್ಲಿ ಚಿತ್ರರಂಗವನ್ನು ಹೇಗೆ ಆಳಿದ್ದಿರೋ ಹಾಗೆಯೇ ಅವರ ಬಳಿಕ ರಾಧಿಕಾ ಆ ಸ್ಥಾನವನ್ನು ತುಂಬಿದ್ದರು.
ತಮ್ಮ ಸಿನಿ ಜೀವನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯನ್ನು ಎಳಿಸಿಕೊಳ್ಳದೇ ನಿರ್ಮಾಪಕ ನಿರ್ದೇಶಕರ (Producer & Director) ಫೇವರೇಟ್ ಆಗಿದ್ದ ರಾಧಿಕಾ ಪಂಡಿತ್ ಇದೀಗ ಚಿತ್ರರಂಗದಿಂದ ದೂರ ಉಳಿದು ರಾಕಿಂಗ್ ಸ್ಟಾರ್ ಯಶ್ ಅವರ ಪ್ರೀತಿಯ ಮಡದಿಯಾಗಿ ಮತ್ತು ಎರಡು ಮುದ್ದಾದ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನು ರಾಧಿಕಾ ಅವರಿಗೆ ತನ್ನ ಅತ್ತೆ ( ಯಶ್ ಅವರ ತಾಯಿ) ಎಂದರೆ ಬಹಳ ಇಷ್ಟ. ರಾಧಿಕಾ ಅತ್ತೆ ಮನೆಯಲ್ಲಿ ಹೇಗೆ ಇರುತ್ತಾರೆ ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ರ ವರ ತಂದೆಯ ಹೆಸರು ಅರುಣ್ ಕುಮಾರ್ (Arun Kumar) ಎಂಬುದಾಗಿದ್ದು ಅರ ತಾಯಿ ಪುಷ್ಪ (Pushpa) ಹೌದು ಯಶ್ ಚಿತ್ರರಂಗಕ್ಕೆ ಬರುವ ಮುನ್ನ ಅರುಣ್ ಕುಮಾರ್ ಅವರು ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು ಇದೀಗ ನಿವೃತ್ತಿಯನ್ನು ಹೊಂದಿದ್ದಾರೆ. ಇನ್ನು ಯಶ್ ಮತ್ತು ರಾಧಿಕಾ ಪ್ರೇಮದಲ್ಲಿ ತೇಲಾಡುತ್ತಿದ್ದಾಗ ಈ ವಿಚಾರವನ್ನು ಯಶ್ ಮೊದಲು ತಿಳಿಸಿದ್ದೆ ತನ್ನ ಪ್ರೀತಿಯ ತಾಯಿಗೆ. ರಾಧಿಕಾ ಅವರ ಫೋಟೋ ನೋಡಿದ ತಕ್ಷಣ ಒಪ್ಪಿದ ತಾಯಿ ಪುಷ್ಪ ಮದುವೆಯಾಗಲು ಒಪ್ಪುಗೆ ನೀಡುತ್ತಾರೆ.
ಇದೀಗ ವಿವಾಹವಾಗಿ ಸುಖ ಸಂಸಾರ ನಡೆಸುತ್ತಿರುವ ಇವರು ಮನೆಯಲ್ಲಿ ತನ್ನ ಅತ್ತೆಯ ಜೊತೆ ಬಹಳ ಅನ್ಯೋನ್ಯವಾಗಿ ಇರುತ್ತಾರೆ. ರಾಧಿಕಾ ಅವರು ಎರಡು ಮಕ್ಕಳಿಗೆ ಜನುಮ ಕೊಟ್ಟ ಬಳಿಕ ಅಡುಗೆ ಮನೆ ಕೆಲಸ ಯಾವುದು ಮಾಡಬಾರದು ಎಂದು ಸೂಚಿಸಿದ್ದಾರೆ ಅತ್ತೆ ಪುಷ್ಪ. ಅದರೆ ಸುಮ್ಮನೆ ಕೂರಲು ಇಷ್ಟ ಪಡದ ರಾಧಿಕ ತನ್ನ ಅತ್ತೆ ಅಡುಗೆ ಮಾಡುತ್ತಿದ್ದ ಸಂಧರ್ಭದಲ್ಲಿ ತನ್ನಿಂದ ಆಗುವ ಸಹಾಯವನ್ನು ಮಾಡುತ್ತಿದ್ದಾರೆ.
ಮನೆಯ ಕೆಲಸವನ್ನು ಅತ್ತೆ ಮತ್ತು ಸೊಸೆ ಇಬ್ಬರು ಹಂಚಿಕೊಂಡು ಮಾಡುತ್ತಿದ್ದು ಮಕ್ಕಳ ಲಾಲನೆ ಮತ್ತು ಪೋಷಣೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಪ್ರತೀ ಸಾರಿ ಅತ್ತೆ ತನ್ನ ಸೊಸೆಗೆ ಹೇಳುತ್ತಲೆ ಇರುತ್ತಾರೆ. ಹಬ್ಬದ ಸಮದಲ್ಲಂತು ಇಬ್ಬರು ಕೂಡ ಒಟ್ಟಿಗೆ ಸೇರಿ ತಿನಿಸು ಹಾಗೂ ನೈವೇದ್ಯಗಳನ್ನು ತಯಾರು ಮಾಡಿ ಪೂಜೆ ಸಲ್ಲಿಸುತ್ತಾರೆ. ಯಶ್ ಅವರ ತಾಯಿಗೆ ಮೊದಲಿಂದಲೂ ಶಾಪಿಂಗ್ ಎಂದರೆ ಬಹಳ ಇಷ್ಟ.
ಇದೀಗ ತನ್ನ ಸೊಸೆಯ ಜೊತೆ ಆಗಾಗ ಶಾಪಿಂಗ್ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇನ್ನು ಯಶ್ ಅವರ ತಾಯಿ ತನ್ನ ಸೊಸೆಗೆ ಮಕ್ಕಳಿಗೆ ಯಾವ ರೀತಿಯ ತಿನಿಸು ಮಾಡಬೇಕು ಯಾವ ಸಮಯದಲ್ಲಿ ತಿನಿಸ ಬೇಕು ಪ್ರತಿಯೊಂದನ್ನು ಹೇಳಿಕೊಡುತ್ತಾರೆ.
ಅಲ್ಲದೇ ಪ್ರತಿನಿತ್ಯ ಮಕ್ಕಳ ಆಹಾರವನ್ನು ಸ್ವತಃ ಪುಷ್ಪ ಅವರೇ ತಯಾರಿಸುತ್ತಾರೆ. ಒಟ್ಟಾರೆ ಅತ್ತೆ ಸೊಸೆ ಇಬ್ಬರು ಬಹಳ ಅನ್ಯೋನ್ಯವಾಗಿದ್ದ ಮಕ್ಕಳು ದೊಡ್ಡವರಾದ ಮೇಲೆ ಸಿನಿಮಾದಲ್ಲಿ ಅಭಿನಯಿಸಲು ಅನುಮತಿಯನ್ನು ಕೂಡ ನೀಡಿದ್ದಾರಂತೆ. ಇನ್ನು ರಾಧಿಕಾ ಅತ್ತೆ ಮನೆಯಲ್ಲಿ ಎಷ್ಟು ಸಂಪ್ರದಾಯಕವಾಗಿ ಇರುತ್ತಾರೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.