ಸ್ಯಾಂಡಲ್ ವುಡ್ ನ (Sandalwood) ಖ್ಯಾತ ನಟಿಯರ ಪೈಕಿ ಗುಳಿಕೆನ್ನಿ ಸುಂದರಿ ರಚಿತಾ ರಾಮ್ (Rachita Ram) ರವರು ಸದ್ಯ ಮುಂಚಣಿಯಲ್ಲಿ ಇದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಬುಲ್ ಬುಲ್ (BulBul) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನಬಹುದು. ಅವರ ಪಯಣ ಇದೀಗ ಕ್ರಾಂತಿ (Kranti) ಯವರಿಗೂ ಮುನ್ನಡೆದಿದೆ. ಬುಲ್ ಬುಲ್ ಚಿತ್ರ ಇವರಿಗೆ ದೊಡ್ಡ ಹೆಸರು ನತ್ತು ಯಶಸ್ಸು ತಂದು ಕೊಟ್ಟಿದ್ದು ಆ ನಂತರ ಸಾಲು ಸಾಲು ಚಿತ್ರಗಳಲ್ಲಿ ಕೂಡ ರಚಿತಾ ಬ್ಯುಸಿ (Busy9 ಆಗಿಬಿಟ್ಟರು.
ಹೌದು ಅಲ್ಲದೇ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ (Kannada Movies) ನಟನೆಯನ್ನ ಸಹ ಮಾಡಿರುವ ರಚಿತಾ ರಾಮ್ ರವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಕನ್ನಡ ಚಿತ್ರರಂಗದ ಬಹುತೇಕ ನಾಯಕ ನಟರ ಜೊತೆಗೆ ನಟನೆ ಮಾಡಿರುವ ರಚಿತಾ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಎಂದೇ ಹೇಳಿಬಹುದಾಗಿದೆ. ಇನ್ನು ನಟಿ ರಚಿತಾ ರಾಮ್ ರವರು ಸಂಭಾವನೆಯ ವಿಚಾರದಲ್ಲಿಯೂ ಕೂಡ ಬಹಳ ಮೇಲೆ ಇದ್ದಾರೆ ಎನ್ನಲಾಗುತ್ತಿದ್ದು ಇತರೆ ಕನ್ನಡದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ರಚಿತಾ ರಾಮ್ ರವರ ಸಂಭಾವನೆ ಕೂಡ ಬಹಳ ಜಾಸ್ತಿಯಿದೆ.
ಇನ್ನು ಈಗಿನ ಪೀಳಿಗೆಯಲ್ಲಿ ಯಶಸ್ವಿ ನಾಯಕಿಯಾಗಿ (Heroine) 10 ವರ್ಷ ತುಂಬಿರುವುದು ದೊಡ್ಡ ಸಾಧನೆ ಎಂದು ನಟಿ ರಚಿತಾ ರಾಮ್(Rachita Ram) ರವರ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಮೆಚ್ಚುಗೆಯ ಮಾತಾಡಿದ್ದರು.
ಹೌದು ಈ ಹಿಂದೆ ನಾಯಕಿಯರು ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಮೆರೆದ ಸಂದರ್ಭಗಳಿದ್ದು ಆದರೆ ಈಗಿನ ಸಂದರ್ಭದಲ್ಲಿ ಅದು ಕಷ್ಟ ಇಂದು ಹೆಚ್ಚಿನ ನಾಯಕಿಯರು 5 ರಿಂದ 7 ವರ್ಷಗಳ ವರೆಗೆ ಸಿನಿಮಾ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ ರಚಿತಾ ಪ್ರತಿಭೆ ಮತ್ತು ಸಮರ್ಪಣಾ ಭಾವವೇ ಆಕೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ನಟ ದರ್ಶನ್ ರವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ರಚಿತಾ ಕೂಡ ಮಾತನಾಡಿದ್ದು ನಾನು ಕಿರುತೆರೆಯಿಂದ ಬೆಳ್ಳಿಪರದೆಗೆ ಬಂದಿದ್ದು ದರ್ಶನ್ ಅವರ ಬುಲ್ ಬುಲ್ (Bul Bul) ಸಿನಿಮಾ ಮೂಲಕ ನಾನು ಸ್ಯಾಂಡಲ್ ವುಡ್ (Sandalwood) ಪ್ರವೇಶ ಮಾಡಿದೆಮ. ಹೌದು ಸೆಪ್ಟಂಬರ್ 21 2012 ರಂದು ನನ್ನ ಮೊದಲ ಸಿನಿಮಾ ಶೂಟಿಂಗ್ ಆರಂಭವಾಗಿದ್ದು 10 ವರ್ಷಗಳ ನಂತರ ಅದೇ ದಿನ ನಾನು ಕ್ರಾಂತಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ ನನ್ನ ಸಿನಿಮಾ ತಂಡ ವೃತ್ತಿ ಜೀವನದ ವಾರ್ಷಿಕೋತ್ಸವ ಆಚರಿಸಿತು ಎಂದು ರಚಿತಾ ರಾಮ್ ತಿಳಿಸಿದ್ದಾರೆ. ಇನ್ನು ಬುಲ್ ಬುಲ್ ಸಿನಿಮಾಗೂ ವಿ ಹರಿಕೃಷ್ಣ(Harikrishna) ಅವರ ಸಂಗೀತವಿತ್ತು ಕ್ರಾಂತಿ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ. ಜೊತೆಗೆ ಸಿನಿಮಾ ನಿರ್ದೇಶನ ಕೂಡ ಮಾಡಿರುವುದು ವಿಶೇಷ.
ಇನ್ನು ಕ್ರಾಂತಿ ಸಿನಿಮಾ ಮುಂದಿನ ಕೆಲ ವರ್ಷಗಳ ವರೆಗೂ ನನ್ನ ಪ್ರಯಾಣವನ್ನು ವ್ಯಾಖ್ಯಾನಿಸಲಿದೆ. ನನ್ನ ವೃತ್ತಿ ಜೀವನದ 10ನೇ ವರ್ಷದಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆವಆಗಿರುವುದು ನನ್ನ ಮೊದಲ ಸಿನಿಮಾ ಬಿಡುಗಡೆ ಆದಂತೆ ಅನಿಸಿದೆ.
ಈ 10 ವರ್ಷಗಳಲ್ಲಿ ನಾನು ಗಳಿಸಿದ ಅನುಭವ ಕೇವಲ ಪ್ರಯೋಗವಾಗಿದೆ ಎನ್ನಿಸುತ್ತಿದೆ. ಹೌದುವ ಒಬ್ಬ ಕಲಾವಿದೆಯಾಗಿ ನಾನು ನನ್ನ ಅಧ್ಯಯನ ಮಾಡಬೇಕು. ಜೊತೆಗೆ ಸಿನಿಮಾ ರಂಗವನ್ನು ಗಮನಿಸಬೇಕು ಎಂದಿದ್ದಾರೆ. ಇದರಲ್ಲದರ ನಡುವೆ ಇದೀಗ ದರ್ಶನ್ ಮತ್ತು ರಚಿತಾ ರವರ ಫನ್ನಿ ಸಂಭಾಷಣೆ ವಿಡಿಯೋ ವೈರಲ್ ಆಗುತ್ತಿದ್ದು ಲೇಖನಿಯ ಕೆಳಗೆ ವಿಡಿಯೋ ನೋಡಬಹುದು. ನಿಜಕ್ಕು ನಕ್ಕಿ ನಲಿಯುತ್ತೀರ.