Karnataka Times
Trending Stories, Viral News, Gossips & Everything in Kannada

ಭಾಷಣದಲ್ಲಿ ಅಂಬರೀಷ್ ಡೈಲಾಗ್ ಹೊಡೆದ ರಜನೀಕಾಂತ್…ಚಿಂದಿ ವಿಡಿಯೋ

ನಮ್ಮ ಭಾರತೀಯ ಚಿತ್ರರಂಗ (Indian Filim Industry) ಮಾತ್ರವಲ್ಲದೆ ಇಡೀ ವಿಶ್ವಾದ್ಯಂತ (World) ತಮ್ಮದೇ ಆದಂತಹ ಛಾಪು ಮೂಡಿಸಿರುವ ಖ್ಯಾತ ನಟರಲ್ಲಿ ಸೂಪರ್ ಸ್ಟಾರ್ (Super Star) ರಜನೀಕಾಂತ್ (Rajanikanth) ರವರು ಪ್ರಮುಖರು ಎನ್ನಬಹುದು. ಹೌದು ಇವರು ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ತಾರೆಯರಲ್ಲಿ ಒಬ್ಬರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ಮುಖ್ಯವಾಗಿ ತಮಿಳು (Tamil) ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಸೂಪರ್ ಸ್ಟಾರ್ ರಜನಿಕಾಂತ್ ರವರನ್ನು ಇಡೀ ಜಗತ್ತೇ ಸೂಪರ್‌ಸ್ಟಾರ್‌ ಎಂದು ಕೊಂಡಾಡುತ್ತದೆ. ಹೌದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ತಾರೆ ಆಗುವುದಕ್ಕೂ ಮೊದಲು ಬಸ್ ಕಂಡಕ್ಟರ್ (Bus Conductor) ಆಗಿದ್ದರು.

Join WhatsApp
Google News
Join Telegram
Join Instagram

ಸದ್ಯ ಇದೀಗ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಜಗತ್ತಿನಾದ್ಯಂತ ರಜನಿಕಾಂತ್ ರವರಿಗೆ ಅಭಿಮಾನಿಗಳು ಇದ್ದು ಒಂದು ಸಮಯದಲ್ಲಿ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ರಜನಿಕಾಂತ್ ರವರಾಗಿದ್ದರು ಎಂಬುದು ಬಹಕ ವಿಶೇಷವಾಗಿದೆ.

ಇನ್ನು ಬಸ್ ಕಂಡಕ್ಟರ್ ಆಗಿದ್ದವರು ಇದೀಗ ಸೂಪರ್ ಸ್ಟಾರ್ ಪಟ್ಟದಲ್ಲಿದ್ದಾರೆ ಅಂದರೆ ಅದು ಅನೇಕರಿಗೆ ಸ್ಫೂರ್ತಿ ಮತ್ತು ಮಾದರಿ ಎನ್ನಬಹುದಾಗಿದ್ದು ಅಂದಹಾಗೆ ರಜನಿಕಾಂತ್ ರವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ (Shivaji Rao Gayakwad). ಹೌದು ಬೆಂಗಳೂರಿನ ಮರಾಠಿ (Marati) ಕುಟುಂಬದಲ್ಲಿ ಜನಿಸಿದ್ದ ರಜನಿಕಾಂತ್ ರವರು ಜೀವನಕ್ಕಾಗಿ ಕೂಲಿ ಹಾಗೂ ಕಾರ್ಪೆಂಟರ್ ವೃತ್ತಿ ಮಾಡಿದ್ದು ಉಂಟು.

ಇದಾದ ಬಳಿಕ ಬಿಟಿಎಸ್ ಬಸ್‌ನಲ್ಲಿ ಕಂಡಕ್ಟರ್ ಆಗಿಯೂ ಸಹ ಕಾರ್ಯನಿರ್ವಹಿಸಿದ್ದ ಅವರು ಈ ವೃತ್ತಿ ಮಾಡಬೇಕಾದರೆ ಜೊತೆ ಜೊತೆಗೆ ನಾಟಕಗಳಲ್ಲಿಯೂ ಕೂಡ ನಟಿಸುತ್ತಿದ್ದರು. ತದನಂತರ ಸಿನಿಮಾ ಮೇಲಿನ ಆಸೆಯಿಂದ ಮದ್ರಾಸಿಗೆ ಹೋಗಿ ನಟನೆಯಲ್ಲಿ ಡಿಪ್ಲೋಮಾ ಕೂಡ ಪಡೆದಿದ್ದು ಆ ನಂತರ 1975ರಲ್ಲಿ ಕೆ ಬಾಲಚಂದಿರ್ ನಿರ್ದೇಶನದ ಅಪೂರ್ವ ರಾಗಂಗಳ್ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದು ಕಮಲ್ ಹಾಸನ್ ನಾಯಕರಾಗಿದ್ದ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ರಜನಿ ಬಳಿಕ ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸಿದರು.

ಕನ್ನಡ ತೆಲುಗು ಹಾಗು ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದು ದಿನಕಳೆದಂತೆ ತಮಿಳಿನಲ್ಲಿ ಶಾಶ್ವತ ನೆಲೆ ಕಂಡರು. ಸೂಪರ್ ಸ್ಟಾರ್ ಎಂಬ ಪಟ್ಟ ಸಹ ಅಲಂಕರಿಸಿದರು.ಇನ್ನು ರಜನಿಗೆ ಕನ್ನಡ ಚಿತ್ರರಂಗದಲ್ಲಿರುವ ನಂಟು ಹಾಗೂ ನಟರ ಜೊತೆಗಿರುವ ಬಾಂಧವ್ಯದ ಬಗ್ಗೆ ತಮಗೆ ತಿಳಿದಿರುತ್ತದೆ. ಡಾ ರಾಜ್ ಕುಮಾರ್ (Rajkumar) ಹಾಗೂ ಅವರ ಕುಟುಂಬದ ಮೇಲೆ ವಿಶೇಷ ಪ್ರೀತಿ ಹಾಗೂ ಹೊಂದಿರುವ ರಜನಿ ಡಾ. ವಿಷ್ಣು ಹಾಗೂ ‍ಅಂಬಿ ಸೇರಿದಂತೆ ಆನೇಕರೊಂದಿಗೆ ಆಪ್ತರಾಗಿದ್ದರು.

ಅದರಲ್ಲೂ ಅಂಬಿ ಮೇಲೆ ವಿಶೇಷ ಪ್ರೀತಿ ಇತ್ತು. ಇದೀಗ ಇವರಿಬ್ಬರ ಬಾಂಧವ್ಯ ಹೇಗಿತ್ತು ಎಂದು ಸಾರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದೆ.ಅಂಬರೀಶ್‌ ಅವರಂತಹಾ ನಟರು ಹಲವರು ಸಿಗಬಹದು ಆದರೆ ಅವರಂತ ಹೃದಯವಂತ ವ್ಯಕ್ತಿ ಮತ್ತೊಬ್ಬರು ಸಿಗಲಾರರು ಎಂದು ಹೇಳುವ ರಜನೀಕಾಂತ್‌ ನನ್ನದ ಅವನದ್ದು 30 ವರ್ಷಗಳ ಸ್ನೇಹ ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗ ಅಂಬರೀಶ್‌ ಮನೆಯಲ್ಲಿ ಊಟ ಮಾಡದೇ ಹೋಗುತ್ತಿರಲಿಲ್ಲ.

ಕಲ್ಮಶವೇ ಇಲ್ಲದಂತಹಾ ಸ್ನೇಹ ಅವನದ್ದು ಅವನಂತಹಾ ಆತ್ಮೀಯತೆ ಮತ್ತೆ ಸಿಗುವುದಿಲ್ಲ ಎಂದು ರಜನೀ ಹೇಳುತ್ತಾರೆ. ಇನ್ನು ಅಂಬಿ ಸಂಭ್ರಮಕ್ಕೆ ಬಂದಿದ್ದ ರಜನಿ ಅಂಬಿ ಎದರು ಅವರ ಸ್ನೇಹದ ಬಗ್ಗೆ ಏನು ಹೇಳಿದ್ದರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.

Leave A Reply

Your email address will not be published.