ಬರ್ತಡೇ ಆಚರಿಸುವಾಗ ಡಿಬಾಸ್ ಯಡವಟ್ಟು…ನೋಡಿ ಚಿಂದಿ ವಿಡಿಯೋ

Advertisement
ನಮ್ಮ ಕನ್ನಡ ಚಿತ್ರರಂಗದ (KFI) ಬಾಕ್ಸ್ ಆಫೀಸ್ ಸುಲ್ತಾನ (Box Office Sulthan)ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರು ಕಳೆದ ತಿಂಗಳು (ಫೆಬ್ರವರಿ 16) ರಂದು ತಮ್ಮ 46ನೇ ಹುಟ್ಟುಹಬ್ಬವನ್ನು(Birthday) ಆಚರಿಸಿಕೊಂಡರು. ಹೌದು ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ (Covid) ಮತ್ತು ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ರವರ ಅಕಾಲಿಕ ಅಗಲಿಕೆ ನೋವಿನಿಂದ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳದೇ ಇದ್ದ ದರ್ಶನ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಈ ಬಾರಿಯಂತೂ ಬಹಳ ದೊಡ್ಡ ಮಟ್ಟದಲ್ಲಿಯೇ ಆಚರಿಸಿದ್ದಾರೆ.
ಎನ್ನಬಹುದು.ಹೌದು ಅದರಲ್ಲಿಯೂ ಹುಟ್ಟುಹಬ್ಬದ ದಿನದಂದು ನೋಡಲು ಹಿಂದಿನ ದಿನದಿಂದಲೇ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳನ್ನು (Fans) ನಟ ದರ್ಶನ್ ಭೇಟಿ(Meet) ಮಾಡಿ ಎಲ್ಲರಿಗೂ ಕೂಡ ಶೇಕ್ ಹ್ಯಾಂಡ್ ನೀಡಿ ಪ್ರೀತಿಯಿಂದ ನಡೆದುಕೊಂಡಿದ್ದಾರೆ. ಹೌದು ತನ್ನನ್ನು ನೋಡಲು ಬಂದ ಅಭಿಮಾನಿಗಳಿಗೆ ದರ್ಶನ್ ರವರು ಊಟದ ವ್ಯವಸ್ಥೆಯನ್ನೂ ಸಹ ಮಾಡಿದ್ದರು.
ನಟ ದರ್ಶನ್ ರವರ ಹುಟ್ಟುಹಬ್ಬ ಆಚರಣೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದ ಕನ್ನಡದ ಯುಟ್ಯೂಬ್ (YouTube) ಚಾನೆಲ್ ವೊಂದು ದರ್ಶನ್ ರವರ ಮನೆ ಪಕ್ಕ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿಗಳಿಗಾಗಿ ಮಾಡಲಾಗಿರುವ ಊಟದ ವ್ಯವಸ್ಥೆಯ ಬಗ್ಗೆ ಸಹ ತೋರಿಸಿದ್ದರು.
ಹೌದು ಊಟವನ್ನು ಅಭಿಮಾನಿಗಳಿಗೆ ಉಣ ಬಡಿಸುತ್ತಿದ್ದವರು ಮಾತನಾಡಿದ್ದು ಮಧ್ಯರಾತ್ರಿ ಹುಟ್ಟುಹಬ್ಬಕ್ಕೆಂದು ಬರುವ ಬಾಸ್ ಅಭಿಮಾನಿಗಳಿಗೆ ಅನ್ನ ಸಾಂಬಾರ್ (Rice Samber) ಮೈಸೂರು ಪಾಕ್ ಸ್ವೀಟ್ (Mysore Paak) ಅನ್ನು ನೀಡಲಾಗಿದ್ದು ಬೆಳಗ್ಗೆ ತಿಂಡಿ ವ್ಯವಸ್ಥೆ ಕೂಡ ಇತ್ತು. ಇ ಹುಟ್ಟುಹಬ್ಬದಂದು ಮಧ್ಯರಾತ್ರಿಯವರೆಗೂ ಸುಮಾರು ನಾಲ್ಕು ಸಾವಿರ ಜನಕ್ಕೆ ಊಟ ನೀಡಿದ್ದೇವೆ ಎಂದು ಹೇಳಿದ ಅವರು ಸುಮಾರು 30 ರಿಂದ 40ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂಬ ವಿಚಾರ ತಿಳಿಸಿದರು.
Advertisement
ಮೂಲಗಳ ಪ್ರಕಾರವಾಗಿ ಈ ಅನ್ನಸಂತರ್ಪಣೆಯಲ್ಲಿ ಸುಮಾರು ಮೂರು ಕೋಟಿಗು ಅಧಿಕ ಹಣವನ್ನ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಇದನ್ನು ದರ್ಶನ್ ಆಪ್ತರು ಹಾಗೂ ಅಭಿಮಾನಿಗಳೇ ಮಾಡಿದ್ದು ಆದರೆ ನಟ ದರ್ಶನ್ ಆ ಹಣವನ್ನು ತಾನೆ ಕೊಡುತ್ತೇನೆ ಎಂದು ಮನವಿ ಮಾಡಿದ್ದರು ಎನ್ನಲಾಗಿದೆ. ಆದರು ಕೂಡ ಡಿ ಬಾಸ್ ಕೈಯಲ್ಲಿ ಖರ್ಚು ಮಾಡಿಸದೇ ತಾವೇ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದರ್ಶನ್ ರವರು ತನ್ನ ಅಭಿಮಾನಿಗಳಿಗೆ ಉಡುಗೊರೆ ತರಬೇಡಿ ಎಂದು ಎಷ್ಟೇ ಹೇಳಿದರೂ ಕೂಡ ಅಭಿಮಾನಿಗಳು ಅದನ್ನು ಕೇಳ್ತಾರಾ? ಅವರು ಮನವಿ ಮಾಡಿದರೂ ಕೂಡ ನಾವು ಪ್ರೀತಿಯಿಂದ ಗಿಫ್ಟ್ ಕೊಡುವುದನ್ನು ಬಿಡಲ್ಲ ಎಂದು ಹೇಳುತ್ತಿರುವ ಫ್ಯಾನ್ಸ್ ವಿಭಿನ್ನ ಉಡುಗೊರೆಗಳನ್ನು ಹಿಡಿದು ಬಂದಿದ್ದರು.
ಹೌದು ಅದರಲ್ಲಿಯೂ ದಾವಣಗೆರೆಯ ದರ್ಶನ್ ಅಭಿಮಾನಿಯೋರ್ವ ಹಸುಗಳಿಗೆ ಕಟ್ಟುವ ಕಲರ್‌ಫುಲ್ ಗಂಟೆಯನ್ನು ತಂದಿದ್ದರು. ದರ್ಶನ್ ಅವರಿಗೆ ಹಸುಗಳೆಂದರೆ ಬಲು ಪ್ರೀತಿ ಹೀಗಾಗಿಯೇ ಈ ಗೆಜ್ಜೆಯನ್ನು ತಂದಿದ್ದೇನೆ ಅವರಿಗೆ ಇದು ಇಷ್ಟವಾಗುತ್ತೆ ಎಂಬ ನಂಬಿಕೆ ಇದೆ ಎಂದರು. ಸದ್ಯ ಇದೀಗ ದರ್ಶನ್ ಮೂಡ್ ಹೇಗಿದೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ ಸಂತಸ ಪಡುತ್ತೀರ.
Advertisement