Karnataka Times
Trending Stories, Viral News, Gossips & Everything in Kannada

Yuva Rajkumar: ವೈರಲ್ ಆಯ್ತು ಅಪ್ಪು ಮಗಳಿಗಾಗಿ ಯುವ ರಾಜಕುಮಾರ್ ಮಾಡಿದ ಕೆಲಸ.

ನಮ್ಮ ಕನ್ನಡ ಚಿತ್ರರಂಗದ (KFI) ಪವರ್ ಸ್ಟಾರ್ ಹಾಗೂ ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ರವರ (Puneeth Rajkumar) ಹುಟ್ಟುಹಬ್ಬವನ್ನು (Birthday) ಅಭಿಮಾನಿಗಳು ಇಡಿ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಹೌದು ಇಂದು ಅಪ್ಪು (Appu) ರವರ ಪುಣ್ಯಸ್ಥಳದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ತನಕ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇತ್ತ ರಾಜ್ಯದ ಹಲವು ಕಡೆಗಳಲ್ಲಿ ಅಭಿಮಾನಿಗಳು ಹಲವು ರೀತಿಯಲ್ಲಿ ಅಪ್ಪು ರವರ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಇನ್ನು ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲವೆಂದರೆ ಸಂಭ್ರಮಕ್ಕೇನೂ ಕೊರತೆ ಕಾಣುತ್ತಿಲ್ಲ ಎನ್ನಬಹುದು.

ಇನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kanteerava Studio Banglore) ಅಪ್ಪು ಸಮಾಧಿಗೆ ಮುಂಜಾನೆ ಎಂಟು ಗಂಟೆಗೆ ಪೂಜೆ ಸಲ್ಲಿಸುವ ಮೂಲಕವಾಗಿ ಹುಟ್ಟು ಹಬ್ಬಕ್ಕೆ (Birthday) ಚಾಲನೆ ನೀಡಲಾಯಿತು. ಬೆಳಗ್ಗೆ 10 ರಿಂದ ಅನ್ನ ಸಂತರ್ಪಣೆ ಮತ್ತು ಸಂಜೆ 6 ಗಂಟೆಗೆ ಪುನೀತ್ ರಾಜಕುಮಾರ್ ರವರ ಹಿಟ್ ಹಾಡುಗಳ (Hit Songs) ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇನ್ನು ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Join WhatsApp
Google News
Join Telegram
Join Instagram

ಇನ್ನು ರಾಜ್ಯದ ನಾನಾ ಕಡೆಗಳಲ್ಲಿ ಅಪ್ಪು ಪುತ್ಥಳಿ ಅನಾವರಣ ಮತ್ತು ಅನ್ನ ಸಂತರ್ಪಣೆ ಹಾಗೂ ಅನಾಥಾಶ್ರಮಗಳಲ್ಲಿ ಹುಟ್ಟು ಹಬ್ಬ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿರುವುದು ವಿಶೇಷ. ಇನ್ನು ಧಾರವಾಡದಲ್ಲಿ (Dharwad) ಅಪ್ಪು ಹೆಸರಿನಲ್ಲೇ ಚಂದ್ರಶೇಖರ್ ಮಾಡಲಗೇರಿ ಮತ್ತು ತಂಡ ಚಿತ್ರೋತ್ಸವವನ್ನು (Film Festival) ಆಯೋಜನೆ ಮಾಡಲಾಗಿದ್ದು ಮೂರು ದಿನಗಳ ಕಾಲ ಪುನೀತ್ ರವರ ಹೆಸರಿನಲ್ಲೇ ಈ ಚಿತ್ರೋತ್ಸವ ನಡೆಯಲಿದೆ. ಇನ್ನು ಅಪ್ಪು ಹೆಸರಿನಲ್ಲಿ ಪ್ರಶಸ್ತಿಗಳನ್ನೂ ನೀಡಲಾಗುತ್ತಿದೆ.

ಇನ್ನು ಬೆಂಗಳೂರಿನ ಅನೇಕ ಕಡೆ ಇಂದು ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿದ್ದು ಪುನೀತ್ ಅವರ ಹುಟ್ಟು ಹಬ್ಬದ ದಿನದಂದೆ ಆರ್.ಚಂದ್ರು (R Chandru) ನಿರ್ದೇಶನದ ಉಪೇಂದ್ರ(Upendra) ಸುದೀಪ್ (Sudeep) ಮತ್ತು ಶಿವರಾಜ್ ಕುಮಾರ್ (Shivarajkumar) ಕಾಂಬಿನೇಷನ್ ನ ಕಬ್ಜ (Kabza) ಚಿತ್ರ ರಿಲೀಸ್ ಆಗಿದೆ. ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲೂ ಅಪ್ಪು ಕಟೌಟ್ ಹಾಕಿದೆ ಚಿತ್ರತಂಡ.

ಸದ್ಯ ಈ ನಡುವೆ ವಿಶೇಷವಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಈ ವಿಡಿಯೋ ನಿಜಕ್ಕೂ ಕೆಲವರಿಗೆ ಒಂದು ರೀತಿಯ ಖುಷಿ ನೀಡದರೆ ಇನ್ನು ಕೆಲವರಿಗೆ ಕಣ್ಣಲ್ಲಿ ನೀರು ತರಿಸುತ್ತದೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಅವ್ರು ಯಾವಗಲೂ ಹೇಳುತ್ತಿದ್ದರು ನನ್ನ ಮಕ್ಕಳಿಗೆ (ಧೃತಿ ಹಾಗು ವಂದಿತಾ) ‍ಅಣ್ಣಂದಿರು(ವಿನಯ್ ಹಾಗೂ ಯುವ ರಾಜಕುಮಾರ್) ಎಂದರೆ ಬಹಳ ಪ್ರೀತಿ.

ಯಾವಾಗಲೂ ಅವರ ಜೊತೆ ಬೆರೆಯುತ್ತಿದ್ದಾರೆ ಎಂದಿದ್ದರು. ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ವೈರಲ್ ಆಗುತ್ತಿದ್ದು ಇಂದು ಅಪ್ಪು ಸಮಾಧಿ ಬಳಿ ವಂದಿತಾರನ್ನ ಅಣ್ಣಂದಿರಿಬ್ಬರು ಯಾರು ಕೂಡ ಟಚ್ ಮಾಡದ ಹಾಗೆ ಬಾಡಿಗಾರ್ಡ್ ರೀತಿಯಲ್ಲಿ ಕಾವಲು ಕಾದಿದ್ದು ಸದ್ಯ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೇ ತಂಗಿಯ ಮೇಲೆ ಅಣ್ಣಂದಿರ ಪ್ರೀತಿ ಕಂಡು ನೆಟ್ಟಿಗರ ಮನಸ್ಸು ಕರಗಿದೆ.

Leave A Reply

Your email address will not be published.