Rashmika Mandanna Dance: ಮರಾಠಿಗರ ಉಡುಗೆಯಲ್ಲಿ ಡ್ಯಾನ್ಸ್ ಮಾಡಿದ ರಶ್ಮಿಕಾ ಕ್ಯೂಟ್ ವಿಡಿಯೋ.
ಕನ್ನಡದ ಬೆಡಗಿ ನಟಿ ರಶ್ಮಿಕಾ (Rashmika Mandanna) ಜೀ ಸಿನಿಮಾ ಅವಾರ್ಡ್ಸ್ (Zee Cinema Awards) ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಪಕ್ಕಾ ಮರಾಠಿ (Marati) ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು ವೇದಿಕೆ ಮೇಲೆ ಮರಾಠಿ ಸ್ಟೈಲ್ ನಲ್ಲಿ ಡ್ಯಾನ್ಸ್ ನೋಡಿದ ಅಭಿಮಾನಿಗಳು (Fans) ನ್ಯಾಷನಲ್ ಕ್ರಶ್ (National Crush) ವೈರಾಕ್ಕೇ ಫಿದಾ ಆಗಿದ್ದಾರೆ ಎನ್ನಬಹುದು.
ಇನ್ನು ಮರಾಠಿ ಸಾಂಪ್ರದಾಯಿಕ ಉಡುಗೆಯಲ್ಲಿ ರಶ್ಮಿಕಾ ರವರು ಸಖತ್ ಆಗಿ ಕಾಣುತ್ತಿದ್ದು ನಟಿ ರಶ್ಮಿಕಾ ಮಂದಣ್ಣ ಫೋಟೋಗಳು (Photos) ಕೂಡ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗಿದೆ. ಹೌದು ನಾಥ್ ಮತ್ತು ನೌವಾರಿ ಸೀರೆಗಳಲ್ಲಿ ರಶ್ಮಿಕಾ ನೋಡಿದ ಅಭಿಮಾನಿಗಳು ನೀವು ಪಕ್ಕಾ ಮರಾಠಿ ಹುಡುಗಿನೇ ಅಂತಿದ್ದಾರೆ.
ಇನ್ನು ವೇದಿಕೆ ಮೇಲೆ ಮಸ್ತ್ ಡ್ಯಾನ್ಸ್ ಮಾಡಿದ ರಶ್ಮಿಕಾ ಮಂದಣ್ಣ ರವರು ತನ್ನ ಬಾಲ್ಯದ ದಿನಗಳನ್ನು ಕೂಡ ನೆನಪು ಮಾಡಿಕೊಂಡರು. ನನ್ನ ಮತ್ತು ಮರಾಠಿ ಹಾಡುಗಳ ನಡುವಿನ ಸಂಬಂಧ ತುಂಬಾ ಹಳೆಯದು ಎಂದು ಹೇಳಿದ್ದಾರೆ. ರಾಜಶ್ರೀ ಮರಾಠಿಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮರಾಠಿ ಹಾಡುಗಳ ಜೊತೆಗಿನ ಸಂಬಂಧದ ಬಗ್ಗೆ ಕೂಡ ಮಾತಾಡಿದ್ದು ಬಾಲ್ಯದಲ್ಲಿ ಐಕಾ ದಾಜಿಬಾ ಹಾಡಿಗೆ ಕುಣಿಯುತ್ತಿದ್ದೆ. ಆಗಷ್ಟೇ ನನಗೆ ಮರಾಠಿ ಹಾಡುಗಳ ಪರಿಚಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಇನ್ನು ಹಲವು ವರ್ಷಗಳ ಬಳಿಕ ಈಗ ಲಾವಣಿ ಡ್ಯಾನ್ಸ್ ಮಾಡಿದ್ದು ಹಾಗಾಗಿ ಈ ಸಂದರ್ಭದಲ್ಲಿ ನನ್ನ ಬಾಲ್ಯದ ಎಲ್ಲಾ ನೆನಪುಗಳು ಮರಳಿ ಬಂದಿವೆ. ನನ್ನ ಈ ನೃತ್ಯ ನಿಮಗೆಲ್ಲಾ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ ರಶ್ಮಿಕಾ ಮಂದಣ್ಣ ರವರು ಮಸ್ತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ.
ಇನ್ಜು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಮರಾಠಿ ಹಾಡಿಗೆ ಕುಣಿದು ಕುಪ್ಪಳಿಸಿದ್ದು ವೇದಿಕೆ ಮೇಲೆ ಮಿಂಚಿದ ರಶ್ಮಿಕಾ ಡ್ಯಾನ್ಸ್ ವಿಡಿಯೋ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಜೀ ಚಿತ್ರ ಗೌರವ್ ಅವಾರ್ಡ್ಸ್ 2023 ಮಾರ್ಚ್ 26 ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದ್ದು ಈ ವರುಷ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಚಿತ್ರಗಳು ನಾಮನಿರ್ದೇಶನಗೊಂಡಿದ್ದುನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಪುಷ್ಪ 2 ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.