Washing Machine Explosion: ವಾಷಿಂಗ್ ಮೇಷಿನ್ ಸ್ಫೋಟ, ಅಚ್ಚರಿಯ ರೀತಿಯಲ್ಲಿ ವ್ಯಕ್ತಿ ಪಾರು, ವಿಡಿಯೋ ಇಲ್ಲಿದೆ
ಜೀವ ವೊಂದಿದ್ದರೆ ಏನಾನ್ನದರೂ ಕೂಡ ಬೇಡಿ ತಿನ್ನ ಬಹುದು ಎಂಬ ನುಡಿಗಟ್ಟನ್ನು ನೀವು ಕೇಳಿರಬಹುದು. ಇದಕ್ಕೆ ತಕ್ಕದಾದ ಉದಾಹರಣೆ ಯೊಂದರ ವೀಡಿಯೋ (Video) ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social video) ಫುಲ್ ಫೇಮಸ್ ಆಗುತ್ತಿದೆ. ಈ ವೀಡಿಯೋ ಬಗ್ಗೆ ಜನರು ತಮ್ಮ ಅಭಿಪ್ರಾಯವನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.
ಯಾವುದು ಈ Video:
ಇದೊಂದು ವಿದೇಶಿ ಮೂಲದ ವೀಡಿಯೋ (Video) ಆಗಿದ್ದು ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಪಟ್ಟಿಯಲ್ಲಿದೆ. ವಿದೇಶದಲ್ಲಿ ಲಾಂಡ್ರಿ ಸಿಸ್ಟಂ ಬಹುತೇಕ ಜನಪ್ರಿಯವಾಗಿದ್ದು ಒಮ್ಮಿಂದೊಮ್ಮೆಲೆ ವಾಷಿಂಗ್ ಮೆಷಿನ್ ಸ್ಫೋಟಗೊಂಡ (Washing Machine Explosion) ವೀಡಿಯೋ (Video) ಇದು ಎನ್ನಬಹುದು. ಈ ಮೂಲಕ ವ್ಯಕ್ತಿಯೋರ್ವ ಪವಾಡ ಸದೃಶ್ಯದಂತೆ ಪಾರಾಗಿದ್ದಾನೆ. ವೀಡಿಯೋ ಆರಂಭದಲ್ಲಿ ವ್ಯಕ್ತಿ ತನ್ನ ಕೈ ನಲ್ಲಿ ಬ್ಯಾಗ್ ಹಿಡಿದು ಹೊರ ನಡೆಯುತ್ತಾನೆ ಆಗ ಕ್ಷಣಾರ್ಧದಲ್ಲೆ ವಾಷಿಂಗ್ ಮೆಷಿನ್ ಸ್ಫೋಟ ಗೊಳ್ಳುತ್ತದೆ. ಈ ಮೂಲಕ ಅಲ್ಲಿನ ಬಾಗಿಲು, ಗಾಜಿನ ಕಿಟಕಿ ಎಲ್ಲವೂ ನೆಲಸಮವಾಗುತ್ತದೆ. ಇದು ವ್ಯಕ್ತಿಯ ನಸೀಬು ಅಥವಾ ಅದೃಷ್ಟ ಚೆನ್ನಾಗಿತ್ತು ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.
ಯಾಕಾಯ್ತು ಈ ಸ್ಫೋಟ:
ಈ ಸ್ಫೋಟದ ವೀಡಿಯೋ ವೈರಲ್ (Blasting video viral) ಆಗುತ್ತಿದ್ದಂತೆ ಇದಕ್ಕೆ ಕಾರಣವನ್ನು ಸಹ ಪತ್ತೆ ಹಚ್ಚಲಾಗುತ್ತಿದೆ. ಈ ಮೂಲಕ ಮೊದಲು ನಾಲ್ಕೈದು ಬಾರಿ ವಾಷಿಂಗ್ ಮಿಶನ್ ಸುತ್ತಿ ಬಳಿಕ ಸ್ಫೋಟ ಸಂಭವಿಸಿದ್ದು ತಿಳಿದು ಬಂದಿದೆ. ಇದು ನಮ್ಮದೆ ಸಿಲ್ಲಿ ಮಿಸ್ಟೇಕ್ ನ ಭಾಗವಾಗಿರುತ್ತದೆ. ಅಂದರೆ ವಾಷಿಂಗ್ ಮೆಷಿನ್ ಗೆ ಹಾಕಿದ್ದ ಬಟ್ಟೆಯನ್ನು ಸರಿಯಾಗಿ ನೋಡಿಲ್ಲ. ಅದರಲ್ಲಿ ಯಾವುದೋ ಸ್ಫೋಟವಾಗುವ ವಸ್ತು ಅಥವಾ ಸೀಸರ್ ಲೈಟ್ ವಸ್ತು (Gas’s light) ಇದ್ದಿರಬೇಕು ಮೆಷಿನ್ ಒಳಗೆ ಅದು ಸ್ಫೋಟ ಗೊಂಡು ಆವಾಂತರವಾಗಿದೆ ಎಂಬ ಮಾಹಿತಿ ಸದ್ಯ ತಿಳಿದು ಬಂದಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಸಹ ತಿಳಿದಿಲ್ಲ.
ಒಟ್ಟಾರೆಯಾಗಿ ವಾಷಿಂಗ್ ಮೆಷಿನ್ (Washing Machine) ಸರಿಯಾಗಿ ಇದೆಯೇ ಇಲ್ಲವೆ ಎಂದು ತಿಳಿಯುವುದರೊಂದಿಗೆ ನಮ್ಮ ಬಟ್ಟೆ ಜೇಬಿನಲ್ಲಿ ಏನಾದರೂ ವಸ್ತು ತೆಗೆಯಲು ಬಾಕಿಯಾಗಿರಬಹುದೇ ಎಂದು ಸಹ ಪರಿಶೀಲನೆ ಮಾಡುವುದು ಅಷ್ಟೇ ಅಗತ್ಯವಾಗಿದೆ. ಅದೇ ರೀತಿ ಇತ್ತೀಚಿನ ದಿನದಲ್ಲಿ ವೈರಲ್ ವೀಡಿಯೋಗಳು ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಲೇ ಇದ್ದು ಇದು ಜನರಿಗೆ ಮುಂದಾಗಬಹುದಾದ ಅಪಾಯದ ಬಗ್ಗೆ ನೀಡುವ ಎಚ್ಚರಿಕೆ ಎಂದರೂ ತಪ್ಪಗಲಾರದು.
Someone didn't check their pockets pic.twitter.com/MjpK5mPba7
— OnlyBangers (@OnlyBangersEth) April 2, 2023