Marriage: ಮದುವೆ ಎಂದರೇನು? ಈ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ತಲೆಕೆಡಿಸಿಕೊಂಡ ಶಿಕ್ಷಕರು

Advertisement
ದೇಶದಲ್ಲಿ ಬಹುತೇಕ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದಿದೆ. ಕೆಲವರು ಪರೀಕ್ಷೆ ಎದುರಿಸುತ್ತಿದ್ದಾರೆ ಆದರೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಕೊಟ್ಟಾಗ ಉತ್ತರ ಬರೆಯುವ ರೀತಿ ಮಾತ್ರ ಅಚ್ಚರಿ ಮೂಡಿಸುತ್ತೆ. ಅದರಲ್ಲೂ ಕೆಲವರ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿವೆ. ಕೆಲವರು ಬರೆಯುವ ಉತ್ತರಗಳನ್ನು ನೋಡಿ ಬಿದ್ದು ಬಿದ್ದು ನಕ್ಕವರು ಇದ್ದಾರೆ ಆದರೆ ಈ ಉತ್ತರಗಳು ಶಿಕ್ಷಕರ ತಲೆ ಕೆಡಿಸುವುದಂತು ಸುಳ್ಳಲ್ಲ.
ಸಾಕಷ್ಟು ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರವನ್ನೇ ಬಿಡದೆ ಖಾಲಿ ಪೇಪರ್ ಕೊಟ್ಟು ಬರುವುದು ಅಥವಾ ಪ್ರಶ್ನೆಗೆ ಸಂಬಂಧಿಸಿದ ಇರುವ ಉತ್ತರ ಬರೆಯುವುದು ಹಾಡು ಬರೆಯುವುದು ಇವೆಲ್ಲವು ಸಾಮಾನ್ಯವಾಗಿದೆ. ಇದೇ ರೀತಿ ಒಬ್ಬ ಬುದ್ಧಿವಂತ ವಿದ್ಯಾರ್ಥಿ ಮದುವೆ ಏನು ಎಂಬ ಪ್ರಶ್ನೆಗೆ ಬರೆದಿರುವ ಉತ್ತರ ನೋಡಿ ಜನ ಬಿದ್ದು ಬಿದ್ದು ನಗುತ್ತಿದ್ದಾರೆ ಅಷ್ಟಕ್ಕೂ ಆತ ಬರೆದಿರುವ ಉತ್ತರ ಏನಾಗಿತ್ತು ಗೊತ್ತಾ?
ವಿದ್ಯಾರ್ಥಿಯ ಹಾಸ್ಯಮಯ ಉತ್ತರ ಹೀಗಿತ್ತು:
ಮದುವೆ ಎಂದರೇನು? ಎನ್ನುವ ಪ್ರಶ್ನೆಗೆ ಒಬ್ಬ ವಿದ್ಯಾರ್ಥಿ ವಿಭಿನ್ನವಾಗಿ ಉತ್ತರ ಬರೆದಿದ್ದಾರೆ ಇದು ತುಂಬಾನೇ ತಮಾಷೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆತನ ಉತ್ತರ ಪತ್ರಿಕೆ ವೈರಲ್ ಆಗಿದೆ. “ಮನೆಯವರು ಹುಡುಗಿಯನ್ನು ಕರೆದು, ನೀನು ದೊಡ್ಡವಳಾಗಿದ್ದೀಯ ಇನ್ನು ನಮಗೆ ನಿನ್ನನ್ನ ಕೇರ್ ಮಾಡಲು ಸಾಧ್ಯವಿಲ್ಲ ಹಾಗಾಗಿ ಯಾರು ನಿನಗೆ ಊಟ ತಿಂಡಿ ಕೊಟ್ಟು ನಿನ್ನನ್ನು ಕೇರ್ ಮಾಡುತ್ತಾರೋ ಅಂತವರನ್ನು ಹುಡುಕಿಕೊ ಎಂದು ಹೇಳಿದರೆ ಅದುವೇ ಮ್ಯಾರೇಜ್” (Marriage) ಎಂದು ವಿದ್ಯಾರ್ಥಿ ಉತ್ತರಿಸಿದ.
ಮದುವೆಯ ಬಗ್ಗೆ ಇನ್ನಷ್ಟು ವಿವರಣೆ ನೀಡಿರುವ ವಿದ್ಯಾರ್ಥಿ, “ನಂತರ ಹುಡುಗಿ ಹುಡುಗನನ್ನು ಹುಡುಕುತ್ತಾಳೆ ಇಬ್ಬರೂ ಭೇಟಿಯಾಗುತ್ತಾರೆ ಇದರೊಂದಿಗೆ ಇಬ್ಬರೂ ಪರಸ್ಪರ ಪರೀಕ್ಷಿಸಿ ಒಟ್ಟಿಗೆ ವಾಸಿಸಲು ಆರಂಭಿಸುತ್ತಾರೆ” ಹೀಗೆ ಮದುವೆ ಸಂಪನ್ನವಾಗುತ್ತದೆ ಎಂದು ಆ ವಿದ್ಯಾರ್ಥಿ ಬರೆದಿದ್ದ ಇಷ್ಟಕ್ಕೂ ಈ ಉತ್ತರ ನೀಡಿದ ವಿದ್ಯಾರ್ಥಿ ಕೇವಲ ಮೂರನೇ ತರಗತಿಯಲ್ಲಿ ಓದುತ್ತಿದ್ದ ಈ ಉತ್ತರಕ್ಕೆ ಶಿಕ್ಷಕರು ಆತನಿಗೆ ಸೊನ್ನೆ ಅಂಕ ನೀಡಿದ್ದಾರೆ ಆದರೆ ವಿದ್ಯಾರ್ಥಿಯ ಉತ್ತರ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
What is marriage? 😂 pic.twitter.com/tM8XDNd12P
— Paari | Panchavan Paarivendan (@srpdaa) October 11, 2022