Karnataka Times
Trending Stories, Viral News, Gossips & Everything in Kannada

Viral Video: ಸೀರೆಯಲ್ಲಿ ಜಿಮ್ ವರ್ಕೌಟ್ ಮಾಡಿದ ಮಹಿಳೆ! ವಿಡಿಯೋ ಕೋಟಿಗಟ್ಟಲೆ ವೀಕ್ಷಣೆ

advertisement

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯರಾಗುವುದು ನೀರು ಕುಡಿದಷ್ಟೇ ಸುಲಭದ ಕೆಲಸವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋದಕ್ಕೆ ಜನರು ಈಗ ಯಾವ ಕೆಲಸ ಬೇಕಾದ್ರೂ ಕೂಡ ಮಾಡಿ ವಿಡಿಯೋ ಅಪ್ಲೋಡ್ ಮಾಡುವಂತಹ ಬುದ್ಧಿಯನ್ನು ತಂದುಕೊಂಡಿದ್ದಾರೆ.

ಇದು ಒಳ್ಳೇದೋ ಕೆಟ್ಟದ್ದೋ ಆದರೆ ಜನಪ್ರಿಯತೆ ಪಡೆದುಕೊಳ್ಳುವುದಕ್ಕಾಗಿ ಈ ರೀತಿ ಮಾಡೋದನ್ನ ಜನರು ಇತ್ತೀಚಿನ ದಿನಗಳಲ್ಲಿ ಪ್ರಾರಂಭ ಮಾಡಿದ್ದಾರೆ. ಇದೇ ಕಾರಣದಿಂದಾಗಿ ಸಾಕಷ್ಟು ಜನರು ರಾತ್ರೋರಾತ್ರಿ ವೈರಲ್ ಆಗಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರೋದನ್ನ ಕೂಡ ನೀವು ನೋಡಿರಬಹುದಾಗಿದೆ.

ಸೀರೆಯಲ್ಲಿ ಜಿಮ್ ನಲ್ಲಿ ಕಾಣಿಸಿಕೊಂಡ ಮಹಿಳೆ ವಿಡಿಯೋ ವೈರಲ್:

 

Image Source: News Nation TV

 

ಸಾಮಾನ್ಯವಾಗಿ ಜಿಮ್ ನಲ್ಲಿ ಪುರುಷರು ಹಾಗೂ ಮಹಿಳೆಯರು ವರ್ಕೌಟ್ ಮಾಡುವ ಸಂದರ್ಭದಲ್ಲಿ ಅದಕ್ಕೆ ಅಂತ ಮೀಸಲಾಗಿರಿಸಿರುವಂತಹ ವಸ್ತ್ರವನ್ನು ಧರಿಸುತ್ತಾರೆ. ಆದರೆ ಇನ್ನೊಬ್ಬ ಮಹಿಳೆ ಮಾತ್ರ ತಾನು ಮನೆಯಲ್ಲಿ ಅಥವಾ ಕಾರ್ಯಕ್ರಮಕ್ಕೆ ಹೋಗಲು ಧರಿಸುವಂತಹ ಸೀರಿಯಲ್ ಧರಿಸಿಕೊಂಡು ಜಿಮ್ ಗೆ ಬಂದು ವರ್ಕೌಟ್ ಮಾಡುತ್ತಿದ್ದಾಳೆ. ಇದನ್ನು ನೋಡಿರುವಂತಹ ನೆಟ್ಟಿಗರು ಸುಸ್ತು ಬಿದ್ದಿದ್ದಾರೆ.

advertisement

ಕೆಲವರಂತೂ ಈ ರೀತಿ ಕೂಡ ವರ್ಕೌಟ್ ಮಾಡಬಹುದಾದಲ್ಲೂ ವಿಶೇಷವಾಗಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಸೀರೆ ಉಟ್ಕೊಂಡು ಕಷ್ಟ ಆಗೋದಿಲ್ಲ ಎನ್ನುವುದಾಗಿ ಕೂಡ ಕೇಳುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಸಾಮಾನ್ಯವಾಗಿ ಸೀರಿಯಲ್ ಜಿಮ್ ವರ್ಕೌಟ್ ಮಾಡಬಹುದು ಅಂತ ಊಹಿಸಿಕೊಳ್ಳುವುದಕ್ಕೆ ಕೂಡ ಸಾಧ್ಯ ಆಗೋದಿಲ್ಲ ಅಂತದ್ರಲ್ಲಿ ಈ ಮಹಿಳೆ ಮಾಡಿ ತೋರಿಸಿದ್ದಾಳೆ. ಆದರೆ ನಿಜವಾದ ಸುರಕ್ಷತೆಯ ಗ್ಯಾರೆಂಟಿಯ ವಿಚಾರಕ್ಕೆ ಬಂದರೆ ಈ ರೀತಿ ಸೀರೆಯಲ್ಲಿ ಜಿಮ್ ವರ್ಕ್ ಔಟ್ ಮಾಡೋದು ನಿಜಕ್ಕೂ ಕೂಡ ಸರಿಯಲ್ಲ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗುತ್ತದೆ.

ಇನ್ನು ಈ ವಿಡಿಯೋ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಜನರು ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನ ನೋಡೋದಾದ್ರೆ ಕೆಲವರು ಯಾವ ವಸ್ತ್ರದಲ್ಲಿ ಬೇಕಾದರೂ ಕೂಡ ಜಿಮ್ ವರ್ಕೌಟ್ ಮಾಡಬಹುದು, ಬರಿ ಸೀರೆ ಯಾಕೆ ಲೆಹೆಂಗಾ ಹಾಕೊಂಡು ಬೇಕಾದ್ರೂ ಕೂಡ ವರ್ಕೌಟ್ ಮಾಡಿ ಅನ್ನೋದಾಗಿ ಹಾಸ್ಯಾಸ್ಪದವಾಗಿ ಕಮೆಂಟ್ ಮಾಡಿದ್ದಾರೆ. ಇಂಥವರಿಗೆ ಮನೆಯಲ್ಲಿ ಮೇಲೆ ಒಣಗಿಸಿರುವಂತಹ ವಸ್ತುವನ್ನು ತರುವುದಕ್ಕೆ ಹೇಳಿದರೆ ಸುಸ್ತಾಗುತ್ತೆ ಅಂತ ಹೇಳ್ತಾರೆ ಆದರೆ ಈ ರೀತಿ ವಿಡಿಯೋ ಮಾಡಿ ಡ್ಯಾನ್ಸ್ ಮಾಡಿ ವರ್ಕೌಟ್ ಮಾಡೋದಕ್ಕೆ ಅವರಿಗೆ ಯಾವ ಸುಸ್ತು ಕೂಡ ಆಗೋದಿಲ್ಲ ಅನ್ನೋದಾಗಿ ಹೇಳಿದ್ದಾರೆ.

 

 

ಇಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀವು ಸಾಕಷ್ಟು ನೋಡಬಹುದು ಆಗಿದ್ದು ಅರ್ಥ ಇಲ್ದೆ ಇದ್ರೂ ಕೂಡ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಎನ್ನುವಂತಹ ಒಂದೇ ಒಂದು ಕಾರಣಕ್ಕಾಗಿ ಈ ರೀತಿಯ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಜನ ಈ ವಿಡಿಯೋ ನೋಡಿ ಬೈದ್ರು ಹೊಗಳಿದ್ರು ಅವರಿಗೆ ಸಿಗಬೇಕಾಗಿರೋ ಎಂಗೇಜ್ಮೆಂಟ್ ಹಾಗೂ ರೀಚ್ ಸಿಕ್ಕೇ ಸಿಗುತ್ತದೆ.

advertisement

Leave A Reply

Your email address will not be published.