ಹಣ ಹೂಡಿಕೆ ಮಾಡಿದರೆ ಸಾಲದು, ಹೆಚ್ಚು ಆದಾಯ ಬರುವ ಹೂಡಿಕೆ ಯೋಜನೆ ಯಾವುದು ಎಂಬುದನ್ನ ತಿಳಿದುಕೊಳ್ಳಬೇಕು. ಆಗ ಮಾತ್ರ ಉತ್ತಮ ಆದಾಯ ಹಿಂಪಡೆಯಲು ಸಾಧ್ಯ. ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎರಡು ಡಿಪಾಸಿಟ್ ಸ್ಕೀಮ್ ಗಳನ್ನು ಪರಿಚಯಿಸಿದೆ. ಇದರಿಂದ ಗ್ರಾಹಕರು ಉತ್ತಮವಾಗಿರುವ ಲಾಭವನ್ನು ಪಡೆದುಕೊಳ್ಳಬಹುದು.
ಹಣ ಹೂಡಿಕೆ ಮಾಡುವ ಈ ಡೆಪಾಸಿಟ್ ಸ್ಕೀಮ್ ಗಳು 30 ಸೆಪ್ಟೆಂಬರ್ 2024ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ 31 ಮಾರ್ಚ್ 2025 ರವರೆಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ಹಾಗಾಗಿ ಗ್ರಾಹಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಅತಿ ಹೆಚ್ಚಿನ ಹಣ ಗಳಿಸಲು ಸಾಧ್ಯವಿದೆ. ಹಾಗಾದ್ರೆ ಆ ಸ್ಕೀಮ್ ಗಳು ಯಾವವು ಎಂಬುದನ್ನು ನೋಡೋಣ.
ಎಸ್ಬಿಐ ಅಮೃತ್ ಕಲಶ ಸ್ಕೀಮ್!
2023ರಲ್ಲಿ ಆರಂಭವಾದ ಅಮೃತ ಕಲಶ ಯೋಜನೆ (SBI Amrit Kalash Scheme) ಯಲ್ಲಿ 7.10% ವಾರ್ಷಿಕ ಬಡ್ಡಿದರ ನಿಗದಿಪಡಿಸಲಾಗಿದೆ. ಹಿರಿಯ ನಾಗರಿಕರಿಗೆ 7.60% ಕೊಡಲಾಗುವುದು. ಈ ಯೋಜನೆಯಲ್ಲಿ ತಿಂಗಳಿಗೆ ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಒಮ್ಮೆ ಬಡ್ಡಿ ಹಣವನ್ನು ಪಡೆದುಕೊಳ್ಳಬಹುದು. ಇದು 400 ದಿನಗಳ ಯೋಜನೆಯಾಗಿದ್ದು, ಅವಧಿಗೂ ಮೊದಲು ನೀವು ಡಿಪಾಸಿಟಿ ಇಟ್ಟ ಹಣವನ್ನು ಹಿಂಪಡೆದರೆ 0.50% ನಿಂದ 1% ಬಡ್ಡಿ ಕಡಿತಗೊಳ್ಳುತ್ತದೆ.
ಅಮೃತ ದೃಷ್ಟಿ ಯೋಜನೆ!
ಎಸ್ ಬಿ ಐ ಯೋಜನೆಯನ್ನು ಜಾರಿಗೆ ತಂದಿದ್ದು ಜುಲೈ 15 2024 ರಂದು. ಈ ಯೋಜನೆಯಲ್ಲಿ 444 ದಿನಗಳ ವರೆಗಿನ ಹೂಡಿಕೆ ಮಾಡಬಹುದು. ಸಾಮಾನ್ಯ ಗ್ರಾಹಕರಿಗೆ 7.25% ಹಾಗೂ ಹಿರಿಯ ನಾಗರಿಕರಿಗೆ 7.75% ನಷ್ಟು ವಾರ್ಷಿಕ ಬಡ್ಡಿ ನೀಡಲಾಗುವುದು. ಈ ಯೋಜನೆಯಲ್ಲಿ 3 ಕೋಟಿಯವರೆಗೆ ಗರಿಷ್ಠ ಹೂಡಿಕೆ ಮಾಡಬಹುದು.
ಎಸ್ ಬಿ ಐ ನಲ್ಲಿ ಹೂಡಿಕೆ ಮಾಡುವುದು ಹೇಗೆ?
ಈ ಮೇಲೆ ತಿಳಿಸಲಾದ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಲು ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ. ಸಹಾಯದಿಂದ, ಎಸ್ ಬಿ ಐ (SBI) ಬ್ಯಾಂಕಿನ YONO ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಆ ಮೂಲಕ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು.