ಇತ್ತೀಚೆಗೆ ಯಾರ ಜೇಬಿನಲ್ಲೂ ಕಾಸಿರೋದಿಲ್ಲ. ಸ್ಕ್ಯಾನರ್, ಕ್ಯೂ ಆರ್ ಕೋಡ್, ಮೊಬೈಲ್ ನಂಬರ್ ಮೂಲಕವೇ ಅಕೌಂಟ್‌ಗೇ ನೇರವಾಗಿ ಪಾವತಿ ಮಾಡುವ ಯುಪಿಐ ಟ್ಯಾನ್ಸಾಕ್ಷನ್ (UPI Transaction Limit) ಮಾಡೋರೇ ಜಾಸ್ತಿ. ಅಂಗಡಿಗಳಲ್ಲಿ, ಹೋಟೆಲ್, ಮಾಲ್, ಫ್ರೆಂಡ್ಸ್‌ಗೆ, ಮನೆಯೋರಿಗೆ ಅಷ್ಟೇ ಏಕೆ? ಹಬ್ಬಗಳಲ್ಲಿ ಕಲೆಕ್ಷನ್ ಮಾಡೋರು ಕೂಡ ಈಗ ಆನ್‌ಲೈನ್ ಪೇಮೆಂಟ್ (Online Payment) ಗೆ ಯುಪಿಐ ಬಳಸೋದು ಕಾಮನ್.
ಯುಪಿಐ ಮೂಲಕ ಯಾವುದೇ ವಿಳಂಬವಿಲ್ಲದೇ, ಈ ಕೂಡಲೇ ಹಣ ಪಾವತಿಸುವ ಹಾಗೂ ಎಲ್ಲಾ ಬ್ಯಾಂಕ್ ಖಾತೆಗಳನ್ನು ಒಂದೇ ಸೂರಿನಡಿ ತರುವ ಈ ಯುಪಿಐ ಸೌಲಭ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಸರ್ಕಾರ ಪರಿಚಯಿಸಿದ ನಂತರ, ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಹಣ ಪಾವತಿ ಹಾಗೂ ಹಣ ಸ್ವೀಕೃತಿ ಬಹಳ ಸಿಂಪಲ್ ಆಗಿಬಿಟ್ಟಿದೆ. ಇದೀಗ ಕೇಂದ್ರ ಸರ್ಕಾರ ಈ ಯುಪಿಐ ಪಾವತಿ ಮಾಡೋವವರಿಗೆ ಗುಡ್ ನ್ಯೂಸ್ ನೀಡಿದ್ದು, ಮೂರು ರೀತಿಯ ವ್ಯಾಪಾರ ವಹಿವಾಟುಗಳಲ್ಲಿ ಯುಪಿಐ ಪಾವತಿಯ ಮಿತಿ (UPI Transaction Limit) ಯನ್ನು 5 ಲಕ್ಷ ರೂ.ಗಳವರೆಗೆ ಹೆಚ್ಚಿಸಿದೆ.
ಹೌದು. ಸಾಮಾನ್ಯವಾಗಿ ಎಲ್ಲಾ ಗ್ರಾಹಕರಿಗೆ ಒಮ್ಮೆ ಮಾಡುವ ಪಾವತಿಯಲ್ಲಿ ಒಮ್ಮೆಗೆ ಗರಿಷ್ಟ 1 ಲಕ್ಷ ರೂ.ಗಳವರೆಗೆ ಮಾತ್ರ ಕಳುಹಿಸಲು ಸಾಧ್ಯ. ಆದರೆ, ಇದೀಗ ಈ ಮೂರು ರೀತಿಯ ಗ್ರಾಹಕರಿಗೆ ಒಂದೇ ಬಾರಿಗೆ ಗರಿಷ್ಟ 5 ಲಕ್ಷ ರೂ. ಗಳವರೆಗಿನ ಪಾವತಿಯನ್ನು ಮಾಡುವ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿದ್ದು, ಹಲವರಿಗೆ ಖುಷಿ ನೀಡಿದೆ.
ಐದು ಲಕ್ಷ ಪಾವತಿ ಮಿತಿ ಯಾರ್ಯಾರಿಗೆ?
5 ಲಕ್ಷ ರೂ.ಗಳವರೆಗಿನ ಪಾವತಿ ಮಿತಿ (UPI Transaction Limit) ಯನ್ನು ಮೂರು ಕೆಟಗರಿಗಳ ಬಳಕೆದಾರರಿಗೆ ಸರ್ಕಾರ ಹೆಚ್ಚಿಸಿದ್ದು, ಆ ಕೆಟಗರಿಗಳ ವಿವರ ಇಲ್ಲಿದೆ:
- ತೆರಿಗೆ ಪಾವತಿ
- ಆಸ್ಪತ್ರೆ
- ಐಪಿಓ
- ಶಿಕ್ಷಣ ಸಂಸ್ಥೆಗಳು
- ರಿಸರ್ವ್ ಬ್ಯಾಂಕ್ ನೇರ ಚಿಲ್ಲರೆ ವ್ಯವಹಾರ ವ್ಯವಸ್ಥೆ
ಈ ಎಲ್ಲಾ ಕೆಟಗರಿಯ ಗ್ರಾಹಕರಿಗೆ ನೇರವಾಗಿ 5 ಲಕ್ಷದವರೆಗೆ ಹಣವನ್ನು ಒಮ್ಮೆಗೇ ಪಾವತಿಸಬಹುದು. ಬ್ಯಾಂಕ್, ಪೇಮೆಂಟ್ ಸೈಟ್‌ಗಳು ಹಾಗೂ ಇತರ ಯುಪಿಐ ಆಪ್‌ಗಳಿಗೆ ಈಗಾಗಲೇ ಎನ್‌ಪಿಸಿಐ (NPCI)) ಸೂಚನೆ ನೀಡಿದ್ದು, ಈ ಕೆಟಗರಿಯ ಗ್ರಾಹಕರ ವಹಿವಾಟುಗಳನ್ನು ಅನುಮೋದಿಸುವ ವ್ಯವಸ್ಥೆಯನ್ನು ಖಾತರಿಪಡಿಸಿಕೊಳ್ಳಲು ಸೂಚಿಸಿದೆ.
UPI Transaction Limit: ಆಸ್ಪತ್ರೆಗಳಲ್ಲೂ ಯುಪಿಐ ಮಿತಿ ಹೆಚ್ಚಿಸಿದ NPCI
ವಿಶೇಷವೆಂದರೆ, ಈ ನೂತನ ಆದೇಶದ ಮೂಲಕ ಆಸ್ಪತ್ರೆಯಲ್ಲಿಯೂ ಯಾವುದೇ ಚೆಕ್ ಅಥವಾ ನಗದು ವ್ಯವಹಾರವಿಲ್ಲದೇ, 5 ಲಕ್ಷದವರೆಗೂ ಹಣವನ್ನು ಪಾವತಿ ಮಾಡಬಹುದಾಗಿದ್ದು, ಈ ವ್ಯವಸ್ಥೆಯಲ್ಲಿ ಬಹಳ ದೊಡ್ಡ ಪ್ಲಸ್ ಪಾಯಿಂಟ್. ಆಸ್ಪತ್ರೆ ಬಿಲ್ ಅಥವಾ ಆಸ್ಪತ್ರೆಯ ಕೆಲವು ಖರ್ಚುವೆಚ್ಚಗಳನ್ನು ಯುಪಿಐನ ಈ ಹೊಸ ವ್ಯವಸ್ಥೆಯಡಿ ತಂದರೆ, ವೆಚ್ಚ ನಿರ್ವಹಣೆಯೂ ಸುಲಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಇಷ್ಟೇ ಅಲ್ಲದೇ, ಷೇರು ಮಾರುಕಟ್ಟೆ ಅಥವಾ ಎಸ್ಐಪಿ ಹೂಡಿಕೆಯಲ್ಲಿಯೂ 1 ಲಕ್ಷ ಮೇಲ್ಪಟ್ಟು ಹೂಡಿಕೆಯಿರುವ ಐಪಿಓ ಅಥವಾ ಡೈರೆಕ್ಟ್ ರಿಟೇಲ್ ಸ್ಕೀಮ್‌ಗಳಲ್ಲಿಯೂ 5 ಲಕ್ಷದವರೆಗಿನ ಪಾವತಿಯನ್ನು ಅನುಮತಿಸಿರುವುದು, ಷೇರುದಾರರಿಗೆ ಹಾಗೂ ಹೂಡಿಕೆದಾರರಿಗೆ ಬಹಳ ಸಂತಸದ ಸುದ್ದಿಯನ್ನು ನೀಡಿದಂತಾಗಿದೆ. ಈ ಮೂಲಕ ದೊಡ್ಡ ಮೊತ್ತದ ಷೇರು ವರ್ಗಾವಣೆಯಲ್ಲಿ ಪಾಲ್ಗೊಳ್ಳುವವರಿಗೆ ಬಹಳ ಅನುಕೂಲವಾಗಲಿದೆ.
ಆದರೆ, ಈ ವ್ಯವಸ್ಥೆ ಕೇವಲ ಈ ಐದು ಕೆಟಗರಿಗಷ್ಟೇ ಲಭ್ಯವಿದ್ದು, ಉಳಿದ ಕೆಟಗರಿಯ ಪಾವತಿಗಳಿಗೆ 1 ಲಕ್ಷ ಮಿತಿ (UPI Transaction Limit) ಯೇ ಮುಂದುವರೆಯಲಿದೆ. ಅಷ್ಟೇ ಅಲ್ಲದೇ, ಪಾವತಿಯ ಮಿತಿಯನ್ನು ಆಯಾಯ ಬ್ಯಾಂಕುಗಳು ನಿರ್ಧರಿಸುವುದರಿಂದ, ಈ ವ್ಯವಸ್ಥೆಗೆ ಬ್ಯಾಂಕುಗಳು ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತವೆ ಎನ್ನುವುದು ಬ್ಯಾಂಕುಗಳ ವಿವೇಚನೆಗೆ ಸಂಬಂಧಿಸಿದ್ದಾಗಿದೆ.
ಆದಾಗ್ಯೂ, ಈ ವ್ಯವಸ್ಥೆಯನ್ನು ಅತ್ಯಂತ ಸುಲಭವಾಗಿ, ತ್ವರಿತವಾಗಿ ಬಳಸಬಹುದಾಗಿದ್ದು, ಯುಪಿಐ ಪಾವತಿ ಮಾಡುವ ಮುನ್ನ, ದಯವಿಟ್ಟು ಅದಕ್ಕೆ ಸಂಬಂಧಿಸಿದ ದಾಖಲೆಗಳು, ಓಟಿಪಿ ಹಾಗೂ ಪಾಸ್‌ವರ್ಡ್‌ಗಳನ್ನು ಸಾಧ್ಯವಾದಷ್ಟು ಗೌಪ್ಯವಾಗಿಟ್ಟುಕೊಳ್ಳಿ ಹಾಗೂ ಯಾವುದೇ ಸೈಬರ್ ವಂಚನೆಗೆ ಒಳಗಾಗದಿರಿ.