ಸ್ನೇಹಿತರೆ, ಜಗತ್ತು ದಿನೇ ದಿನೇ ಡಿಜಿಟಲೀಕರಣವಾಗುತ್ತಿದ್ದ ಹಾಗೆ ಸೈಬರ್ ಅಪರಾಧಗಳ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಪ್ರಪಂಚದ ಯಾವುದೋ ಒಂದು ಸಣ್ಣ ಮೂಲೆಯಲ್ಲಿ ಕುಳಿತ ಸೈಬರ್ ಕಿಂಗ್ ಪಿಂಗ್ಸ್ ಗಳು ನಮ್ಮ ಅಕೌಂಟ್ ನಲ್ಲಿ ಇರುವಂತಹ ಹಣಕ್ಕೆ ಕನ್ನ ಹಾಕಲು ನಾನಾ ಹಂಚನ್ನು ಹಾಕುತ್ತಿರುತ್ತಾರೆ. ಹೀಗಾಗಿ ಸರ್ಕಾರವು ಕೂಡ ಸೈಬರ್ ಅಪರಾಧಗಳ ಕುರಿತ ಮುನ್ನೆಚ್ಚರಿಕೆ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದು, ಜನಸಾಮಾನ್ಯರು ಇಂತಹ ಅಪರಾಧಗಳಿಗೆ ತುತ್ತಾಗುವ ಬದಲು ಸಣ್ಣ ಪುಟ್ಟ ಕ್ರಮಗಳನ್ನು ಅನುಸರಿಸಿ ಡಿಜಿಟಲ್ ಅಪರಾಧಗಳಿಂದ ಸುರಕ್ಷಿತವಾಗಿರಬಹುದು.
ನಿಮಗೆ ಗೊತ್ತಿಲ್ಲದೆ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ರಿಜಿಸ್ಟರ್ ಆಗಿದ್ದರೆ ಕೂಡಲೇ ಈ ಕೆಲಸ ಮಾಡಿ!
ಸಾಮಾನ್ಯವಾಗಿ ಸೈಬರ್ ಅಪರಾಧಿಗಳು ನಮ್ಮ ಹೆಸರು, ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆ ಹಾಗೂ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡಿ ಅದನ್ನು ಸೈಬರ್ ಅಪರಾಧಗಳನ್ನು (Cyber Crimes) ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ಹೀಗಾಗಿ ನಿಮ್ಮ ಐಡಿ ಯಲ್ಲಿ ನಿಮಗೆ ಅರಿವಿಲ್ಲದೆ ಯಾವುದಾದರೂ ಸಿಮ್ ಕಾರ್ಡ್ ಗಳು ಆಕ್ಟಿವಾಗಿದ್ದರೆ ಈ ಕೂಡಲೇ ಅದನ್ನು ತೆರವುಗೊಳಿಸುವುದು ಒಳಿತು. ಹೌದು ಗೆಳೆಯರೇ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಆಧಾರ್ ಕಾರ್ಡ್ ನಂಬರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಇನ್ನಿತರೆ ದಾಖಲಾತಿ ಗಳ ಸಹಾಯದಿಂದ ಮತ್ತೊಬ್ಬ ವ್ಯಕ್ತಿ ಯಾವುದಾದರೂ ಮೊಬೈಲ್ ಸಂಖ್ಯೆ ರಿಜಿಸ್ಟರ್ ಮಾಡಿ ಖರೀದಿಸಿದ್ದಾರೆ ಎಂಬ ಅನುಮಾನವಿದ್ದರೆ, ಈ ಕೂಡಲೇ ಅದನ್ನು ನಿಷ್ಕ್ರಿಯೆಗೊಳಿಸುವುದು ಉತ್ತಮ. ನಿಮ್ಮ ಪರ್ಸನಲ್ ಐಡಿ (Personal ID) ಯನ್ನು ಬಳಸಿಕೊಂಡು ಅವರು ಮಾಡುವಂತಹ ಸೈಬರ್ ಅಪರಾಧಗಳಿಗೆಲ್ಲ ನೀವು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮೊಬೈಲ್ ಸಂಖ್ಯೆ ರಿಜಿಸ್ಟ್ರೇಷನ್ ಪರೀಕ್ಷಿಸಲು ಸರ್ಕಾರದಿಂದ ಹೊಸ ಸೌಲಭ್ಯ!
ಸೈಬರ್ ಅಕ್ರಮದ (Cyber Crimes) ಕುರಿತು ಎಲ್ಲೆಡೆ ಮುನ್ನೆಚ್ಚರಿಕೆಯ ಸಂದೇಶವನ್ನು ಸಾರುತ್ತಿರುವಂತಹ ಸರ್ಕಾರವು, ಜನರಿಗಾಗಿ ಹೊಸ ಸುರಕ್ಷತಾ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು, ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಅಂಡ್ ಕಂಜುಮರ್ ಪ್ರೊಟೆಕ್ಷನ್/Telecom Analytics for Fraud Management and Consumer Protection (TAFCOP) ಎಂಬ ವೆಬ್ಸೈಟ್ ಸಹಾಯದಿಂದ ನಿಮ್ಮ ವೈಯಕ್ತಿಕ ದಾಖಲಾತಿಗಳ ಆಧಾರದ ಮೇಲೆ ಯಾವೆಲ್ಲ ಮೊಬೈಲ್ ಸಂಖ್ಯೆ ರಿಜಿಸ್ಟ್ರೇಷನ್ ಆಗಿದೆ ಎಂಬ ಮಾಹಿತಿಯನ್ನು ಮನೆಯಲ್ಲಿ ಕುಳಿತು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಬಳಕೆದಾರರು ತಮಗೆ ಅರಿವಿಲ್ಲದೆ ರಿಜಿಸ್ಟರ್ ಆಗಿರುವಂತಹ ಸಂಖ್ಯೆಗಳನ್ನು ನಿಷ್ಕ್ರಿಯೆ ಮಾಡಬಹುದಾದಂತಹ ಸೌಲಭ್ಯವು ಇದೆ.
ಸೇವೆಯ ಸೌಲಭ್ಯ ಪಡೆದುಕೊಳ್ಳುವ ವಿಧಾನ:
1. TAFCOP – https://tafcop.sancharsaathi.gov.in/telecomuser/ ಎಂಬ ವೆಬ್ ಸೈಟ್(website) ಗೆ ಭೇಟಿ ನೀಡಿ.
2. ನಂತರ ಅಲ್ಲಿ ನೀಡಲಾಗಿರುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು (Aadhar registeredMobile Number) ನಮೂದಿಸಿ. Captcha Code ಅನ್ನು ಹಾಕಿ Validate Captcha ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
4. 6 ಸಂಖ್ಯೆಯ ಓಟಿಪಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರಲಿದೆ ಅದನ್ನು ಸರಿಯಾದ ಕ್ರಮದಲ್ಲಿ ನಮೂದಿಸಿ ಲಾಗಿನ್(login) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
5. ಹೀಗೆ ವೆಬ್ಸೈಟ್ ತೆರೆದ ನಂತರ ಕೆಳಗೆ ತೋರಿಸಿದಂತೆ ನಿಮ್ಮ ದಾಖಲಾತಿಗಳನ್ನು ಉಪಯೋಗಿಸಿಕೊಂಡು ರಿಜಿಸ್ಟರ್ ಆಗಿರುವಂತಹ ನಂಬರ್ಗಳ ವಿವರ ಬರಲಿದೆ.
6. ಕೆಳಗೆ ತೋರಿಸಿದ ನಂಬರ್ ಗಳಲ್ಲಿ ಯಾವುದೇ ನಂಬರ್ ನೀವಾಗಲಿ ಅಥವಾ ನಿಮ್ಮ ಕುಟುಂಬಸ್ಥರಾಗಲೀ ಬಾಲಸುತ್ತಿರಲಿಲ್ಲವಾದರೆ, ಅಂತಹ ನಂಬರ್ ಗಳನ್ನೂ ಎಡಕ್ಕೆ ಸೆಲೆಕ್ಟ್ ಮಾಡಿ, ಬಲಕ್ಕೆ Not Required ಎಂಬ ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿ ಕೆಳಗಿನ ರಿಪೋರ್ಟ್ ಬಟನ್ ಅನ್ನು ಕ್ಲಿಕ್ ಮಾಡಿ.
ಇಷ್ಟು ಮಾಡಿ ಆದಮೇಲೆ ನಿಮ್ಮ ಮೊಬೈಲ್ ನಂಬಾರ್ ಗೆ Reference Id ಯೊಂದಿಗೆ Confirmation Message ಕೊಡಲಾಗುವು. ತದನಂತರ ಕೆಲವು ದಿನಗಲ್ಲಿ ನಿಮ್ಮದಲ್ಲದ ನಂಬರ್ ಗಳನ್ನೂ Deregister ಮಾಡಲಾಗುವುದು.
ಇಂತಹ ಇನ್ಫೋರ್ಮ್ಯಾಟಿವ್ ಸುದ್ದಿಗಳಿಗಾಗಿಜಿ ನಮ್ಮನ್ನು ಫ್ಡೋಲ್ಲೋ ಮಾಡಿ