ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಭಾರತೀಯ ಮನೆತನಗಳಲ್ಲಿ ಪುತ್ರರನ್ನು ಕುಟುಂಬದ ವಾರಸುದಾರೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ಆಸ್ತಿಯ ವಿಚಾರದಲ್ಲಿ ಯಾವುದೇ ಹಕ್ಕಿಲ್ಲವೆಂದು ಪೂರ್ವಜರ ಕಾಲದಿಂದಲೂ ಭಾವಿಸಲಾಗಿದೆ. ಮನೆಯ ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸಾದ ನಂತರ ಅವರಿಗೆ ಸೂಕ್ತವೆನಿಸುವಂತಹ ವರನನ್ನು ನೋಡಿ ಅತಿಯಾದ ವರದಕ್ಷಣೆ ಹಾಗೂ ಉಡುಗೊರೆಗಳನ್ನೆಲ್ಲ ನೀಡಿ ಮದುವೆ ಮಾಡಿಕೊಟ್ಟು ಸುಮ್ಮನಾಗಿಬಿಡುತ್ತಾರೆ. ಆಸ್ತಿಯ ಪಾಲುದಾರಿಕೆ ವಿಷಯ ಬಂದಾಗಲೂ ಕೂಡ ಹೆಣ್ಣು ಮಕ್ಕಳ ಬಗ್ಗೆ ಅತಿಯಾಗಿ ಯೋಚಿಸುವುದಿಲ್ಲ. ಇದರಿಂದಾಗಿ ಹಲವು ಶತಮಾನಗಳಿಂದಲೂ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂಬಂತೆ ಬಿಂಬಿಸಲಾಗಿದೆ. ಆದರೆ ಕಾನೂನಿನ ಪ್ರಕಾರ ಇದು ಎಷ್ಟು ಸರಿ? ಹೆಣ್ಣು ಮಕ್ಕಳು ತಮ್ಮ ಪೋಷಕರ ಆಸ್ತಿಯಲ್ಲಿ(Parental Property) ಎಷ್ಟೆಲ್ಲಾ ಅಧಿಕಾರವನ್ನು ಹೊಂದಿರುತ್ತಾರೆ? ಎಂಬುದರ ಸಂಪೂರ್ಣ ವಿವರವನ್ನು ತಿಳಿಯೋಣ ಬನ್ನಿ.
ವಿವಾಹಿತ / ಅವಿವಾಹಿತ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಪಾಲಿರಲಿದೆ!
ಸಾಮಾನ್ಯವಾಗಿ ಹೆಣ್ಣುಮಕ್ಕಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದನಂತರ ಮನೆಯ ಎಲ್ಲಾ ಆಸ್ತಿಗೆ ಮಗನನ್ನೇ ವಾರಸುದಾರನ್ನಾಗಿ ಮಾಡಿಬಿಡುತ್ತಾರೆ. ಆದರೆ ಭಾರತೀಯ ಆಸ್ತಿ ಕಾಯ್ದೆಯ (Indian Property Cct) ಪ್ರಕಾರ ಪೋಷಕರ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಹಕ್ಕಿರಲಿದೆ. ಇದು ವಿವಾಹಿತ ಹಾಗೂ ಅವಿವಾಹಿತ ಹೆಣ್ಣು ಮಕ್ಕಳಿಗೆ ಅನ್ವಯಿಸುತ್ತದೆ, ಆಕೆಯ ವಿವಾಹ ಸಂಬಂಧವು ಆಸ್ತಿ ಅರ್ಹತೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
ಹಿಂದೂ ಉತ್ತರಾಧಿಕಾರ ಕಾಯಿದೆ 1956 ನ್ನು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಲ್ಲಿ ಆಸ್ತಿ ವಿಭಜನೆ ಮತ್ತು ಉತ್ತರಾಧಿಕಾರದ ಸಮಸ್ಯೆಗಳನ್ನು ಬಗೆಹರಿಸಲು ಭಾರತದಲ್ಲಿ ಪರಿಚಯಿಸಲಾಯಿತು. ಈ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿರುವುದಿಲ್ಲ. ಅನಂತರ ತಿದ್ದುಪಡಿ ಮಾಡಲಾದ 2005ರ ಕಾಯ್ದೆಯ ಪ್ರಕಾರ ‘ಮನೆಯ ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಕೂಡ ಪೋಷಕರ ಆಸ್ತಿಯಲ್ಲಿ ಸಮಾನ ಪಾಲಿರಲಿದೆ’ ಎಂಬ ಕಾನೂನು ಜಾರಿಯಾಗುತ್ತದೆ.
ಈ ಸಂದರ್ಭದಲ್ಲಿ ಮಾತ್ರ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ದೊರಕುವುದಿಲ್ಲ!
ತಂದೆ ತನ್ನ ಸ್ವಂತ ಶ್ರಮದಲ್ಲಿ ಆಸ್ತಿಯನ್ನು ಸಂಪಾದಿಸಿದ್ದರೆ ಅದನ್ನು ಯಾರಿಗೆ ಹಂಚಬೇಕೆಂಬ ಹಕ್ಕು ಅವನಿಗಿರುತ್ತದೆ, ಹೀಗಿರುವಾಗ ಆತ ಬದುಕಿದ್ದಾಗಲೇ ತನ್ನ ಸಂಪೂರ್ಣ ಆಸ್ತಿಯ ಜವಾಬ್ದಾರಿಯನ್ನು ಮಗ ಅಥವಾ ಬೇರೆಯವರ ಹೆಸರಿನಲ್ಲಿ ವಿಲ್ ಮಾಡಿಸ್ಸಿದರೆ ಅಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಭಾಗ ದೊರಕುವುದಿಲ್ಲ. ಪೂರ್ವಜರ ಆಸ್ತಿಯಲ್ಲಿ(Ancestral Property) ಹೆಣ್ಣುಮಕ್ಕಳಿಗಾಗಲಿ ಅಥವಾ ಗಂಡು ಮಕ್ಕಳಿಗಾಗಲಿ ಸಮಾನ ಹಕ್ಕಿರಲಿದೆ, ಅದರಂತೆ ತಂದೆಯ ಆಸ್ತಿಯು ಕಾನೂನು ವಿವಾದದಲ್ಲಿದರೆ ಅದರ ಹಕ್ಕನ್ನು ಮಗಳು ಅಥವಾ ಇತರೆ ಕುಟುಂಬದ ಸದಸ್ಯರು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ತಮ್ಮ ಪೋಷಕರ ಆಸ್ತಿಯಲ್ಲಿ ಪಾಲನ್ನು ಪಡೆಯಬೇಕೆಂದು ಯೋಚಿಸುವಂತಹ ಹೆಣ್ಣು ಮಕ್ಕಳು ‘ಹಿಂದೂ ಉತ್ತರದಿಕಾರ ಕಾಯ್ದೆ’ (Hindu Succession Act) ಯ ನಿಬಂಧನೆಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು, ಕೋರ್ಟ್ ಮುಖಾಂತರವೇ ಆಸ್ತಿಯಲ್ಲಿ ನ್ಯಾಯಯುತ ಪಾಲನ್ನು ಪಡೆದುಕೊಳ್ಳಬಹುದು.