ಕಳೆದ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Nitin Gadkari) ರಾಜ್ಯಗಳ ಸಾರಿಗೆ ಸಚಿವರೊಂದಿಗೆ ಸಭೆಯೊಂದನ್ನು ಆಯೋಜಿಸಿ ರಸ್ತೆ ಅಪಘಾತದ ವಿಷಯವಾಗಿ ಮಹತ್ತರವಾದ ಹೊಸ ನೀತಿ ಒಂದನ್ನು ರೂಪಿಸಿದ್ದಾರೆ. ಇದರ ಅನ್ವಯ ರಸ್ತೆಯ ಅಪಘಾತಕ್ಕೆ(Road Accident) ಈಡಾದಂತಹ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಏಳು ದಿನಗಳವರೆಗೂ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ಅಪಘಾತವಾದ ಮಾಹಿತಿಯು 24 ಗಂಟೆ ಒಳಗೆ ಪೊಲೀಸರಿಗೆ ತಿಳಿದಿರಬೇಕು.
ದಿನದಿಂದ ದಿನಕ್ಕೆ ರಸ್ತೆ ಅಪಘಾತದಿಂದ ಮೃತ ಪಡುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೆ ಇದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ನಡೆಸಿದ ಸರ್ವೆಯೊಂದರ ಅನ್ವಯ 2024ರಲ್ಲಿಯೇ ಭಾರತದಾತ್ಯಂತ ಸುಮಾರು 1.8 ಲಕ್ಷ ಜನರು ರಸ್ತೆ ಅಪಘಾತದಿಂದಾಗಿ (Road Accident) ಸಾವಿಗೀಡಾಗಿದ್ದಾರೆ. ಅದರಲ್ಲೂ ಬಹು ಮುಖ್ಯವಾಗಿ ಶೇಕಡ 66 ಪರ್ಸೆಂಟ್ ಅಪಘಾತಗಳು 18 ರಿಂದ 34 ವರ್ಷದವರಿಂದಲೇ ಸಂಭವಿಸಿದೆ. ಹಾಗೂ ಸುಮಾರು 3000ಕ್ಕೂ ಅಧಿಕ ಸಂತ್ರಸ್ತರು ಹೆಲ್ಮೆಟ್ ಧರಿಸದೆ (Without Helmet) ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವು ಇಂತಹ ಸಂತ್ರಸ್ತರಿಗೆ ಆರ್ಥಿಕ (Financial Aid) ನೆರವನ್ನು ನೀಡಲು ಮುಂದಾಗಿದ್ದು, ಇದರಲ್ಲಿ ಯಾವೆಲ್ಲ ಸೌಲಭ್ಯಗಳು ಸಿಗಲಿದೆ ಹಾಗೂ ಎಷ್ಟು ಲಕ್ಷ ರೂಪಾಯಿಗಳವರೆಗೂ ಉಚಿತ ಚಿಕಿತ್ಸೆಯನ್ನು ನೀಡುತ್ತಾರೆ ಎಂಬ ವಿವರವನ್ನು ತಿಳಿಯೋಣ ಬನ್ನಿ.
ಅಪಘಾತದ ನಂತರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುವುದು ಹೇಗೆ?
ಭಾರತದ ಯಾವುದೇ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ, ಆ ಪ್ರಕರಣದ ಕುರಿತು 24 ಗಂಟೆ ಒಳಗೆ ಮೊದಲು ಪೊಲೀಸರಿಗೆ ಮಾಹಿತಿಯನ್ನು ತಿಳಿಸಿರಬೇಕು ಮತ್ತು ಗಂಭೀರವಾದ ಗಾಯಗೊಳಗಾದ ಸಂತ್ರಸ್ತರಿಗೆ (Victims) ಆಸ್ಪತ್ರೆಗಳಲ್ಲಿ ಸತತ ಏಳು ದಿನಗಳ ಕಾಲ ಅಥವಾ ಗರಿಷ್ಠ 1.5 ಲಕ್ಷಗಳವರೆಗೂ (1.5 lakh) ಉಚಿತ ಚಿಕಿತ್ಸೆಯನ್ನು ನೀಡಲಾಗುವುದು.
ಇದಷ್ಟೇ ಅಲ್ಲದೆ ಹಿಟ್ ಅಂಡ್ ರನ್ ಪ್ರಕರಣಗಳಿಂದ ಸಾವನ್ನಪ್ಪಿದಂತಹ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಎರಡು ಲಕ್ಷ ಹಣ ನೀಡಲಾಗುತ್ತದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ (Central Transport Minister Nitin Gadkari) ಎಲ್ಲಾ ರಾಜ್ಯದ ಸಾರಿಗೆ ಸಚಿವರಿಗೆ, ರಸ್ತೆಗಳಲ್ಲಿರುವಂತಹ ಬ್ಲಾಕ್ ಸ್ಪಾಟ್ ಅಥವಾ ಅಪಘಾತದ ಸ್ಥಳವನ್ನು ಹುಡುಕಿ ಅದನ್ನು ತಕ್ಷಣ ಸರಿಪಡಿಸಿಸುವಂತೆ ಕೇಳಿಕೊಂಡಿದ್ದಾರೆ.