ಸಾರಿಗೆ ಇಲಾಖೆ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಪಟ್ಟ ಹಾಗೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಆರ್ ಸಿ ಮತ್ತು ಡ್ರೈವಿಂಗ್ ಲೈಸೆನ್ಸ್ (RC–Driving License) ಪಡೆದುಕೊಳ್ಳುವುದಕ್ಕೆ ಆರ್ ಟಿ ಓ ಆಫೀಸ್ ಗೆ ಅಲೆದಾಡಬೇಕಿಲ್ಲ ಎಂದು ತಿಳಿಸಲಾಗಿದೆ.
ಆನ್ಲೈನಲ್ಲಿ ಅರ್ಜಿ ಸಲ್ಲಿಸಿ!
RC ಮತ್ತು ಡ್ರೈವಿಂಗ್ ಲೈಸೆನ್ಸ್ (RC–Driving License) ಪಡೆದುಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗಿದ್ದು, ಆನ್ಲೈನ್ ನಲ್ಲಿಯೇ ಇವುಗಳನ್ನು ಮುದ್ರಿಸಲಾಗುವುದು. ಇದರಿಂದ ನಾಗರಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸ್ಮಾರ್ಟ್ ಚಿಪ್ (Smart Chip) ಕಂಪನಿಯ ಒಪ್ಪಂದದ ಮುಕ್ತಾಯದ ನಂತರ ಈ ನಿಯಮ ಜಾರಿಗೆ ಬರಲಿದೆ. ಇದರಿಂದ ಅರ್ಜಿದಾರರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳಿದೆ.
ಈ ಹಿಂದೆ ಆರ್ಟಿಒ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಹಾಗೂ ಮತ್ತೆ ತರ ಪ್ರಕ್ರಿಯೆಯ ಮೂಲಕ ಆರ್ಸಿ ಮುದ್ರಣ ಮಾಡಲಾಗುತ್ತಿತ್ತು. ಈಗ ಯಾವುದೇ ಸರ್ಕಾರಿ ಕಚೇರಿಗೆ ಅಲೆಯದೆ ಆನ್ಲೈನ್ ಮೂಲಕವೇ ಸುಲಭವಾಗಿ ನಾಗರಿಕರು ತಮ್ಮ ಡ್ರೈವಿಂಗ್ ಲೈಸೆನ್ಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.